ಇನ್ನೂ ಇದೆ ದೇಶದ ಮೊದಲ ‘ಪ್ರಥಮ ಪ್ರಜೆ’ ಬ್ಯಾಂಕ್ ಅಕೌಂಟ್ ..! ಆ ಅಕೌಂಟ್ ನಲ್ಲಿರುವ ಹಣ ಎಷ್ಟು?

Date:

ಬ್ಯಾಂಕ್ ಗಳ ಸೇವಿಂಗ್ ಅಕೌಂಟ್ (ಉಳಿತಾಯ ಖಾತೆ) ಅನ್ನು ಸರಿಯಾಗಿ ಮೆಂಟೇನ್ ಮಾಡ್ದೇ ಇದ್ರೆ ಬಹಳ ದಿನಗಳವರೆಗೆ ಟ್ರಾನ್ಸೆಕ್ಷನ್ಸ್ ಮಾಡ್ದೆ ಇದ್ರೆ ಅಕೌಂಟ್ ಕ್ಲೋಸ್ ಆಗುತ್ತೆ. ಆದ್ರೆ, ಭಾರತದ ಮೊದಲ ‘ಪ್ರಥಮ ಪ್ರಜೆಯ’ ಬ್ಯಾಂಕ್ ಖಾತೆ ಇನ್ನೂ ಉಂಟು…!

ನಿಮ್ಗೆ ಗೊತ್ತಿಲ್ದೇ ಇರೋ ವಿಷ್ಯ ಏನಲ್ಲ.‌ ಸ್ವತಂತ್ರ ಭಾರತದ ಮೊದಲ ‘ಪ್ರಥಮ ಪ್ರಜೆ’  , ಅಂದ್ರೆ ಮೊದಲನೆಯ ರಾಷ್ಟ್ರಪತಿ ಡಾ.‌ಬಾಬು ರಾಜೇಂದ್ರ ಪ್ರಸಾದ್. ಇವರು ತೀರಿಕೊಂಡು 55 ವರ್ಷಗಳಾದ್ರೂ ಇವರ ಸೇವಿಂಗ್ ಅಕೌಂಟ್ ಇನ್ನೂ ಆ್ಯಕ್ಟೀವ್ ಆಗಿದೆ‌.

ಅವರ ಬ್ಯಾಂಕ್ ಅಕೌಂಟ್ ಎಲ್ಲಿದೆ? ಅದರಲ್ಲೀಗ ಎಷ್ಟು ದುಡ್ಡಿದೆ? ಅನ್ನೋದನ್ನು ನೋಡೋಕು ಮುಂಚೆ ಸ್ವಲ್ಪ  ಅವರ ಲೈಫ್ ಜರ್ನಿ ನೋಡೋಣ.

ಬಿಹಾರದಲ್ಲಿ ಜೇರಡ್ಡೆ ಅಂತ ಹಳ್ಳಿ ಇದೆ. ಈ ಹಳ್ಳಿಯೇ ಇವರ ಹುಟ್ಟೂರು. ಹುಟ್ಟಿದ್ದು 1884ರ ಡಿಸೆಂಬರ್  2ರಂದು.  ತಂದೆ ಮಹದೇವ ಸಹಾಯ್, ತಾಯಿ ಕಮಲೇಶ್ವರಿ ದೇವಿ.

ಅಪ್ಪ ಡಾಕ್ಟರ್ ಅಷ್ಟೇ ಅಲ್ದೆ ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು. ಅಮ್ಮ ಸಂಪ್ರದಾಯಸ್ಥ ಮಹಿಳೆ. ಇವ್ರು ಪ್ರತಿದಿನ ರಾಮಾಯಣದ ಕತೆಗಳನ್ನು ಹೇಳ್ತಿದ್ರು. ಒಂದೇ ಒಂದು ದಿನ ತಪ್ಪಿಸಿದ್ದ ಉದಾಹರಣೆ ಇಲ್ವಂತೆ.

ಪ್ರಸಾದ್ ಅವರಿಗೆ ಮದ್ವೆ ಆಗುವಾಗ ಬರೀ‌ 12 ವರ್ಷ ಅಷ್ಟೇ. ಇವರ ಪತ್ನಿ ರಾಜವಂಶಿ ದೇವಿ ಅಂತ. ಪ್ರಸಾದ್ ಅವರು ಟ್ರೆಡಿಶನಲ್ ಹಿಂದೂ ಫ್ಯಾಮಿಲೀಲಿ ಹುಟ್ಟಿ ಬೆಳೆದವರು. ಆದ್ರೆ, ಇವರ ಪಾಠ ಶುರುವಾಗಿದ್ದು ಪರ್ಷಿಯನ್ ಭಾಷೆಯಲ್ಲಿ. ಓರ್ವ ಮುಸಲ್ಮಾನ್ ಮೌಲ್ವಿ  ಇವರ ಮೊದಲ ಗುರು.

ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬಿ.ಎ‌, ಎಂ.ಎ ಮತ್ತು ಕಾನೂನು‌ ಪದವಿ ಪಡೆದಿದ್ದ ರಾಜೇಂದ್ರ ಪ್ರಸಾದ್ ಅವರು ವಕೀಲ ವೃತ್ತಿ ಬಿಟ್ಟು ಗಾಂಧೀಜಿ ಅವರ ಜೊತೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು.  ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಇವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಯಾರೂ ಮರೆಯಲ್ಲ‌.‌  ಸಚ್ಚಿದಾನಂದ ಸಿನ್ಹಾ ಅವರ ನಂತರ ಭಾರತ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಸಂವಿಧಾನ ರಚನೆಯಲ್ಲೂ ಪ್ರಮುಖ ಪಾತ್ರವಹಿಸಿದ್ದರು.

1950ರ ಜನವರಿ 26 ರಂದು ಭಾರತ ಗಣರಾಜ್ಯವಾದಾಗ ಸ್ವತಂತ್ರ ಭಾರತದ‌ ಮೊದಲ ರಾಷ್ಟ್ರಪತಿಯಾಗಿದ್ದು ಇದೇ ರಾಜೇಂದ್ರ ಪ್ರಸಾದ್ ಅವರು.  1952 ಮತ್ತು 1957ರ ಸಾರ್ವತ್ರಿಕ ಚುನಾವಣೆ ಬಳಿಕ ಕೂಡ ಇವರೇ ರಾಷ್ಟ್ರಪತಿಗಳಾಗಿ ಆಯ್ಕೆಯಾದ್ರು. ಸತತ 12 ವರ್ಷ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ ಹಿರಿಮೆ ಇವರದ್ದು.

1962ರ ಮೇ 13 ರಂದು ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದ್ರು.‌ ಬಳಿಕ ಒಂದೇ ಒಂದು ವರ್ಷದಲ್ಲಿ , ಅಂದ್ರೆ 1963ರ ಫೆಬ್ರವರಿ 28 ರಂದು ತೀರಿಕೊಂಡ್ರು.

ಇವರು ಸಾಯುವ ಕೆಲವೇ‌ ಕೆಲವು ತಿಂಗಳ ಮೊದಲಷ್ಟೇ ,ಅಂದ್ರೆ 1962ರ ಅಕ್ಟೋಬರ್ 24 ರಂದು ಬಿಹಾರದ  ಪಾಟ್ನಾದ ಎಕ್ಸಿಬಿಷನ್ ರೋಡ್​‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಸೇವಿಂಗ್ ಅಕೌಂಟ್ ತೆರೆದಿದ್ರು. ಆ ಖಾತೆ ಇವತ್ತೂ ಹಾಗೆಯೇ ಇದೆ.

ದೇಶದ ಮೊದಲ ರಾಷ್ಟ್ರಪತಿಯ ಖಾತೆ ತಮ್ಮ ಬ್ಯಾಂಕ್​ನಲ್ಲಿರೋದು ಹೆಮ್ಮೆ ವಿಚಾರ ಎಂಬ ಕಾರಣಕ್ಕೆ ಖಾತೆಯನ್ನು ಬ್ಯಾಂಕ್  ಹಾಗೇ ಉಳಿಸಿಕೊಂಡಿದೆ. ರಾಜೇಂದ್ರ ಪ್ರಸಾದ್ ಅವರ ಅಕೌಂಟ್ ನಂಬರ್  0380000100030687 ಅನ್ನು  ಬ್ರಾಂಚ್​​ನ ನೋಟಿಸ್ ಬೋರ್ಡ್​​ನಲ್ಲಿ, ಅವರ ಫೋಟೋ ಜೊತೆಗೆ ಹಾಕಿದ್ದಾರೆ. ಪ್ರತಿ 6 ತಿಂಗಳಿಗೆ ಮಾಮೂಲಿ ಬಡ್ಡಿ ಕೂಡ ಬರುತ್ತೆ. ಈಗ ಒಟ್ಟಾರೆ ಮೊತ್ತ ಸುಮಾರು 1,900 ರೂ. ಇದೆಯಂತೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...