ಇದು ನಿಜ ಎಂದಾದರೆ ನಿಜಕ್ಕೂ ಶಾಕಿಂಗ್ ನ್ಯೂಸ್..! ಮುಖ್ಯಮಂತ್ರಿ ಹೆಚ್ .ಡಿ ಕುಮಾರಸ್ವಾಮಿ ಅವರು ಅವರ ತಂದೆ , ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರನ್ನು ಮನೆಯಿಂದ ಆಚೆ ಹಾಕಿದ್ದರಂತೆ.
ಚಿಕ್ಕನಾಯಕನಹಳ್ಳಿ ಶಾಸಕ, ಬಿಜೆಪಿ ನಾಯಕ ಮಾಧುಸ್ವಾಮಿ ಈ ರೀತಿ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ ದೇವೇಗೌಡರನ್ನು ಒದ್ದು ಹೊರಗೆ ಹಾಕಿದ್ದರು. ಅವರು ಕುಮಾರ ಪಾರ್ಕ್ ನ ಕ್ವಾಟ್ರಸ್ ನಲ್ಲಿ ಇದ್ರು. ನಾವು ಊಟ ತೆಗೆದುಕೊಂಡು ಹೋಗಿದ್ದು. ಅವರ ಮಕ್ಕಳಲ್ಲ. ಇವತ್ತು ಕುಮಾರಸ್ವಾಮಿ ಬಂದು ಮಾತನಾಡಲಿ, ನಿಮ್ ಅಪ್ಪನ ಅವತ್ತು ಯಾಕಪ್ಪಾ ಹೊರಗೆ ಹಾಕಿದ್ದಿ ಎಂದು ಕೇಳ್ತೀನಿ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ನಿಜಕ್ಕೂ ದೇವೇಗೌಡರನ್ನು ಮನೆಯಿಂದ ಆಚೆ ಹಾಕಿದ್ರಾ? ಅಥವಾ ಇದು ಕೇವಲ ಮಾಧುಸ್ವಾಮಿ ಅವರ ಆರೋಪವೋ ಗೊತ್ತಿಲ್ಲ.
ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಆಚೆ ಹಾಕಿದಾಗ ನಾನು ಊಟ ತೆಗೆದುಕೊಂಡು ಹೋಗಿದ್ದೆ ಎಂದು ಹೇಳಿರುವ ಮಾಧುಸ್ವಾಮಿ, ಅವತ್ತು ಉಗ್ರಪ್ಪ ಅವರು ದೇವೇಗೌಡರ ಬೆನ್ನು ಉಜ್ಜಿದ್ದರು. ಅವರ ಮಕ್ಕಳು ಯಾರು ಬಂದಿರಲಿಲ್ಲ. ಇವತ್ತು ಕುಮಾರಸ್ವಾಮಿ ದೊಡ್ಡದಾಗಿ ಭಾಷಣ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸದ್ಯ ದೇವೇಗೌಡರು ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಲ್ಲಿನ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ಮೈತ್ರಿ ಧರ್ಮದ ಹೆಸರಲ್ಲಿ ಜೆಡಿಎಸ್ ಗೆ ಸೀಟು ಬಿಟ್ಟು ಕೊಟ್ಟಿದೆ.
ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಎದುರಾಳಿಯಾಗಿ ಮಾಜಿ ಸಂಸದ ಬಿಜೆಪಿಯ ಜಿ.ಎಸ್ ಬಸವರಾಜ್ ಇದ್ದಾರೆ. ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎನ್ನುವುದನ್ನು ಕಾದುನೋಡಬೇಕು.
ಇದು ಬಿಗ್ ಶಾಕಿಂಗ್ ನ್ಯೂಸ್.! ದೇವೇಗೌಡ್ರಿಗೆ ಕುಮಾರಸ್ವಾಮಿ ಏನ್ ಮಾಡಿದ್ರಂತೆ ಗೊತ್ತಾ?
Date: