ಇದೊಂದು ಸ್ಪೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!
“ನಾನು ಒಂದು ಬೆಳಿಗ್ಗೆ ಶಾಲೆಗೆ ಹೋಗುವಾಗ ನನ್ನ ಕಾಲ ಮೇಲೆ `ಟ್ರಕ್’ ಹಾದು ಹೋಯಿತು..! ನಾನು ಆಸ್ಪತ್ರೆಗೆ ಹೋದೆ, ಆದರೆ 25,000 ರೂಪಾಯಿಗಳಿದ್ದರೆ ಮಾತ್ರ ನಿನ್ನ ಕಾಲನ್ನು ಉಳಿಸ ಬಹುದೆಂದು ವೈದ್ಯರು ಹೇಳಿದರು..! ಬಡ ಕುಟುಂಬದಿಂದ ಬಂದಿದ್ದ ನನಗೆ ಅಷ್ಟೊಂದು ಮೊತ್ತ ಹೊಂದಿಸೋದು ಸಾಧ್ಯವಿರಲಿಲ್ಲ..!
ನನ್ನ ಕಾಲು ಆರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಾನು ಆಸ್ಪತ್ರೆಯಿಂದ ಬಿಡುಗಡೆ (ಡಿಶ್ಚಾರ್ಜ್) ಯಾವಾಗ ಆದೆನೋ ಆಗಲೇ ಮನವರಿಕೆ ಮಾಡಿಕೊಂಡೆ, ನನ್ನ ಜೀವನದಲ್ಲಿ ಹೀಗೆಯೇ ಕಷ್ಟಗಳು ಮುಂದುವರೆಯುತ್ತವೆ ಎಂದು..! ಆರನೇ ವಯಸ್ಸಿನಿಂದಲೇ ನಾನು `ಕುಂಟ’ ಎಂದು ಕರೆಯಲ್ಪಟ್ಟೆ..! ಒಂದುವೇಳೆ ನಾನು ಬೇರೆ ಹುಡುಗರ ಜೊತೆ ಫುಟ್ಬಾಲ್ ಆಡಲು ಹೋದರೆ, ನನ್ನನ್ನು ಹತ್ತಿರವೂ ಬಿಟ್ಟು ಕೊಳ್ಳುತ್ತಿರಲಿಲ್ಲ. ನಾನು ಮೈದಾನ ಮತ್ತು ಚೆಂಡನ್ನು (ಫುಟ್ಬಾಲ್ ಅನ್ನು)ಹಾಳು ಮಾಡುತ್ತೇನೆಂದು ಅವರು ಹೇಳುತ್ತಿದ್ದರು..! ನಾನೇ ಮನೆಯಲ್ಲಿ ದೊಡ್ಡ ಹುಡುಗನಾಗಿದ್ದರಿಂದ ನಾನು ಕುಟುಂಬದ ಆದಾಯಕ್ಕೆ ಕೊಡುಗೆ ನೀಡಬೇಕೆಂದು ನನ್ನ ಸ್ವಂತ ತಂದೆಯೇ ನನ್ನನ್ನು ದೇಹ ಕಪ್ಪು ಅಥವಾ ನೀಲಿಗಟ್ಟುವವರೆಗೂ ಹೊಡೆಯುತ್ತಿದ್ದರು..! ನಾನು ಹದಿನೈದನೇ ವಯಸ್ಸಿನಲ್ಲಿ ಮನೆ ಬಿಡುವ ತನಕವೂ ನನಗೆ ಈ ನೋವು ತಪ್ಪಿರಲಿಲ್ಲ..! ಹದಿನೈದನೇ ವರ್ಷಕ್ಕೆ ಮನೆಬಿಟ್ಟು ಹಣ ಸಂಪಾದಿಸಿ ನನ್ನ ಕಾಲಮೇಲೆ ನಾನು ನಿಲ್ಲಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟೆ..!
ಮನೆಬಿಟ್ಟು ಬಂದವನು ಸ್ಟ್ರೀಟ್ಸ್ ಗ್ಯಾಂಗ್( ಬೀದಿ ಗ್ಯಾಂಗ್)ಗಳನ್ನು ನೋಡಿದೆ..! ಅದರಲ್ಲಿನ್ನೂ ಚಿಕ್ಕ ವಯಸ್ಸಿನವರಿದ್ದರು,..! ನಾನು ಅವರೊಡನೆ ಸೇರಿಕೊಂಡು, ನನ್ನ ಸಾಮರ್ಥ್ಯವನ್ನು ತೋರಿಸಿ, ಆದಷ್ಟು ಬೇಗ ಹೆಚ್ಚು ಹೆಚ್ಚು ದುಡ್ಡನ್ನು ಸಂಪಾದಿಸಬೇಕೆಂದು ನಿರ್ಧಾರ ಮಾಡಿದೆ..! ನಾನು ಚಾಕು ಹಿಡಿದೆ, ಹಣ ಸಂಪಾದಿಸಿದೆ ಮತ್ತುಜನರಿಗೆ ಹೊಡೆದೆ..! ಹೊಡೆದು ಬಡಿದು, ಹೆದರಿಸಿ ಹಣ ಸಂಪಾದಿಸಲು ಶುರು ಮಾಡಿದೆ..! ನಾನು ಮೂರು ಬಾರಿ ಜೈಲಿಗೂ ಹೋದೆ..! ಇದು ನನ್ನ ಜೀವನದ ಕರಾಳ ಸಮಯವಾಗಿತ್ತು. ಆದರೆ ನನಗೆ ಈ ಕೆಲಸ ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ..! 1994ರಲ್ಲಿ ನಾನು ಕಂಡರೆ ಶೂಟ್ ಮಾಡಿ (ಅವನು ಕಂಡರೆ ಗುಂಡಿಕ್ಕಿ) ಎಂಬ ಆದೇಶವೊಂದು ರವಾನೆಯಾಗಿತ್ತು..!
ಇದಾದನಂತರ ನನ್ನ ತಾಯಿಗೆ ಅವರು ಹೊಡೆದರು, ನನ್ನ ತಂದೆಯನ್ನು ಜೈಲಲ್ಲಿಟ್ಟರು..! ನಾನು ಅಡಗಿಕೊಂಡಿರುವಾಗ ಒಂದು ರಾತ್ರಿ ಸುಮಾರು ಆರು ಅಡಿ ಎತ್ತರದ ಉದ್ದನೆಯ ವ್ಯಕ್ತಿ ನನ್ನ ಭುಜವನ್ನು ಹಿಡಿದ..! ನಾನು ನನ್ನ ಚಾಕುವನ್ನು ತೆಗೆಯಲು ಹೋದಾಗ ಅವರು ಪೊಲೀಸರೆಂದು ಯೋಚಿಸಿದೆ..! ಏನೂ ಆಗದ ಮೊದಲು, ಆತ ಹೇಳುತ್ತಾನೆ “ಮಗಾ.. ಜೀಸಸ್ ನಿನ್ನನ್ನು ಪ್ರೀತಿಸುತ್ತಾನೆ ಮತ್ತು ಆತ ನಿನಗಾಗಿ ಒಂದೊಳ್ಳೆ ಯೋಜನೆಯನ್ನು ಹೊಂದಿದ್ದಾನೆ”..! ಅವನು ನನ್ನ ಕೈಗಳನ್ನು ಒಂದು ಗಂಟೆ ಹಿಡಿದು ಕೊಂಡು ಜೀವನದ ಬಗ್ಗೆ ಮಾತನಾಡಿದರು..! ನನ್ನ ಸ್ವಂತ ತಂದೆ ಮಾಡದೇ ಇದ್ದುದನ್ನು ಆ ಮನುಷ್ಯ ಮಾಡಿದ್ರು..!
` ಒಂದು ಪಕ್ಷ ದೇವರಿದ್ದಾನೆಂದಾದರೆ ನನ್ನನ್ನು ಈ ನರಕದಿಂದ ಆಚೆ ಬರುವಂತೆ ಮಾಡಲಿ’ ಎಂದು ನಾನು ಹೇಳಿದೆ..! ಅಂದಿನಂದ ಆ ವ್ಯಕ್ತಿ ನನ್ನ ಮಾರ್ಗದರ್ಶಕರು..!
ಅವರು ನನ್ನನ್ನು ಚರ್ಚ್ ಗೆ ಕರೆದುಕೊಂಡು ಹೋದರು, ಬೈಬಲ್ ನ ಕೆಲವೊಂದು ಪದ್ಯಗಳನ್ನು ಓದುವ ಮೂಲಕ ನನ್ನ ಸುಧಾರಣೆಗೆ ಪ್ರಯತ್ನಿಸಿದರು..! ನಾನು ಎರಡು ವರ್ಷಗಳ ಕಾಲ ಎನ್.ಜಿ.ಓ ಒಂದರ ಆಶ್ರಯದಲ್ಲಿದ್ದೆ, ನನಗೊಂದು ಜೈಪುರ್ ಲೆಗ್ (ಜೈಪುರ್ ಫೂಟ್) (ಇದೊಂದು ರಬ್ಬರ್ ಬೇಸ್ಡ್ ಪ್ರಾಸ್ಥೆಟಿಕ್ ಲೆಗ್)ನ್ನು ಹಾಕಿಸಿದರು..! ಆತ್ಮವಿಶ್ವಾಸದಿಂದ ಕನಸನ್ನು ಬೆನ್ನಟ್ಟಿ ಹೊರಟೆ..! ನನಗೆ ಅವರು ತುಂಬಾ ಒಳ್ಳೇದನ್ನು ಮಾಡಿದರು..! ಅವರು ಪೊಲೀಸರೊಡನೆ ಮಾತನಾಡಿದರು, ನನಗಿನ್ನೂ ಹದಿನೆಂಟು ಆಗಿಲ್ಲ ಎಂಬ ವಿಚಾರವನ್ನು, ನನ್ನ ಕತೆಯನ್ನೆಲ್ಲಾ ವಿವರಿಸಿ, ಪೊಲೀಸರಿಗೆ ವರ್ಗಾಯಿಸಿದರು..! ಅವರು ನನಗೆ ಎಚ್ಚರಿಕೆ ನೀಡಿ ಕಳುಹಿಸಿದರು..!
ಈ ಸಮಯದಲ್ಲಿ ನನ್ನ ತಂದೆ ವಿಧಿವಶರಾದರೆಂಬ ಸುದ್ದಿಯನ್ನು ಕೇಳಿದೆ..! ನನ್ನ ಒಡಹುಟ್ಟಿದವರ ಮತ್ತು ಅಮ್ಮನ ಜವಬ್ದಾರಿಯನ್ನು ನಾನು ತೆಗೆದುಕೊಳ್ಳಬೇಕೆಂದು ಬಯಸಿದೆ.., ಅದು ನನ್ನ ಕರ್ತವ್ಯವೂ ಆಗಿತ್ತೆಂದು ನನಗೆ ಗೊತ್ತು..! ಅದಕ್ಕಾಗಿ ನಾನು ಇಡೀ ದಿನ ಎನ್.ಜಿ.ಓ ದಲ್ಲಿ ಕೆಲಸ ಮಾಡಿ ಸಂಜೆ ಶಾಲೆಗೆ 4-7ಗಂಟೆಯವರೆಗೆ ಹೋಗಿ. ಪ್ರತಿದಿನ ರಾತ್ರಿ 7-11 ಗಂಟೆವರೆಗೆ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೆ..! ವಾರದ ಕೊನೆಯಲ್ಲಿ, ಕಾಲುಚೀಲ (ಸಾಕ್ಸ್) ಮಾರಿ ಪ್ರತಿಯೊಂದು ಪೈಸೆಯನ್ನು ಕೂಡಿಡುತ್ತಾ ಬಂದೆ..! ಇದು ಎರಡು ವರ್ಷದವರೆಗೂ ಮುಂದುವರೆಯಿತು..! ನಂತರ ನನ್ನ ಎನ್.ಜಿ.ಓ ಬಾಸ್, ನನಗೆ ಬಡ್ತಿ ನೀಡಲಿಚ್ಚಿಸಿದರು ಮತ್ತು ನಾನು ಪೋರ್ಚ್ ಗಲ್ ನಲ್ಲಿ ಲೀಡರ್ಶಿಪ್ ಪ್ರೋಗ್ರಾಮ್ಗೆ ಭಾಗವಹಿಸ ಬೇಕಿತ್ತು..! ನಾನು ಅದನ್ನು ಸಂತೋಷದಿಂದ ಒಪ್ಪಿಕೊಂಡೆ, ಹೆಚ್ಚು ಹೆಚ್ಚು ಹಣ ಸಂಪಾದಿಸಿದೆ..! ಸುಂದರ ಮಹಿಳೆಯನ್ನು ಭೇಟಿ ಮಾಡಿದೆ..ಅವಳನ್ನೇ ಮದುವೆಯೂ ಆದೆ..! ಆದರೆ, ಒಂದುರಾತ್ರಿ ಆಕೆ ಬ್ರೈನ್ ಎಮ್ರೇಜ್ ನಿಂದ ಸಾವನ್ನಪ್ಪುವ ಮೊದಲು ನನ್ನ ಮಗನಿಗೆ ಜನ್ಮ ಕೊಟ್ಟಿದ್ದಳು..! ಅವತ್ತಿನಿಂದ ನಾನು ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲಾರಂಭಿಸಿದೆ..!
ಕಳೆದ 13 ವರ್ಷಗಳಿಂದ ಮ್ಯಾರಥಾನ್ನಲ್ಲಿ ಓಡ್ತಾ ಇದ್ದೇನೆ..! ನಾನು ಹಲವಾರು ಶಿಖರಗಳ ತುದಿಯನ್ನ ಏರಿದ್ದೇನೆ..! ವಿಕಲಚೇತನರ ಕ್ರಿಕೆಟ್ ತಂಡದಲ್ಲಿ ಆಡಿದ್ದೇನೆ..!
ಬೀದಿ ಮಕ್ಕಳಿಗಾಗಿ `ಸೂಪ್, ಸೋಪ್ ಅಂಡ್ ಸೊಲ್ಯೂಷನ್’ ಎಂಬ ಯೋಜನೆಯನ್ನು ಹಾಕಿಕೊಂಡು ಅವರಿಗೆ ಕೈಲಾದ ಸಹಾಯವನ್ನು ಮಾಡ್ತಾ ಇದ್ದೇನೆ..! ಲಡಾಕ್ ನಿಂದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಬೈಕ್ನಲ್ಲಿ ಹೋಗಿದ್ದೇನೆ..! ಇವೆಲ್ಲಾ ನನ್ನ ಜೀವನ ಸುಧಾರಿಸಲು ಮಾಡಿದ ವ್ಯಕ್ತಿಗಾಗಿ..!
“ಒಬ್ಬ ವ್ಯಕ್ತಿ ಏನನ್ನೂ ಬದಲಾಯಿಸ ಬಲ್ಲನೆಂಬುದು ಈ ನನ್ನ ಲೈಫ್ ಸ್ಟೋರಿಯ ಸಂದೇಶ..!
ಇದು ಹೆಸರನ್ನು ಹೇಳಲು ಬಯಸದ ವ್ಯಕ್ತಿಯ ಕಥೆ..!
ಮೂಲ : humans of bombay ಫೇಸ್ ಬುಕ್ ಪೇಜ್