ಆ ಒಂದೇ ಒಂದು ಘಟನೆಯಿಂದ ಅಪ್ಪನ ಜೊತೆಯೂ ಇರಲು ಭಯವಾಯ್ತು ಅಂದ ಸ್ಟಾರ್ ನಟಿ!

Date:

ಆ ಒಂದೇ ಒಂದು ಘಟನೆಯಿಂದ ಅಪ್ಪನ ಜೊತೆಯೂ ಇರಲು ಭಯವಾಯ್ತು ಅಂದ ಸ್ಟಾರ್ ನಟಿ!

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಈಗಾಗಲೇ ಸಾಕಷ್ಟು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇದು ಕೇವಲ ನಟಿಯರಿಗೆ ಮಾತ್ರ ಸೀಮಿತ ಆಗಿಲ್ಲ, ಪುರುಷರಿಗೂ ಅನುಭವ ಆಗಿದೆ ಎಂಬುದನ್ನು ನೆನಪಿಡಬೇಕು. ಇತ್ತೀಚೆಗೆ ನಟಿ ಆರಾಧನಾ ಶರ್ಮಾ ಕೂಡ ಮಾಡೆಲಿಂಗ್ ಮಾಡುವಾಗ ಈ ರೀತಿಯದ್ದೇ ಆದ ಅನುಭವ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಆರಾಧನಾ “ನನ್ನ ಜೀವನದಲ್ಲಿ ನಡೆದ ಭಯಂಕರವಾದ ಘಟನೆ ಅದು. 5 ವರ್ಷಗಳ ಹಿಂದೆ ರಾಂಚಿಯಲ್ಲಿ ಆ ಘಟನೆ ನಡೆದಿತ್ತು. ಪುಣೆಯಲ್ಲಿ ಓದುತ್ತಿದ್ದಾಗ ರಾಂಚಿಯಲ್ಲಿ ಆಡಿಶನ್ ಇದೆ ಎಂದು ಗೊತ್ತಾಯ್ತು. ಹಾಗಾಗಿ ಅಲ್ಲಿ ಹೋಗಿದ್ದೆ” ಎಂದು ಆರಾಧನಾ ಹೇಳಿಕೊಂಡಿದ್ದಾರೆ.
“ಆಗ ನಾನು ಮಾಡೆಲಿಂಗ್ ಜಗತ್ತಿಗೆ ತುಂಬ ಹೊಸಬಳಾಗಿದ್ದೆ. ನನಗೆ ಸ್ವಲ್ಪ ಅದರ ಬಗ್ಗೆ ಗೊತ್ತಿತ್ತು. ಆಡಿಶನ್ ವೇಳೆ ರೂಮ್‌ನಲ್ಲಿ ನಾವು ಸ್ಕ್ರಿಪ್ಟ್ ಓದುತ್ತಿದ್ದೆವು. ಅನುಚಿತವಾಗಿ ಒಬ್ಬ ವ್ಯಕ್ತಿ ನನ್ನ ಮುಟ್ಟಿದ. ಆಗ ಅವನನ್ನು ಒದ್ದು ಬಾಗಿಲು ತೆರೆದು ಓಡಿ ಹೊರಗಡೆ ಬಂದೆ. ಅನೇಕ ದಿನಗಳ ಕಾಲ ನಾನು ಅದನ್ನು ಯಾರ ಬಳಿಯೂ ಹೇಳಿರಲಿಲ್ಲ” ಎಂದು ಆರಾಧನಾ ಹೇಳಿದ್ದಾರೆ.


ಈ ಘಟನೆ ನಡೆದ ನಂತರದಲ್ಲಿ ಆರಾಧನಾ ಅವರಿಗೆ ಪುರುಷರ ಮೇಲೆ ನಂಬಿಕೆಯೇ ಹೋಯ್ತಂತೆ. ರೂಮ್‌ನಲ್ಲಿ ಅಪ್ಪನ ಜೊತೆ ಇರಲು ಕೂಡ ಆರಾಧನಾಗೆ ಹಿಂಸೆ ಆಗುತ್ತದೆಯಂತೆ. “ನಟನೆ ರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ತುಂಬ ಕಷ್ಟವಾಯ್ತು. ಅನೇಕ ಕಾಸ್ಟಿಂಗ್ ಏಜೇನ್ಸಿಗಳಿಗೆ ನನ್ನ ಫೋಟೋ, ಬಯೋಡಾಟಾ ಕಳಿಸುತ್ತಲಿದ್ದೆ. ಆಗ ಒಮ್ಮೆ ನೀನು ಅಷ್ಟು ಚೆನ್ನಾಗಿಲ್ಲ ಅಂತ ಒಬ್ಬರು ಹೇಳಿದರು” ಎಂದು ಕರಾಳ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಮಾರ್ಶಿಯಲ್ ಆರ್ಟ್ಸ್ ಕಲಿತಿರುವ ಆರಾಧನಾ ಫಿಟ್‌ನೆಸ್‌ಗೆ ಹೆಚ್ಚು ಗಮನ ನೀಡುತ್ತಾರೆ. ಕೆಲವರು ಆರಾಧನಾಗೆ ಪುರುಷರ ರೀತಿ ಕಾಣಿಸುತ್ತೀಯಾ ಎಂದು ಕೂಡ ಕಾಮೆಂಟ್ ಮಾಡಿದ್ದರಂತೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...