ಆರ್ಸಿಬಿ ಕೆಣಕಿದ ವಾರ್ನರ್ ಗತಿ ಅಯ್ಯೋ ಪಾಪ

Date:

ಜೀವನದಲ್ಲಿ ಇನ್ನೊಬ್ಬರ ಪರಿಸ್ಥಿತಿಯನ್ನು ನೋಡಿ ಹೀಯಾಳಿಸಬಾರದು, ಕಾಲೆಳೆಯಬಾರದು ಮತ್ತು ಆಡಿಕೊಳ್ಳಬಾರದು ಎಂದು ದೊಡ್ಡವರು ಹೇಳುತ್ತಾರೆ. ಏಕೆಂದರೆ ಮುಂದೊಂದು ದಿನ ಅವರು ಎದುರಿಸುತ್ತಿರುವ ಪರಿಸ್ಥಿತಿ ಸುಧಾರಿಸುವವರೆಗೂ ಸಹ ಬರಬಹುದು ಎಂದು.. ಯಾರನ್ನೇ ಆಗಲಿ ಹೀಯಾಳಿಸುತ್ತಾ ಮೆರೆಯಬೇಡ ಮುಂದೊಂದು ದಿನ ಕರ್ಮ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಮಾತು ಡೇವಿಡ್ ವಾರ್ನರ್ ಅವರ ಐಪಿಎಲ್ ಜೀವನದಲ್ಲಿ ನಿಜವಾದಂತಿದೆ…

 

 

ಕಳೆದ ಬಾರಿಯ ಏಪ್ರಿಲ್ ತಿಂಗಳಿನಲ್ಲಿ ಡೇವಿಡ್ ವಾರ್ನರ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಬಾರಿ ಯಾವ ತಂಡ ಕಪ್ ಗೆಲ್ಲಲಿದೆ ಎಂಬ ಪ್ರಶ್ನೆಯನ್ನು ಹಾಕಿದ್ದರು.. ಈ ಪ್ರಶ್ನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯೊಬ್ಬ ಆರ್ ಸಿಬಿ ಎಂದು ಕಾಮೆಂಟ್ ಮಾಡಿದ್ದ. ಆರ್ ಸಿಬಿ ಅಭಿಮಾನಿ ಮಾಡಿದ್ದ ಆ ಕಾಮೆಂಟ್ ಗೆ ಡೇವಿಡ್ ವಾರ್ನರ್ ನಿಜವಾಗಿಯೂ?? (Really??) ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಪ್ ಗೆಲ್ಲುವ ತಾಕತ್ತು ಇಲ್ಲದ ತಂಡ ಇಂದು ಹೀಯಾಳಿಸಿ ರಿಪ್ಲೈ ಮಾಡಿದ್ದರು.

 

 

 

 

ಅದೇ ವಾರ್ನರ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ನಾಯಕ ನಾಯಕಿ ಹಾಗೂ ಉಳಿದ ಬ್ಯಾಟ್ಸ್ ಮನ್ ಆಗಿ ಕಳಪೆ ಪ್ರದರ್ಶನವನ್ನು ನೀಡುವುದರ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ವಜಾಗೊಂಡಿದ್ದಾರೆ. ಸರಿಯಾಗಿ ನಾಯಕತ್ವವನ್ನು ನಿಭಾಯಿಸದ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದ್ರಾಬಾದ್ ಮ್ಯಾನೇಜ್ಮೆಂಟ್ ನಾಯಕತ್ವದಿಂದ ಕಿತ್ತು ಬಿಸಾಕಿದೆ. ಅಷ್ಟೇ ಅಲ್ಲದೇ ಇಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಹ ವಾರ್ನರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ ಹೀಗಾಗಿ ವಾರ್ನರ್ ಬೌಂಡರಿ ಲೈನ್ ನಲ್ಲಿ ಬಾಲ್ ಬಾಯ್ ಮತ್ತು ವಿರಾಮದ ವೇಳೆ ವಾಟರ್ ಬಾಯ್ ಆಗಿ ಕಾರ್ಯನಿರ್ವಹಿಸಿದರು.

 

 

 

ವಾರ್ನರ್ ಅವರ ಈ ಸ್ಥಿತಿ ನೋಡಿ ಅಂದು ನಮ್ಮ ತಂಡವನ್ನು ಹೀಯಾಳಿಸಿದ ವಾರ್ನರ್ ಇದೀಗ ಬೌಂಡರಿಲೈನ್ ನಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡುತ್ತಾ ಸಪ್ಪೆ ಮುಖ ಹಾಕಿಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ, ಅಂದು ನಮ್ಮ ತಂಡವನ್ನು ಹೀಯಾಳಿಸಿದ್ದಕ್ಕೆ ಇಂದು ಈ ಪರಿಸ್ಥಿತಿ ವಾರ್ನರ್ ಗೆ ಬಂದಿದೆ ಎಂದು ಕೆಲ ಆರ್ ಸಿಬಿ ಅಭಿಮಾನಿಗಳು ವಾರ್ನರ್ ಅವರ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...