ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6 ಪಂದ್ಯಗಳಲ್ಲೂ ಸೋಲನುಭವಿಸಿದೆ. ಇದರ ಬಿಸಿ ವಿಶ್ವಕಪ್ಗೂ ತಟ್ಟಿದೆ.
ವಿಶ್ವಕಪ್ಗೂ, ಐಪಿಎಲ್ಗೂ ಏನ್ ಸಂಬಂಧ ಅಂತಾನಾ? ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯೇ ಆರ್ಸಿಬಿ ಕ್ಯಾಪ್ಟನ್..! ಆದರೆ, ಐಪಿಎಲ್ನಲ್ಲಿ ನಾಯಕನಾಗಿ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದ್ದರಿಂದ ವಿಶ್ವಕಪ್ಗೆ ಕೊಹ್ಲಿ ನಾಯಕರಾಗಿ ಇರುವುದು ಬೇಡ ಎನ್ನುವ ಅಭಿಪ್ರಾಯ ಮೂಡಿದೆ.
ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ವರ್ಲ್ಡ್ಕಪ್ಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಲಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನಲ್ಲಿ ಒಳ್ಳೆಯ ಪ್ರದರ್ಶನವನ್ನು ನೀಡುತ್ತಿದ್ದು, ರೋಹಿತ್ ಶರ್ಮಾಗೆ ಪಂದ್ಯವನ್ನು ಗೆಲ್ಲಿಸುವ ಕಲೆ ಗೊತ್ತಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ರೋಹಿತ್ ಅವರನ್ನ ವಿಶ್ವಕಪ್ಗೆ ಕ್ಯಾಪ್ಟನ್ ಆಗಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.
ಆರ್ಸಿಬಿ ಫೇಲ್ಯೂರ್ ಬಿಸಿ ವಿಶ್ವಕಪ್ಗೂ ತಟ್ಟಿತು..!
Date: