ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!

Date:

ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!

ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ಕನ್ನಡ ಸುದ್ದಿವಾಹಿನಿ ಇರಲಿದೆ..!
ಹೌದು ಕನ್ನಡ ಮಾಧ್ಯಮ ಲೋಕಕ್ಕೆ ನ್ಯೂಸ್ ಫಸ್ಟ್ ಎಂಬ ಹೊಸ ಚಾನಲ್ ಸೇರ್ಪಡೆಯಾಗುತ್ತಿದೆ. ಕಳೆದು 2-3 ವರ್ಷಗಳಿಂದ ಡಿಜಿಟಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿರುವ ನ್ಯೂಸ್ ಫಸ್ಟ್ 24*7 ಸುದ್ದಿವಾಹಿನಿಯಾಗಿ‌ ಇವತ್ತಿಂದ ನಿಮ್ಮ ಮನೆ ಮನವನ್ನು ತಲುಪಲಿದೆ.
ಪ್ರತಿಕ್ಷಣ ನಿಮ್ಮೊಂದಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ನ್ಯೂಸ್ ಫಸ್ಟ್ ಕಾರ್ಯಾರಂಭ ಮಾಡುತ್ತಿದೆ.
ಕನ್ನಡದ ನಂಬರ್ 1 ನ್ಯೂಸ್ ಚಾನಲ್ ಕಟ್ಟಿದ ತಂಡದ ಹೊಸ ಸಾಹಸವೇ ಈ ನ್ಯೂಸ್ ಫಾಸ್ಟ್. ಓಲೆಕಾಂ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮಾಲೀಕತ್ವದ ಸಂಸ್ಥೆ ಇದಾಗಿದ್ದು, ಎಲ್ಲಾ ಡಿಟಿಹೆಚ್ ಹಾಗೂ ಕೇಬಲ್ ಚಾನಲ್ ಗಳಲ್ಲಿ ಲಭ್ಯವಿರಲಿದೆ.
ತಮ್ಮ ಹೊಸ ಚಾನಲ್ ಬಗ್ಗೆ ಮಾತಾಡಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ರವಿಕುಮಾರ್, ” ಕರ್ನಾಟಕದ ವಿದ್ಯುನ್ಮಾನ ಮಾಧ್ಯಮದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ನ್ಯೂಸ್ ಚಾನಲ್ ಗಳಿದ್ದು, ತೀವ್ರ ಸ್ಪರ್ಧೆ ಇದೆ. ಆದರೆ, ಸುದ್ದಿಯ ಆಯ್ಕೆ ಮತ್ತು ಅದರ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಗುಣಮಟ್ಟ ಚೆನ್ನಾಗಿದ್ದಾರೆ ಜನ ಮೆಚ್ಚುತ್ತಾರೆ ಎಂಬ ನಂಬಿಕೆ‌‌ ನಮ್ಮದು” ಎಂದು ಹೇಳಿದ್ದಾರೆ.

ನ್ಯೂಸ್ ಫಸ್ಟ್ ಬಗ್ಗೆ ನಿರೀಕ್ಷೆ ಮತ್ತು ಕುತೂಹಲಕ್ಕೆ ಇದೇ ಕಾರಣ ..!

ಸ್ಟಾರ್ ನಟ – ನಟಿಯ ಸಿನಿಮಾ  ಅನೌನ್ಸ್ ಆಗಿ , ಸೆಟ್ಟೇರಿದ್ದಲ್ಲಿಂದಲೂ ಸಖತ್ ಸದ್ದು ಮಾಡುತ್ತಲೇ ಇರುತ್ತೆ.. ಯಾವಾಗಪ್ಪ ಸಿನಿಮಾ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿರ್ತಾರೆ . ಇಂಥಾ ಕ್ಯೂರಿಯಾಸಿಟಿ ಯಾವ್ದಾದ್ರು ಕಂಪನಿ, ಚಾನಲ್ ವಿಚಾರದಲ್ಲಿ ಇರುತ್ತಾ…!? ಸಾಧ್ಯನೇ ಇಲ್ಲ..! ಆದ್ರೆ ಕನ್ನಡ ಸುದ್ದಿ ವಾಹಿನಿಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆ ಆಗ್ತಿರೋ ನ್ಯೂಸ್ ಫಸ್ಟ್ ಅಂತಹದ್ದೊಂದು ಕುತೂಹಲ ನಿರೀಕ್ಷೆಯನ್ನು ಹುಟ್ಟು ಹಾಕಿದೆ…! ಈಗಾಗಲೇ ಡಿಜಿಟಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿರೋ ನ್ಯೂಸ್ ಫಸ್ಟ್ ನ್ಯೂಸ್ ಚಾನಲ್ ಆಗಿ ಮನೆ ಮನೆ ತಲುಪುವ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇಂದಿನಿಂದ ನ್ಯೂಸ್ ಫಸ್ಟ್ ಕನ್ನಡಿಗರ ಮನೆ ತಲುಪಲಿದೆ..!

ಹೌದು, ಮೂರು ವರ್ಷದ ಹಿಂದೆ , ಅಂದ್ರೆ 2017ರ ಸೆಪ್ಟೆಂಬರ್ 23 ರಂದು ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಇದು ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಸಂಚಲವನ್ನುಂಟು ಮಾಡಿದ್ದ ಸುದ್ದಿ. ಟಿವಿ9ನಿಂದ ಚೀಫ್ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ರವಿಕುಮಾರ್ ಮತ್ತು ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಮಾರುತಿ ಹೊರಬಂದಿದ್ದರು. ಈ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಟೈಮ್ಸ್ ನಲ್ಲಿ ನೀವು ಓದಿದ್ರಿ.

ಟಿವಿ9 ಆರಂಭದಿಂದಲೂ ಜೊತೆಯಾಗಿದ್ದ ಇವರಿಬ್ಬರು ಒಟ್ಟಿಗೇ ರಾಜೀನಾಮೆ ನೀಡಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇವರು ಟಿವಿ9 ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ತೆರೆಮರೆಯ ಹೀರೋಗಳು. ಇವರ ಸಾಮರ್ಥ್ಯ ಎಂತಹದ್ದು ಅನ್ನೋದು ಮಾಧ್ಯಮ ಲೋಕಕ್ಕೆ ಚೆನ್ನಾಗಿ ಗೊತ್ತಿದೆ.
ಇವರಿಬ್ಬರು 2006ರ ಮಾರ್ಚ್ 1ರಂದು ಟಿವಿ9 ಗೆ ಸೇರಿದ್ದರು.  ಸುಧೀರ್ಘ 12 ವರ್ಷಗಳ ಕಾಲ ಟಿವಿ9ನಲ್ಲಿ ಸೇವೆಸಲ್ಲಿಸಿದ್ದರು. ರಾಜಕೀಯ ವಲಯದಲ್ಲಿ ಪ್ರಮುಖ ಪಕ್ಷಗಳ ನಾಯಕರುಗಳು ಹೇಗೋ? ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್‍ ಗಳು ಹೇಗೋ ಹಾಗೆ ಪತ್ರಿಕೋದ್ಯಮದಲ್ಲಿ ರವಿಕುಮಾರ್ ಮತ್ತು ಮಾರುತಿ!

ವಿಶೇಷವೆಂದರೆ ಇವರಿಬ್ಬರು ಬಹುಕಾಲದ ಆತ್ಮೀಯ ಸ್ನೇಹಿತರು. ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ ಇವರು, ಒಟ್ಟಿಗೆಯೇ ಈ-ಟಿವಿಯಲ್ಲಿ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಟಿವಿ9 ಸಂಸ್ಥೆ ಆರಂಭವಾಗುವಾಗ ಮೊದಲ ದಿನದಿಂದಲೇ ಸಂಸ್ಥೆಯ ಜೊತೆ ಇದ್ದವರು. ಟಿವಿ9ನ ಆಧಾರಸ್ತಂಭಗಳಾಗಿದ್ದವರು.

ದೃಶ್ಯಮಾಧ್ಯಮ ಜಗತ್ತಿನಲ್ಲಿ ಉತ್ತುಂಗದ ಶಿಖರದಲ್ಲಿರುವ ಪ್ರಮುಖ ಹೆಸರೇ ರವಿಕುಮಾರ್ ಹಾಗೂ ಮಾರುತಿ. ಉತ್ತಮ ಸಮಾಜಕ್ಕಾಗಿ ಎಂಬ ಘೋಷವಾಕ್ಯದಿಂದ ಜನಮನ ಗೆದ್ದಿರುವ ಟಿವಿ9 ಸಂಸ್ಥೆಯ ಯಶಸ್ಸಿನ ಪಯಣದ ಹಿಂದೆ ಇವರ ಕೊಡುಗೆ ಅಪಾರ.
ಹೆಚ್ಚು ಕಡಿಮೆ ದಶಕಗಳ ಕಾಲ ಟಿವಿ9ನಲ್ಲಿ ತಮ್ಮ ಸೇವೆ ಸಲ್ಲಿಸಿರುವ ಇವರ ಗರಡಿಯಲ್ಲಿ ಪಳಗಿದ ಯುವಪತ್ರಕರ್ತರು ಬಹಳಷ್ಟು ಮಂದಿ. ಇವತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ಯುವಪತ್ರಕರ್ತ ಮಿತ್ರರಿಗೆ ರವಿಕುಮಾರ್ ಮತ್ತು ಮಾರುತಿಯವರು ಗುರುಗಳು, ಪತ್ರಿಕೋದ್ಯಮದ ಅ, ಆ, ಇ,ಈ.. ಹೇಳಿಕೊಟ್ಟವರು.

ದೃಶ್ಯಮಾಧ್ಯಮ ಲೋಕದ ಈ ಇಬ್ಬರು ಚಕ್ರವರ್ತಿಗಳು ಒಟ್ಟಿಗೆ ಆ ಸಂಸ್ಥೆಯನ್ನು ಬಿಟ್ಟು ಹೊರಬಂದಾಗ ಅನೇಕ ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು.
ಈಟಿವಿ ನ್ಯೂಸ್‍ಗೆ ಹೋಗ್ತಾರೆ, ಸುವರ್ಣ ಚಾನಲ್‍ಗೆ ಹೋಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ನಂತರ ಎಬಿಪಿ ನ್ಯೂಸ್ ಆರಂಭವಾಗುತ್ತಿದ್ದು, ಇದರ ಸಾರಥಿಗಳು ಇವರೇ ಎಂಬ ಗಾಸಿಪ್ ಹಬ್ಬಿತ್ತು. ಸ್ಟಾರ್ ಸ್ಪೋಟ್ಸ್ ಕನ್ನಡದಲ್ಲಿ ಬರುತ್ತೆ ಅದರ ಉಸ್ತುವಾರಿ ರವಿಕುಮಾರ್ ಮತ್ತು ಮಾರುತಿ ಎಂಬ ಮಾತು ಸಹ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಝೀ ನ್ಯೂಸ್‍ಗೆ ಹೋಗ್ತಾರೆ ಎಂಬ ಗಾಳಿಸುದ್ದಿಯೂ ಇತ್ತು.
ಇವೆಲ್ಲದರ ನಡುವೆ ಹೊಸ ಚಾನಲ್ ಮಾಡ್ತಾರೆ ಎಂದು ಒಂದಿಷ್ಟು ಜನ ಹೇಳ್ತಿದ್ರು. ಅವರ ಅಭಿಪ್ರಾಯ ಸರಿಯಾಗಿಯೇ ಇತ್ತು.

ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಕನ್ನಡ ಮಾಧ್ಯಮ ಲೋಕಕ್ಕೆ ಹೊಸದೊಂದು ಚಾನಲ್ ಬರುತ್ತಿದೆ .. ಅದುವೇ ನ್ಯೂಸ್ ಫಸ್ಟ್ ..

ಕಳೆದ 2-3 ವರ್ಷಗಳಿಂದ ಡಿಜಿಟಲ್ ವೇದಿಕೆಯಲ್ಲಿ ನ್ಯೂಸ್ ಫಸ್ಟ್ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಇನ್ಮುಂದೆ ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ಮಿಂಚಲಿದೆ. ಸೆಪ್ಟೆಂಬರ್ 20 ರಿಂದ ನಿಮ್ಮ ಮನೆ ಮನೆಯಲ್ಲಿ ನ್ಯೂಸ್ ಫಸ್ಟ್ …!

ಇನ್ನು ಬ್ಯುಸ್ ನೆಸ್ ಹೆಡ್ ಆಗಿ ದಿವಾಕರ್ ಅವರು ನ್ಯೂಸ್ ಫಸ್ಟ್  ಬಲವಾಗಿದ್ದಾರೆ.

ಜನಪ್ರಿಯ ನಿರೂಪಕರಾದ ಸೋಮಣ್ಣ ಮಾಚಿಮಾಡ, ನಿಖಿಲ್ ಜೋಶಿ , ಜಾಹ್ನವಿ ಮಹಡಿ, ಸ್ಮಿತಾ ರಂಗನಾಥ್, ದಿವ್ಯಶ್ರೀ  ಸೇರಿದಂತೆ ಅನೇಕ ಪ್ರಮುಖರು ನ್ಯೂಸ್ ಫಸ್ಟ್ ಟೀಮ್ ನಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...