ಈ ಪ್ರಪಂಚ, ಆಕಾಶ, ಭೂಮಿ , ಸಮುದ್ರ ಎಲ್ಲವೂ ಒಂದು ಅಚ್ಚರಿ ಅಂದರೆ ತಪ್ಪಾಗಲಾರದು. ಇವತ್ತು ಅಂತಹದ್ದೆ ಒಂದು ದೃಶ್ಯವನ್ನ ನೀವು ನೋಡಬಹುದು. ಇಂದು ಗ್ರಹಗಳ ಮೆರವಣಿಗೆ ನಡೆಯುತ್ತದೆ ಅಂದರೆ ತಪ್ಪಾಗಲಾರದು. ಶನಿ, ಬುಧ, ನೆಪ್ಚೂನ್, ಶುಕ್ರ, ಯುರೇನಸ್, ಗುರು ಮತ್ತು ಮಂಗಳ ಎಲ್ಲಾ ಗ್ರಹಗಳು ಸಂಜೆ ಆಕಾಶದಲ್ಲಿ ಸಾಲುಗಟ್ಟಿ ನಿಲ್ಲುತ್ತವೆ. ಈ ಸಂಯೋಜನೆಯು ಈ ದಶಕದಲ್ಲಿ ಮತ್ತೆ ಸಂಭವಿಸುವುದಿಲ್ಲ ಎಂದೇ ಹೇಳಲಾಗುತ್ತಿದೆ.
ಅವುಗಳಲ್ಲಿ ನಾಲ್ಕು ಅಂದರೆ ಬುಧ, ಶುಕ್ರ, ಗುರು ಮತ್ತು ಮಂಗಳ ಗ್ರಹಗಳು ಬರಿಗಣ್ಣಿಗೆ ಗೋಚರಿಸುತ್ತವೆ, ಆದರೆ ಯುರೇನಸ್ ಮತ್ತು ನೆಪ್ಚೂನ್‌ಗಳಿಗೆ ಬೈನಾಕ್ಯುಲರ್ ಅಥವಾ ದೂರದರ್ಶಕ ಮೂಲಕ ನೋಡಬೇಕು.
ಈ ಸಮಯದಲ್ಲಿ ಸೂರ್ಯನ ಸಾಮೀಪ್ಯದಿಂದಾಗಿ ಶನಿಯು ನೋಡಲು ಕಷ್ಟಕರವಾಗಿರುತ್ತದೆ. ಈ ಘಟನೆಯನ್ನು ವೀಕ್ಷಿಸಲು, ಕನಿಷ್ಠ ಬೆಳಕಿನ ಮಾಲಿನ್ಯ ಮತ್ತು ಸ್ಪಷ್ಟವಾದ ಆಕಾಶ ಇರಬೇಕು ಅಂದರೆ ಸೂರ್ಯಾಸ್ತದ ನಂತರ ಗ್ರಹಗಳು ಕಾಣಿಸಿಕೊಳ್ಳುತ್ತವೆ.