ಇನ್ನುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದ್ರು ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು: ರಾಮಲಿಂಗಾ ರೆಡ್ಡಿ

tnit editors
1 Min Read

ಇನ್ನುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದ್ರು ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು: ರಾಮಲಿಂಗಾ ರೆಡ್ಡಿ

 

ಬೆಂಗಳೂರು: ಇನ್ನುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದ್ರು ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ನಂದಿನಿ ಉತ್ಪನ್ನ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಉತ್ತಮ ಗುಣಮಟ್ಟದ ಪದಾರ್ಥಗಳು ಇವೆ. ಅಮುಲ್‌ಗೆ ಅವಕಾಶ ಕೊಟ್ಟಿದ್ದಾರೆ. ಇದು ಸರಿಯಲ್ಲ. ಮೊದಲು ನಂದಿನಿಗೆ ಕೊಡಬೇಕಿತ್ತು ಎಂದು ತಿಳಿಸಿದರು.

ಇನ್ನುಮುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದರೂ ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು. ನಾವು ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಕಡೆ ನಂದಿನಿಗೆ ಆದ್ಯತೆ ಕೊಟ್ಟಿದ್ದೇವೆ. ಅಮುಲ್ ಹೆಚ್ಚು ಹಣ ಕೊಟ್ಟಿದ್ದಾರೆ ಅಂತ ಅವರಿಗೆ ಕೊಡಬೇಡಿ. ನಂದಿನಿಗೆ ಮೊದಲ ಆದ್ಯತೆ ಕೊಡಬೇಕು. ಸಿಎಂ, ಡಿಸಿಎಂ ಗಮನಕ್ಕೂ ಇದು ಬಂದಿದೆ ಎಂದು ತಿಳಿಸಿದರು.

Share This Article