ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

Date:

ನೀವು ರಜಾದಿನಗಳಲ್ಲಿ ಪ್ರವಾಸಕ್ಕೆ ಇನ್ನೂ ಪ್ಲಾನ್ ಮಾಡಿಲ್ವಾ..? ಹಾಗಾದ್ರೆ ಗಾರ್ನೆಟ್ ಮೊಂಟಾನಾಕ್ಕೆ ಹೋಗೋ ಪ್ಲಾನ್ ಮಾಡಿ..! ಅಲ್ಲೇ ಕಾಲಕಳೆಯಿರಿ..! ನೀವು ಪ್ರವಾಸ ಮಾಡಿದಂಗೂ ಆಗುತ್ತೆ.. ನಿಮಗೆ ದುಡ್ಡೂ ಸಿಗುತ್ತೆ..! ಸ್ವಲ್ಪ ಸಮಯ ಕಾಲ ಕಳೆದ್ರೆ ನಿಮಗೆ ಸರ್ಕಾರವೇ ದುಡ್ಡು ಕೊಡುತ್ತೆ..! ಅಲ್ಲಿರೋದಕ್ಕೆ ಒಳ್ಳೆ ಸಂಬಳವೂ ಇದೆ..! ಉಳಿಯೋಕೆ ಕ್ಯಾಬಿನ್ ಇದೆ..! ನಿಮಗೆ ಬೇಕಾಗಿದ್ದೆಲ್ಲಾ ಆಲ್ ಮೋಸ್ಟ್ ಇದ್ದೇ ಇದೆ..! ನೀವು ಅಲ್ಲಿಗೆ ಹೋಗೋಕೆ ರೆಡಿ ಇದ್ದೀರಾ ಅಂತಾದ್ರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ತಿಳ್ಕೊಂಡು ಹೋಗೋದು ಒಳ್ಳೆಯದಲ್ವಾ..?! ಅದಕ್ಕಾಗಿ ಆ ಪ್ರದೇಶದ ಬಗ್ಗೆ ಸಣ್ಣದಾದ ಮಾಹಿತಿ ಇಲ್ಲಿದೆ..!

ಗಾರ್ನೆಟ್, ಮೊಂಟಾನಾ ದಟ್ಟವಾದಕಾಡುಗಳಿಂದ ಕೂಡಿದ ಪರ್ವತ ಕಣಿವೆಯಲ್ಲಿನ ಏಕಾಂತ ಪ್ರದೇಶ..! ಅಮೇರಿಕಾದಲ್ಲಿನ ಈ ಪ್ರದೇಶ `ಪೇತ ನಗರಿ’ ಎಂದೇ ಪ್ರಸಿದ್ಧಿ..! ಅದರ ಸುತ್ತಮುತ್ತಲಿನ ಗಣಿಗಳಲ್ಲಿ 1862-1916ರಲ್ಲಿ ಗಣಿಗಾರಿಕೆ ನಡೆಸಿ ಸಾವಿರಾರು ಚಿನ್ನದ ಡಾಲರ್ ಗ ಳನ್ನು ತೆಗೆಯಲಾಯಿತು..!
1950ರ ನಂತರ 1000 ಜನಸಂಖ್ಯೆಯೊಂದಿಗೆ ಗಾರ್ನೆಟ್ ಅನ್ನು ಅಭಿವೃದ್ಧಿ ಮಾಡಲಾಯಿತು. ಅಲ್ಲಿ ಬಾರ್ಬರ್ ಶಾಪ್, ಹೋಟೆಲ್ಗಳು, ಡಜನ್ನಿಗೂ ಹೆಚ್ಚಿನ ಸಲೂನ್ಗಳು, ವೈದ್ಯರ ಕಚೇರಿಗಳೂ ಇದ್ದವು..!

ನೀವು ಹೊರಾಂಗಣದಲ್ಲಿ ಇರೋದನ್ನು ಬಯಸುವುದಾದರೇ..? ನಿಮಗೆ ಸೂಪರ್ನ್ಯಾಚ್ಯುರಲ್ ಶಕ್ತಿಗಳ ಬಗ್ಗೆ, ನೈಸರ್ಗಿಕ ವಿದ್ಯಮಾನಗಳ ಬಗ್ಗೆ ಆಸಕ್ತಿ ಇದ್ದರೆ ಈ ಪ್ರದೇಶದಲ್ಲಿ ಕಾಲ ಕಳೆಯಬಹುದು..! ನಿಮ್ಮನ್ನು ಸ್ವಯಂ ಸೇವಕನೆಂದು ಪರಿಗಣಿಸುವ ಸರ್ಕಾರ ನಿಮಗೆ ಹಣ ಕೊಡುತ್ತೆ..! ನಿಮಗೆ ಮರದ ಕ್ಯಾಬಿನ್, ಪ್ರೋಪೇನ್ ಸ್ಟವ್, ರೆಫ್ರಿಜಿರೇಟರ್, ಆಹಾರ ಸಾಮಗ್ರಿಗಳೂ ಮತ್ತು ಸಂಬಳವನ್ನೂ ಕೊಡಲಾಗುತ್ತೆ..! ಈ ಏಕಾಂತದಲ್ಲಿ ನಿಮಗೆ ಹೊಸ ಅನುಭವೂ ಆಗುತ್ತೆ..! ದುಡ್ಡೂ ಸಿಗುತ್ತೆ..! ಮೊಂಟಾನದ ಗಾರ್ನೆಟ್ ಪೇತ ನಗರಿ ಸ್ವಯಂ ಸೇವಕರನ್ನು ಎದುರು ನೋಡುತ್ತಿದೆ..!

Garnet Preservation Association
3255 Fort Missoula Road
Missoula, Montana 59804
406-329-3883

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...