ಇದನ್ನು ಓದಿದ್ರೆ ಈಗಲೇ ಅವಳಿಗೆ I Love you ಅಂತೀರಿ ..!
ಅವಳ ಮುದ್ದು ಮುದ್ದು ಮಾತು ಬೇಡ ಬೇಡ ಅಂದ್ರೂ ನೆನಪಾಗ್ತಾ ಇದೆ..! ಅವಳು ಮತ್ತೆ ಬರಳೆನ್ನುವುದು ಕನ್ಫರ್ಮ್ ಆಗಿದ್ರೂ ಅಶೋಕ್ ಅವಳನ್ನು ಮರೆಯುವ ಸ್ಥಿತಿಯಲ್ಲಿಲ್ಲ..! ಅವತ್ತು ಗೆಳೆಯರ ಮಾತು ಕೇಳಿದ್ರೆ ಹೀಗೆ ಆಗ್ತಿರ್ಲಿಲ್ಲ ಅಂತ ಗೆಳೆಯರನ್ನು ನೆನಿತಿದ್ದಾನೆ..!
ಹ್ಞಾಂ, ಅಶೋಕ್ ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯಲ್ಲಿ. ಪ್ರವೃತ್ತಿಯಲ್ಲಿ ಅವನೊಬ್ಬ ಒಳ್ಳೆಯ ಗಾಯಕ..! ಭಾವನಾತ್ಮಕ ಜೀವಿ. ಹೆಂಗರಳು ಅಂತಾರಲ್ಲ ಅಷ್ಟೊಂದು ಮೃದು ಸ್ವಭಾವದ ಹುಡುಗ.
ಇಂಜಿನಿಯರಿಂಗ್ ಓದ್ತಾ ಇರುವಾಗ ಇವನಿಗೆ ಪರಿಚಯ ಆದವಳೇ ಕ್ಷಮಾ..! ಮಲೆನಾಡಿನ ತೀರ್ಥಹಳ್ಳಿಯ ಚೆಲುವೆ.
ಅಶೋಕ್ ಶಿವಮೊಗ್ಗದವ. ಇಬ್ಬರ ಪರಿಚಯ ಆಗಿದ್ದು ಬೆಂಗಳೂರಲ್ಲಿ.. ಮೊದಲೇ ಹೇಳಿದಂತೆ ಇಂಜಿನಿಯರಿಂಗ್ ಓದ್ತಾ ಇರುವಾಗ.
ಅಶೋಕ್ , ಕ್ಷಮಾ ಪರಿಚಯ ಸ್ನೇಹವಾಗುತ್ತೆ. ಒಂದೇ ಭಾಗದವ್ರು ಜಿಲ್ಲೆಯವ್ರೂ ಆಗಿದ್ರಿಂದ ಇರಬೇಕು ತುಂಬಾನೇ ಹತ್ತಿರಾಗ್ತಾರೆ..! ಹೀಗಿರುವಾಗ ಕಾಲ ಕಳೆದಿದ್ದೇ ಗೊತ್ತಾಗಲ್ಲ..
ನಾಲ್ಕುವರ್ಷದ ಇಂಜಿನಿಯರಿಂಗ್ ಪದವಿ ಮುಗಿಯುವ ಹೊತ್ತು. ಅಶೋಕ್ ನಲ್ಲಿ ಏನೋ ಚಡಪಡಿಕೆ, ಬೇಸರ. ಮತ್ತೆ ಕ್ಷಮಾ ಜೊತೆಯಾಗಿ ಇರಲ್ಲ ಅನ್ನೋ ದುಃಖ. ಇಷ್ಟುದಿನ ಇಲ್ಲದ ಬೇಜಾರು ಈಗೇಕೋ? ಖುಷಿಯಾಗಿರುವಾಗ, ಇಷ್ಟದವರು ಜೊತೆಯಲ್ಲಿರುವಾಗ ಅವರ ಬೆಲೆ ಗೊತ್ತಾಗಲ್ಲ..! ಅವರನ್ನು ಎಷ್ಟೊಂದು ಹಚ್ಕೊಂಡಿದ್ದೇವೆ ಎಂದೂ ತಿಳಿಯಲ್ಲ..! ಛೇ, ಕ್ಷಮಾಳನ್ನು ಇಷ್ಟೊಂದು ಹಚ್ಕೊಂಡಿದ್ದೀನಾ ಅಂತೆಲ್ಲಾ ಯೋಚಿಸಿದ..! ತಾನು ಉತ್ತರ ಕಂಡುಕೊಳ್ಳಲು ಸೋತಾಗ..ಗೆಳೆಯರ ಬಳಿ ಹೋದ. ತನ್ನ ಚಡಪಡಿಕೆಯನ್ನೆಲ್ಲಾ ಹೇಳಿಕೊಂಡ..! ಅದು ಪ್ರೀತಿ ಅನ್ನುವುದು ಗೆಳೆಯರ ವಾದ..! ನೋ..ಚಾನ್ಸೇ ಇಲ್ಲ ಅನ್ನುವುದು ಅಶೋಕ್ ನಂಬಿಕೆ.
ಕೋರ್ಸ್ ಮುಗಿಯುವ ಸಮಯ ಹತ್ತಿರ ಹತ್ತಿರ ಬರ್ತಾ ಇದೆ..! ಫ್ರೆಂಡ್ಸ್ ಹೇಳಿದ್ರು , ಅಶೋಕ ನೀನು ತಡಮಾಡಿದ್ರೆ ಅವಳು ಯಾವತ್ತು ಸಿಗಲ್ಲ ಕಣೋ..ಹೇಳು ಪ್ರೀತಿಸುವ ವಿಷಯ ಹೇಳಿ ಬಿಡು..! ಇಲ್ಲ, ಹೇಳಲ್ಲ ಅವಳಿಗೆ ಪ್ರೇಮಿಯಾಗಿ ನಾನು ಇಷ್ಟವಾಗ್ದೇ ಇದ್ರೆ ಬೇಜಾರಾಗ್ತಾಳೆ ಅಂತ ಸುಮ್ಮನಾದ..! ನೋಡೋ ಅಶೋಕ, ಇಷ್ಟ ಇದ್ರೆ ಒಪ್ಪಿಕೊಳ್ತಾಳೆ, ಇಲ್ಲ ಅಂದ್ರೆ ಆಗಲ್ಲ ಅಂತಾಳೆ..!
ಒಪ್ಪಿದ್ರೆ ಖುಷಿ. ಇಲ್ದೆ ಹೋದ್ರೆ ಏನೂ ಮಾಡಕ್ಕಾಗಲ್ಲ..! ಈಗ ಹೇಳ್ದೆ ಇದ್ರಂತೂ ದೂರವಾಗ್ತಾಳೆ..ಹೇಳಿದ ಮೇಲೂ ದೂರಾದ್ರೆ ಆಗ್ಲಿ ಬಿಡು..! ದೈರ್ಯಮಾಡಿ ಹೇಳಿ ಬಿಡು ಅಂದ್ರು. ! ಬೇಡ..ಪ್ರೀತಿ ಸತ್ಯ ಆದ್ರೆ ಅವಳೇ ಬರ್ತಾಳೆ ಅಂತ ಡೈಲಾಗ್ ಹೊಡ್ಕೊಂಡು ಫ್ರೆಂಡ್ಸ್ಗೂ.ಅವಳ ಬಳಿ ಹೇಳಲು ಬಿಡದೆ, ತಾನೂ ಪ್ರಪೋಸ್ ಮಾಡ್ದೆ ಮನಸ್ಸಲ್ಲೇ ಪ್ರೀತಿಸ್ತಾ ಇರ್ತಾನೆ..!
ಆ ದಿನ ಬಂತು..ಅದು ಇಂಜಿನಿಯರಿಂಗ್ ಪದವಿ ಕೊನೆದಿನ..! ಜೂನಿಯರ್ಸ್ ನೀಡಿದ ಸೆಂಡ್ ಆಫ್ ಮಾರನೇ ದಿನ ಅಶೋಕ್ ಮತ್ತು ಕ್ಷಮಾಳ ಅಪ್ಪ, ಅಮ್ಮನೂ ಬಂದಿದ್ರು ಮಕ್ಕಳನ್ನು ಊರಿಗೆ ಕರೆದುಕೊಂಡು ಹೋಗಲು..! ಆ ಎರಡು ಕುಟುಂಬಗಳ ಪರಿಚಯ ಆಗುತ್ತೆ.
ಆತ್ಮೀಯರು ಆಗ್ತಾರೆ..! ಅಶೋಕ್ ಖುಷಿ ಇಮ್ಮಡಿಯಾಗುತ್ತೆ..! ಒಂದು ವರ್ಷ ಕಳೆಯುತ್ತೆ..ಇಬ್ಬರೂ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇಱ್ತಾರೆ. ಆಗಾಗ ಭೇಟಿಯು ಆಗ್ತಿರ್ತಾರೆ..! ಅಶೋಕ್ ಪ್ರೀತಿ ನಿವೇಧಿಸಿಕೊಳ್ಳಲೇ ಇಲ್ಲ..! ಒಂದುದಿನ ಕ್ಷಮ ಕಾಫಿಡೇ ನಲ್ಲಿ..ಅಶೋಕ್ ಒಂದು ಸರ್ಪ್ರೈಸ್ ನಿನಗೇ ನಾನು ಮೊದಲು ಹೇಳ್ತಾ ಇರೋದು, ನನಗೆ ಹುಡುಗನ್ನ ನೋಡಿದ್ದಾರೆ..! ಮದುವೆ ಆಗ್ತಾ ಇದ್ದೇನೆ.
ಅಶೋಕ್ ಗೆ ಆಕಾಶ ಕಳಚಿ ತಲೆಮೇಲೆ ಬಿದ್ದಂತಾಯ್ತು..ಕಷ್ಟದಿಂದ ಭಾರದ ಮನಸ್ಸಿನಿಂದ ಅಭಿನಂದಿಸಿದ ..
ಅವಳ ಮದುವೆ ದಿನವು ಬಂದೇ ಬಿಡ್ತು ತಾನೇ ಓಡಾಡಿದ…
ಕ್ಷಮಳಾ ಮದುವೆಯಾಗಿ ಎರಡು ವರ್ಷ ಆಗಿದೆ..ಇವತ್ತಿಗೂ ಅವಳ ನೆನಪಲ್ಲಿ ಅವನಿದ್ದಾನೆ..ಅವಳು ಅವನೊಡನೆ ಇಲ್ಲ. ನೆನಪು ಮಾಡಿಕೊಳ್ತಾನೆ..ಅವತ್ತು ಪ್ರಪೋಸ್ ಮಾಡಿದ್ರೆ ಹಣ್ಣೋ ಕಾಯೋ ಏನೋ ಆಗ್ತಿತ್ತು ಎಂದು, ಕಾಲ ಮಿಂಚಿದೆ ಈಗ ಯೋಚಿಸಿ ಪ್ರಯೋಜನ ಇಲ್ಲ..
ಫ್ರೆಂಡ್ಸ್, ನಿಮಗೆ ಯಾರ ಮೇಲಾದ್ರು ಪ್ರೀತಿ ಇದ್ರೆ ಹೇಳಿಬಿಡಿ..! ಕಾದು ನೋವು ತಿನ್ನಬೇಡಿ. ಪ್ರೀತಿಸುವುದು ತಪ್ಪಲ್ಲ, ಪ್ರೀತಿಸಿ ಹೇಳದೆ ಕಾಯುವುದು ತಪ್ಪು. ! ಆ ತಪ್ಪಿಗೆ ನೋವು ತಿನ್ನೋರು ನೀವೆ ಆಗಿರ್ತೀರಾ..