ಕೊಪ್ಪಳ:- ಓರ್ವ ಪುರುಷ ಪ್ರಯಾಣಿಕನಿಗೆ ಮಹಿಳಾ ಪ್ರಯಾಣಿಕರು ಸೇರಿ ಥಳಿಸಿದ ಘಟನೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್‌ವೊಂದರಲ್ಲಿ ಜರುಗಿದೆ.
ಬಸ್ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೊರಟಿತ್ತು. ಈ ವೇಳೆ ಬಸ್‌ನಲ್ಲಿದ್ದ ಮಹಿಳೆಯರು ಹಾಗೂ ಓರ್ವ ಪುರುಷನ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ನಡುವೆಯೇ ಮಹಿಳೆಯರು ಪುರುಷನಿಗೆ ಥಳಿಸಿದ್ದು, ಗಲಾಟೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.
ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರ ಜೊತೆ ಪುರುಷ ಅನುಚಿತವಾಗಿ ವರ್ತಿಸಿದ್ದು, ಗಲಾಟೆಗೆ ಕಾರಣ ಎಂದು ಶಂಕಿಸಲಾಗಿದೆ. ಇನ್ನೂ ಯಾವುದೇ ನಲ್ಲಿ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.