ಆಸ್ಪತ್ರೆ ಬೆಡ್ ನಲ್ಲೇ ವಧುವಿಗೆ ತಾಳಿಕಟ್ಟಿದ..!

Date:

ತಿರುವನಂತಪುರಂ: ಅನೇಕ ಮಂದಿ ನನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂದು ಕನಸು ಕಾಣುತ್ತಾರೆ. ಆದರೆ ಇದರಲ್ಲಿ ಕೆಲವರಿಗೆ ನಿರಾಸೆ ಕೂಡ ಆಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡ ತನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂಬ ಕನಸು ಕಂಡಿದ್ದ. ಆದರೆ ವಿಧಿಯಾಟವೇ ಬೇರೆ ಆಗಿದ್ದು, ಆಸ್ಪತ್ರೆ ಬೆಡ್ ನಿಂದಲೇ ಆತ ವಧುವಿಗೆ ತಾಳಿ ಕಟ್ಟುವ ಸ್ಥಿತಿ ಎದುರಾಗಿದೆ.

ಹೌದು. ಕೇರಳದ ವೆಂಬಾಯಮ್ ನಲ್ಲಿ ಈ ಘಟನೆ ನಡೆದಿದೆ. ಮನೋಜ್ ಹಾಗೂ ರೇವತಿ ಆಸ್ಪತ್ರೆಯಲ್ಲಿ ವಿಶೇಷವಾಗಿ ಮದುವೆಯಾಗುವ ಮೂಲಕ ಸದ್ಯ ಸುದ್ದಿಯಾಗಿದ್ದಾರೆ.

ಮನೋಜ್ ಹಾಗೂ ರೇವತಿಯ ಮದುವೆ ಫೆಬ್ರವರಿ 4ರಂದು ನಡೆಯಬೇಕಿತ್ತು. ಆದರೆ ಈ ಮಧ್ಯೆ ಮನೋಜ್ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯ ಬಂತು. ಈ ಹಿನ್ನೆಲೆಯಲ್ಲಿ ಮದುವೆಯ ಕನಸು ಕಂಡಿದ್ದ ಮನೋಜ್ ಆಸ್ಪತ್ರೆಗೆ ದಾಖಲಾದರು. ಈ ಮೂಲಕ ಎರಡು ಕುಟುಂಬಗಳ ಅದ್ಧೂರಿ ಮದುವೆಗೆ ತಣ್ಣೀರೆರಚಿದಂತಾಗಿತ್ತು. ಆದರೂ ಈ ನಿರಾಸೆಯನ್ನು ಬದಿಗೊತ್ತಿ ಎರಡು ಕುಟುಂಬಗಳು ಕೂಡ ತಮ್ಮ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದರು.

ಅಂತೆಯೇ ಫೆಬ್ರವರಿ 6ರಂದು ಖಾಸಗಿ ಆಸ್ಪತ್ರೆಯಲ್ಲಿಯೇ ವಿಶೇಷವಾಗಿ ವಿವಾಹ ಸಮಾರಂಭ ನೆರವೇರಿಸಿದ್ದಾರೆ. ಇಬ್ಬರ ಕುಟುಂಬ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್ ಹಾಗೂ ರೇವರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಸ್ಪತ್ರೆಯ ರೂಮನ್ನು ಮದುವೆ ಮಂಟಪವಾಗಿ ಮಾರ್ಪಾಡು ಮಾಡಿ ವಧು ಹಾಗೂ ವರರ ಮದುವೆ ನೆರವೇರಿಸಲಾಗಿದೆ. ಬೆಡ್ ನಲ್ಲಿ ಮಲಗಿದ್ದಲ್ಲಿದ್ದಂದ್ಲೇ ಮನೋಜ್ ಅವರು ರೇವತಿಗೆ ತಾಳಿ ಕಟ್ಟಿದರು. ಈ ಕ್ಷಣ ನೆರೆದಿದ್ದವರ ಕಣ್ಣೀರು ತರಿಸಿತು. ವಿವಾಹ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಇಓ ಡಾ. ಪಿ ಅಶೋಕ್, ಡಾ. ಲೈಜಾ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...