ಆಧಾರ್ ಕಾರ್ಡಲ್ಲಿ ಮೊಬೈಲ್ ನಂಬರ್ ತಪ್ಪಾಗಿದ್ರೆ ಸರಿಪಡಿಸುವುದು ಹೇಗೆ?

Date:

ಆಧಾರ್ ಎಂಬುದು ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ಬಹಳ ಪ್ರಮುಖವಾದ ದಾಖಲಾತಿಗಳಲ್ಲಿ ಆಧಾರ್ ಕೂಡ ಒಂದು. ಐಟಿಆರ್ ಅನ್ನು ಸಲ್ಲಿಸುವುದು ಮತ್ತು ಭಾರತದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಬಹಳ ಪ್ರಮುಖವಾದುದ್ದಾಗಿದೆ.  ಆಧಾರ್ ಕಾರ್ಡನ್ನು  ಕಡ್ಡಾಯವಾಗಿ ಹೊಂದುವುದು ಎಷ್ಟು ಮುಖ್ಯವೋ ಅಪ್ಡೇಟ್ ಮಾಡುವುದು ಕೂಡ ಅಷ್ಟೆ ಅತ್ಯಗತ್ಯ. ಆಧಾರ್ ನಲ್ಲಿನ ಮಾಹಿತಿ ವಿವರಗಳನ್ನು ಅಪ್ಡೇಟ್ ಮಾಡದಿದ್ದರೆ ಸರ್ಕಾರದ ಪ್ರಯೋಜನಗಳನ್ನು ಪಡೆಯೋದು ಕಷ್ಟವಾಗಬಹುದು.

ನಿಮ್ಮ ಆಧಾರ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡಬೇಕಾದಲ್ಲಿ ಮೊದಲಿಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಏಕೆಂದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹಾಗು ಸಂದೇಶಗಳು ಬರುತ್ತವೆ. ಕೆಲವು ಬಾರಿ ಆಧಾರ್ ನಲ್ಲಿ ನಮ್ಮ ಹಳೇಯ ನಂಬರ್ ಅಥವಾ ತಪ್ಪು ಮೊಬೈಲ್ ನಂಬರ್ ಆ್ಯಡ್ ಆಗಿರುತ್ತದೆ. ಹಾಗಿದ್ದರೆ, ಈ ಸಂದರ್ಭ ಆಧಾರ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ ಎಂಬುದನ್ನು ನೋಡೋಣ..

ನಿಮ್ಮ ಆಧಾರ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡಬೇಕಾದಲ್ಲಿ ಮೊದಲಿಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಏಕೆಂದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹಾಗು ಸಂದೇಶಗಳು ಬರುತ್ತವೆ. ಕೆಲವು ಬಾರಿ ಆಧಾರ್ ನಲ್ಲಿ ನಮ್ಮ ಹಳೇಯ ನಂಬರ್ ಅಥವಾ ತಪ್ಪು ಮೊಬೈಲ್ ನಂಬರ್ ಆ್ಯಡ್ ಆಗಿರುತ್ತದೆ. ಹಾಗಿದ್ದರೆ, ಈ ಸಂದರ್ಭ ಆಧಾರ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ ಎಂಬುದನ್ನು ನೋಡೋಣ..

ಮೊದಲು ನೀವು ನಿಮ್ಮ ಕಂಪ್ಯೂಟರ್ ನಲ್ಲಿ Aadhaar Self Service Update Portal ಗೆ ಭೇಟಿ ನೀಡಬೇಕು. ಇಲ್ಲವಾದಲ್ಲಿ ನೇರವಾಗಿ ಯುಐಡಿಎಐ ವೆಬ್ಸೈಟ್ (UIDAI website) ಗೆ ಹೋಗಿ. ಈ ಮೂಲಕ ಆಧಾರ್ ಆಧಾರ್ ಅಪ್ಡೇಟ್ ರಿಕ್ವೆಸ್ಟ್ (ಆನ್ಲೈನ್) ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಿನ ಬಲ ಬದಿಯಲ್ಲಿ ಮುಂದುವರಿಸಿ (proceed) ಮೇಲೆ ಕ್ಲಿಕ್ ಮಾಡಿ.

ನಿಮ್ಮ್ ಆಧಾರ್ ನಂಬರ್ ಮತ್ತು ವೆರಿಫಿಕೆಶನ್ ಕೋಡ್ ಕೊಟ್ಟ ಸ್ಥಳದಲ್ಲಿ ತುಂಬಿರಿ. ನಂತರ ಒಟಿಪಿ (OTP) ಮೇಲೆ ಕ್ಲಿಕ್ ಮಾಡಿ. ಮುಂದೆ, ನಿಮ್ಮ OTP ಅನ್ನು ಸಲ್ಲಿಸಿ, ಮತ್ತು ಹೊಸ ವಿವರಗಳನ್ನು ನವೀಕರಿಸಲು ಹೊಸ ಪುಟದ ಮೂಲಕ ಮುನ್ನಡೆಯಿರಿ. ಜೊತೆಗೆ ನೀವು ಹೆಸರು, ಲಿಂಗ, ಮೊಬೈಲ್, ವಿಳಾಸ, ಜನ್ಮ ದಿನ ಮತ್ತು ಇಮೇಲ್ ID ಅನ್ನು ನವೀಕರಿಸಬಹುದು. ಆದರೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುತ್ತಿರುವ ಕಾರಣ ಆಯ್ಕೆ ಕ್ಷೇತ್ರಗಳು ನವೀಕರಿಸಲು ಮೊಬೈಲ್ ಸಂಖ್ಯೆ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅಪ್ಡೇಟೆಡ್ ರಿಕ್ವೇಸ್ಟ್ ಅನ್ನು ಸಬ್ಮಿಟ್ ಮಾಡಿ.

ಇನ್ನೂ ಇಂಟರ್ನೆಟ್ ಸಂಪರ್ಕ ಇಲ್ಲವಾದಲ್ಲಿ ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಭೇಟಿ ಮಾಡಿ ಮತ್ತು ಆಧಾರ್ ಅಪ್ಡೇಟ್ / ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹತ್ತು ದಿನ ತೆಗೆದುಕೊಳ್ಳಬಹುದು. ನಿಮ್ಮ ಬಯೋಮೆಟ್ರಿಕ್ ಡಾಟಾವನ್ನು ಪರಿಶೀಲಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಸರ್ಕಾರಿ ಐಡಿ ಪುರಾವೆ (ಗುರುತಿನ ಚೀಟಿ) ಸಲ್ಲಿಸಬೇಕಾಗುತ್ತದೆ.

 

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....