ಮಂಗೇಶ್ ಗಿಲ್ದಿಯಾಲ್. ಉತ್ತರ ಪ್ರದೇಶದ ರುದ್ರಪ್ರಯಾಗ ಜಿಲ್ಲೆಯ ಐಎಎಸ್ ಆಫೀಸರ್. ಇವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಗಿಲ್ದಿಯಾಲ್ ಅವರು ಸಾಮಾಜಿಕ ಕಳಕಳಿ ತೋರಿಸಿದ ಮಹಾನ್ ವ್ಯಕ್ತಿ. ತನ್ನ ಪತ್ನಿ ಉಷಾ ಅರ್ಹತೆ ಪಡೆದುಕೊಂಡಿರುವುದರಿಂದ, ಬಾಲಕಿಯರ ಶಾಲೆಯೊಂದರಲ್ಲಿ ವಿಜ್ಞಾನ ಬೋಧನೆ ಮಾಡಲು ಸ್ವಯಂ ಸೇವಕಿಯಾಗಿ ಕಳುಹಿಸಿದ್ದಾರೆ. ಉಷಾ ಪೆಥಾಲಜಿಯಲ್ಲಿ ಪಿಎಚ್ ಡಿ ಪದವಿ ಕೂಡ ಪಡೆದುಕೊಂಡಿದ್ದಾರೆ.
ಮಂಗೇಶ್ ಅವರು, ಒಮ್ಮೆ ರುದ್ರಪ್ರಯಾಗದ ರಾಜ್ ಕಿಯಾ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ವಿಜ್ಞಾನ ಬೋಧಿಸಲು ಅಧ್ಯಾಪಕರು ಇಲ್ಲದೆ ಇರುವುದು ಗಮನಕ್ಕೆ ಬಂತು. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನವೂ ತುಂಬಾ ಮುಖ್ಯವಾಗಿರುತ್ತದೆ. ಈ ಹೊತ್ತಿನಲ್ಲೆ ತನ್ನ ಪತ್ನಿಯನ್ನು ಈ ಕೆಲಸಕ್ಕೆ ಹೋಗುವಂತೆ ಕೇಳಿಕೊಳ್ಳುತ್ತಾರೆ. ಪತ್ನಿ ತನ್ನ ಪತಿಯ ಬೇಡಿಕೆಯನ್ನು ಈಡೇರಿಸುತ್ತಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಅವರ ಪತ್ನಿ ಉಷಾ ಅವರು ಈಗ ದಿನವೊಂದಕ್ಕೆ ಎರಡೂವರೆ ಗಂಟೆಗಳನ್ನು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಮೂಲಕ ಪತಿಯ ಸಾಮಾಜಿಕ ಕೆಲಸಗಳಲ್ಲಿ ತನ್ನ ಕೈ ಕೂಡ ಜೋಡಿಸಿದ್ದಾರೆ. ಉಷಾ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
2011ರ ಬ್ಯಾಚ್ ನ ಐಎಎಸ್ ಆಫೀಸರ್ ಆಗಿರುವ ಮಂಗೇಶ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದರು. ತನ್ನ ಕೆಲಸಗಳಿಂದ ಮಂಗೇಶ್ ಜನರ ಮನಸ್ಸಿನಲ್ಲಿ ಹೀರೋ ಆಗಿ ಬೆಳೆದ್ರು. ಭಾಗೇಶ್ವರ ಜಿಲ್ಲೆಯಿಂದ ಮಂಗೇಶ್ ಗೆ ವರ್ಗಾವಣೆ ಆದೇಶ ಬಂದಿದ್ದಾಗ ಜನ ಆ ಆದೇಶದ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ಇದು ಅವರ ಕೆಲಸದ ಶ್ರದ್ಧೆಗೆ ಹಿಡಿದ ಕೈಗನ್ನಡಿ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಮಂಗೇಶ್ ಉತ್ತರಾಖಂಡದಲ್ಲಿ ಶಾಲೆಗಳನ್ನು ಉತ್ತಮ ಗುಣಮಟ್ಟಕ್ಕೆ ತರಲು ಶ್ರಮಿಸುತ್ತಿದ್ದಾರೆ. ಮಂಗೇಶ್ ಯೋಜನೆಗಳು ಮತ್ತು ಯೋಜನೆಗಳು ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಸಂಶಯವಿಲ್ಲ.