ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆನ್ಲೈನ್ ಫುಡ್ ಡೆಲಿವರಿ ಬಾಯ್ಸ್ ಮೇಲೆ ಫುಲ್ ಗರಂ ಆಗಿದ್ದಾರೆ.
ಇತ್ತೀಚೆಗೆ ಆನ್ಲೈನ್ ಫುಡ್ ಡೆಲಿವರಿ ಬಾಯ್ಸ್ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವರ ಮೇಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗರಂ ಆಗಿದ್ದಾರೆ.
ಪಿಜ್ಜಾ ರೆಸ್ಟೋರೆಂಟ್ಗಳು 30 ನಿಮಿಷದ ಒಳಗೆ ಆರ್ಡರ್ ತಲುಪಿಸುತ್ತೇವೆ. ಒಂದು ವೇಳೆ 30 ನಿಮಿಷದಲ್ಲಿ ಆರ್ಡರ್ ತಲುಪಿಸಲು ಸಾಧ್ಯವಾಗಿಲ್ಲ ಅಂದ್ರೆ ಪಿಜ್ಜಾ ಫ್ರೀ ಎಂಬ ಹೊಸ ಆಫರನ್ನು ನೀಡಿವೆ. ಆದ್ದರಿಂದ ಕಂಪೆನಿಗಳು ಸಮಯಕ್ಕೆ ಆರ್ಡರ್ ತಲುಪಿಸಬೇಕೆಂದು ಡೆಲಿವರಿ ಬಾಯ್ಸ್ ಮೇಲೆ ಒತ್ತಡ ಹೇರುತ್ತವೆ. ಅದಕ್ಕಾಗಿ ಡೆಲಿವರಿ ಬಾಯ್ಸ್ ತಮ್ಮ ಪ್ರಾಣವನ್ನು ಲೆಕ್ಕಿಸದೇ ಟ್ರಾಫಿಕ್ ಸಿಗ್ನಲ್ಗಳನ್ನು ಜಂಪ್ ಮಾಡಿ ಹೋಗುತ್ತಾರೆ. ಹೀಗೆ ಅವರು ತಮ್ಮ ಪ್ರಾಣದ ಹಂಗು ತೊರೆದು ಪಿಜ್ಜಾ ಡೆಲಿವರಿ ಮಾಡೋದಾದ್ರೆ ಇವರಿಂದ ಫ್ರೀಯಾಗಿ ಪಿಜ್ಜಾ ತೆಗೆದುಕೊಳ್ಳಲು ಹೇಗೆ ಮನಸ್ಸು ಬರುತ್ತದೆ. ಹೀಗಾಗಿ 30 ನಿಮಿಷದಿಂದ 40 ನಿಮಿಷಕ್ಕೆ ಹೆಚ್ಚಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
Do we have the heart to get a free pizza from a kid who is risking his life just because he crossed over 30 mns. Am seriously considering asking Pizza companies to make it 40 mns as these kids risk their lives by breaking all Traffic rules.
— Bhaskar Rao (@Nimmabhaskar22) January 21, 2020
ಭಾಸ್ಕರ್ ರಾವ್ ಟ್ವೀಟ್ಗೆ ಕೆಲವರು ಕಮೆಂಟ್ ಮಾಡಿದ್ದು, ಸ್ವಿಗ್ಗಿ ಹಾಗೂ ಜೊಮ್ಯಾಟೋ ಡೆಲಿವರಿ ಬಾಯ್ಸ್ ಓವರ್ ಟೇಕ್ ಮಾಡೋದಲ್ಲದೆ ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್ ಸಿಗ್ನಲ್ಗಳನ್ನು ಉಲ್ಲಂಘಿಸುವುದನ್ನು ನಾವು ನೋಡಿದ್ದೇವೆ ಎಂದು ಸಾರ್ವಜಿಕರು ಹೇಳಿದ್ದಾರೆ. ಅದಕ್ಕೆ ರಿಪ್ಲೈ ಮಾಡಿದ ಸ್ವಿಗ್ಗಿ, ನಮ್ಮ ಡೆಲಿವರಿ ಬಾಯ್ಸ್ ಟ್ರಾಫಿಕ್ ಉಲ್ಲಂಘನೆ ಮಾಡಲ್ಲ. ಒಂದು ವೇಳೆ ಉಲ್ಲಂಘನೆ ಮಾಡಿರೋದು ಕಂಡು ಬಂದರೆ ನಮ್ಮ ಗಮನಕ್ಕೆ ತನ್ನಿ ಎಂದಿದೆ. ಇದರಿಂದ ಭಾಸ್ಕರ್ ರಾವ್ ಗರಂ ಆಗಿದ್ದು, ಅದಕ್ಕೆ ಪ್ರತ್ಯುತ್ತರ ನೀಡಿ ಟ್ವೀಟ್ ಮಾಡಿದ್ದಾರೆ.
ಅತೀ ಹೆಚ್ಚು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡೋದು ನೀವೇ. ಹಾಗಿದ್ದು ನಿಯಮ ಪಾಲನೆ ಮಾಡ್ತಿದ್ದೀವಿ ಅಂತ ಹೇಳೋ ಧೈರ್ಯನಾ ಅಂತ ಕೇಳಿದ್ದಾರೆ. ನಿಮ್ಮ ಡೆಲಿವರಿ ಬಾಯ್ಸ್ ಸಿಕ್ಕಿಬಿದ್ದಾಗ ನಮ್ಮನ್ನು ಬಿಟ್ಟುಬಿಡಿ ಅಂತ ಟ್ರಾಫಿಕ್ ಪೊಲೀಸರ ಬಳಿ ಕೇಳಿಕೊಳ್ತಾರೆ. ಮುಂದಿನ ಬಾರಿ ಡೆಲಿವರಿ ಬಾಯ್ಸ್ಗೆ ಅಪಘಾತವಾದರೆ, ನಿಮ್ಮ ಮ್ಯಾನೇಜ್ಮೆಂಟ್ ಜೈಲಿನ ಕಂಬಿ ಹಿಂದೆ ಇರೋದು ಗ್ಯಾರಂಟಿ ಅಂತ ಎಚ್ಚರಿಕೆ ನೀಡಿದ್ದಾರೆ.
Hi there, we understand your concern. We do not condone traffic violations of any nature. If you witness the same, please highlight it to us by contacting us at 080-46866699. Have a good day ahead.
^Meg
— Swiggy Cares (@SwiggyCares) January 21, 2020