ಆರೋಗ್ಯವಾಗಿದ್ದಾರೆ ನಡೆದಾಡುವ ದೇವರು .. ವೈದ್ಯರು ಸ್ಪಷ್ಟನೆ..
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ತಮಿಳುನಾಡಿನಲ್ಲಿ ಚಿಕಿತ್ಸೆಗೆ ಒಳಗಾಗಿ ಮತ್ತೆ ಮಠಕ್ಕೆ ವಾಪಸ್ ಆಗಿದ್ದಾರೆ.. ಸದ್ಯ ಮತ್ತೆ ಅನಾರೋಗ್ಯದ ಕಾರಣ ಬಿಜಿಎಸ್ ಆಸ್ಪತ್ರೆ ವೈದ್ಯರು ಶ್ರೀಗಳಿಗೆ ಮಠದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ… ಇಂದು ಸಂಜೆ ಕೂಡ ಶ್ರೀಗಳನ್ನ ಒಂದು ಗಂಟೆ ಕಾಲ ತಪಾಸಣೆ ಮಾಡಲಾಗಿದೆ..
ಸೋಂಕು ಮತ್ತು ಕೆಮ್ಮಿನಿಂದ ಬಳಲುತ್ತಿರುವ ಶ್ರೀಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರಾದ ಡಾ.ರವೀಂದ್ರ.. ಶ್ರೀಗಳಿಗೆ ಶಸ್ತ್ರಚಿಕಿತ್ಸೆಯ ಗಾಯಗಳು ವಾಸಿಯಾಗಿದೆ.. ಶ್ವಾಸಕೋಶದಲ್ಲಿ ಸ್ವಲ್ಪ ನೀರು ಸೇರಿಕೊಳ್ಳುತ್ತಿದೆ.. ಸದ್ಯ ಟ್ಯೂಬ್ ನ ಮುಖಾಂತರ ಆಹಾರವನ್ನ ನೀಡಲಾಗುತ್ತಿದ್ದು, ಆಹಾರವನ್ನ ಸೇವಿಸುತ್ತಿದ್ದಾರೆ ಎಂದಿದ್ದಾರೆ..