ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಸೂಚಿಸಿದ್ದು ಕೋಚ್ ಚಾಪೆಲ್ ಅಲ್ಲ , ನಾಯಕ ದ್ರಾವಿಡ್ ಕೂಡ ಅಲ್ವಂತೆ!

Date:

ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಸೂಚಿಸಿದ್ದು ಕೋಚ್ ಚಾಪೆಲ್ ಅಲ್ಲ , ನಾಯಕ ದ್ರಾವಿಡ್ ಕೂಡ ಅಲ್ವಂತೆ!

ಇರ್ಫಾನ್ ಪಠಾಣ್ .. ಬಹುಶಃ ಯಾವೊಬ್ಬ  ಕ್ರಿಕೆಟ್ ಅಭಿಮಾನಿ ಈ ಹೆಸರನ್ನು ಮರೆಯಲು ಸಾಧ್ಯವಿಲ್ಲ. ಟೀಮ್ ಇಂಡಿಯಾಕ್ಕೆ ಅನೇಕ ಗೆಲುವನ್ನು ತಂದುಕೊಟ್ಟ ಸ್ವಿಂಗ್ ಮಾಂತ್ರಿಕ ಇರ್ಫಾನ್ ಪಠಾಣ್! ಬೌಲರ್ ಆಗಿ ತಂಡ ಕೂಡಿಕೊಂಡ ಇರ್ಫಾನ್ ತದನಂತರ ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್ ಆಗಿ ಬಿಟ್ಟರು! ಬ್ಯಾಟ್ಸ್ ಮನ್ ಗಳು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾಗಲೂ ಇರ್ಫಾನ್ ತಂಡದಲ್ಲಿದ್ದಾರೆ.. ಡೋಂಟ್ ವರಿ ರನ್ ಬರುತ್ತೆ, ಅಯ್ಯೋ ಈ ಸ್ಕೋರನ್ನು ಚೇಸ್ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಇರ್ತಿತ್ತು. ಆ ಮಟ್ಟಿಗೆ ಇರ್ಫಾನ್ ಬ್ಯಾಟಿಂಗ್ ನಲ್ಲು ಸದ್ದು ಮಾಡಿದ್ದರು.

ಇನ್ನು ಈ ವರ್ಷದ ಆರಂಭದಲ್ಲಿ ಇರ್ಫಾನ್ ನಿವೃತ್ತಿಘೋಷಿಸಿದ್ದಾರೆ. ಸ್ವಿಂಗ್ ಮಾಂತ್ರಿಕ ಇರ್ಫಾನ್ ಪಠಾಣ್ ಆಲ್ ರೌಂಡರ್ ಆಗಿ ಪರಿವರ್ತಿತಗೊಳ್ಳಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ಕಾರಣ ಅನ್ನೋ ಮಾತಿದೆ. ಆದರೆ ಎಡಗೈ ವೇಗಿಯಲ್ಲೊಬ್ಬ ಬ್ಯಾಟ್ಸ್ ಮನ್ ಇದ್ದಾನೆ ಅಂತ ಗುರುತಿಸಿದ್ದು ಚಾಪೆಲ್ ಅಲ್ಲ!

ನಾಗಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಆ ಮ್ಯಾಚ್ ನಲ್ಲಿ ಸ್ಫೋಟಕ 83 ರನ್ ಬಾರಿಸಿ ತಂಡದ ಮೊತ್ತ 350ರ ಗಡಿ ಮುಟ್ಟುವಂತೆ ಮಾಡಿದ್ದರು ಇರ್ಫಾನ್. ಭಾರತ ಆ ಪಂದ್ಯದಲ್ಲಿ 152ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಅಂದಹಾಗೆ ಆ ಪಂದ್ಯದಲ್ಲಿ ಪಠಾಣ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುವಂತೆ ಮಾಡಿದ್ದು ಕೋಚ್ ಆಗಿದ್ದ ಚಾಪೆಲ್ ಎಂದೇ ಚರ್ಚೆ ಆಗುತ್ತಿದೆ. ಆದರೆ,  ಚಾಪೆಲ್ ಅಲ್ಲ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

ಇರ್ಫಾನ್ ಪಠಾಣ್ ಬ್ಯಾಟ್ ಕೂಡ ಬೀಸಬಲ್ಲ ಅಂತ ಅಂದಿನ ಕ್ಯಾಪ್ಟನ್ ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮನವರಿಕೆ ಮಾಡಿಕೊಟ್ಟಿದ್ದು ಸಚಿನ್ ಅಂತೆ. ಸ್ವತಃ ಇರ್ಫಾನ್ ಪಠಾಣ್ ಈ ಬಗ್ಗೆ ಹೇಳಿದ್ದಾರೆ. “ ಅನೇಕರು ನನ್ನ ವೃತ್ತಿ ಜೀವನವನ್ನು ಹಾಳು ಮಾಡಿರುವುದು ಗ್ರೇಗ್ ಚಾಪೆಲ್ ಎನ್ನಲಾಗುತ್ತಿದೆ. ಬೌಲಿಂಗ್ ಹೊರತಾಗಿ 3ನೇ ಕ್ರಮಾಂಕದಲ್ಲಿ ಕೋಚ್ ಕಣಕ್ಕಿಳಿಸಿ ತಪ್ಪು ಮಾಡಿದ್ರು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ , ಅದು ಕೋಚ್ ನಿರ್ಧಾರವಾಗಿರಲಿಲ್ಲ’’ ಎಂದಿದ್ದಾರೆ ಪಠಾಣ್.

ಅದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ನನ್ನ ಸಾಮರ್ಥ್ಯ ಗುರುತಿಸಿದ್ದರು. ಅಂದಿನ ನಾಯಕ ದ್ರಾವಿಡ್ ಅವರಿಗೆ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸುವಂತೆ ತಿಳಿಸಿದ್ದರು. ಏಕೆಂದರೆ ನನ್ನಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯವಿರುವುದು ಸಚಿನ್ ಮನಗಂಡಿದ್ದರು.

ಇರ್ಫಾನ್ ಪಠಾಣ್​ರನ್ನು ಮೂರನೇ ಕ್ರಮಾಂಕದಲ್ಲಿ ಆಡಿರುವುದರಿಂದ ಉತ್ತಮವಾಗಿ ಬ್ಯಾಟ್ ಮಾಡಬಲ್ಲ. ಅಂತೆಯೇ  ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲ ಎಂದು ಸಚಿನ್ ಸಲಹೆ ನೀಡಿದ್ದರು. ಗ್ರೇಗ್ ಚಾಪೆಲ್ ನನ್ನ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರ. ಮೊದಲನೆಯದಾಗಿ ಅವರು ಭಾರತೀಯರಲ್ಲ. ಹೀಗಾಗಿ ಅವರನ್ನು ಟೀಕೆ ಮಾಡುವುದು ಸುಲಭ ಎಂದು ಪಠಾಣ್ ನುಡಿದಿದ್ದಾರೆ.

ಇನ್ನು 2007ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇರ್ಫಾನ್ ಪಠಾಣ್ ಕೊನೆಯ ಬಾರಿ ಭಾರತದ ಪರ ಆಡಿದ್ದು 2012 ರಲ್ಲಿ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದರೂ ಪಠಾಣ್​ಗೆ ಆ ನಂತರ ಟೀಮ್ ಇಂಡಿಯಾದಲ್ಲಿ  ಅವಕಾಶ ಸಿಕ್ಕಿರಲಿಲ್ಲ.

ಆ ನಂತರ ದೇಶೀಯ ಪಂದ್ಯಗಳಲ್ಲಿ ತೊಡಗಿಸಿಕೊಂಡರೂ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಾಗಲಿಲ್ಲ. ಈ ನಡುವೆ ಜಮ್ಮು ಕಾಶ್ಮೀರ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...