ಇವರು ಪ್ರಪೋಸ್ ಮಾಡಿದ ತಕ್ಷಣ ಒಪ್ಪುವರು

Date:

ಪ್ರೀತಿ ಮತ್ತು ಪ್ರಣಯದ ಬಗ್ಗೆ ಯೋಚಿಸದವರು ಭೂಮಿಯಲ್ಲಿದ್ದಾರಾ? ಇಲ್ಲವೇ ಇಲ್ಲ ಅಲ್ವಾ? ಹುಡುಗರು ಪ್ರತೀ ಸಮಯದಲ್ಲೂ ತಮ್ಮನ್ನು ಬೆಂಬಲಿಸುವ ಸಂಗಾತಿಯನ್ನು ಪಡೆಯಬೇಕು ಎಂದು ಬಯಸುತ್ತಾರೆ. ಅವರೊಂದಿಗೆ ಜೀವನಪೂರ್ತಿ ಕಳೆಯಬೇಕು ಎಂಬ ಆಶಯ ಹೊಂದಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಪ್ರಾಮಾಣಿಕ ಸಂಗಾತಿ ಯಾರು ಎಂಬುದನ್ನು ಆಯ್ಕೆ ಮಾಡುವುದು ಬಹಳ ಕಷ್ಟ. ಪ್ರೀತಿ ಕುರಡು ಎನ್ನುವುದನ್ನು ನೀವು ಒಪ್ಪುವುದಾದರೆ, ಮೊದಲ ನೋಟದಲ್ಲೇ ಪ್ರೀತಿ ಅಥವಾ ಲೌ ಅಟ್‌ ದಿ ಫಸ್ಟ್‌ ಸೈಟ್‌ ಎನ್ನುವುದನ್ನೂ ಒಪ್ಪಲೇಬೇಕು. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯ ಹುಡುಗಿಯರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಮೇಷ

ಈ ರಾಶಿಯ ಹುಡುಗಿಯರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಅವರು ಯಾವಾಗಲೂ ಪ್ರೀತಿಯನ್ನು ನಂಬುತ್ತಾರೆ. ತಮ್ಮ ಪ್ರೀತಿಯ ಜೀವನದಲ್ಲಿ ಯಾವಾಗಲೂ ಹೊಸತನವಿರಬೇಕೆಂದು ಬಯಸುವ ಅವರುಸಂಗಾತಿಯನ್ನು ಪ್ರಲೋಭಿಸಲು ಅವರು ನಡುವೆ ಏನಾದರೂ ಮಾಡುತ್ತಾರೆ. ಅವರು ಸಂಗಾತಿಯೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ ಮತ್ತು ಲಾಂಗ್‌ ಡ್ರೈವ್‌ಗೆ ಹೋಗುತ್ತಾರೆ. ಮಂಗಳನ ಪ್ರಾಬಲ್ಯದಿಂದಾಗಿ, ಈ ರಾಶಿಯ ಹುಡುಗಿಯರು ಕೆಲವೊಮ್ಮೆ ಬೇಗನೆ ಕೋಪ ಮಾಡಿಕೊಳ್ಳುತ್ತಾರೆ, ಆದರೆ ಶೀಘ್ರದಲ್ಲೇ ಅವರ ಕೋಪವೂ ಶಾಂತವಾಗುತ್ತದೆ.

 

ಮಿಥುನ

ಈ ರಾಶಿಯ ಹುಡುಗರು ಅಥವಾ ಹುಡುಗಿಯರು ತುಂಬ ಸಂತೋಷವಾಗಿರಲು ಬಯಸುತ್ತಾರೆ. ಇತರರನ್ನು ಸಹ ನಗಿಸುತ್ತಾರೆ. ಆದರೆ ಪ್ರೀತಿಯ ಬಗ್ಗೆ ಹೇಳುವುದಾದರೆ ಈ ರಾಶಿಯ ಹುಡುಗಿಯರು ತುಂಬಾ ಮುಕ್ತ ಮನಸ್ಸಿನವರು. ಪ್ರೀತಿಯ ವಿಷಯ ಬಂದಾಗ, ಹುಡುಗಿಯರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಈ ರಾಶಿಯ ಹುಡುಗಿಯರು ಪ್ರತಿ ಕ್ಷಣವೂ ತಮ್ಮ ಸಂಗಾತಿಯೊಂದಿಗೆ ಇರಬೇಕೆಂದು ಬಯಸುತ್ತಾರೆ. ಸಂತೋಷವಾಗಲಿ ದುಃಖವಾಗಲಿ ಸಂಗಾತಿ ಜೊತೆಯಲ್ಲಿರಬೇಕು ಎಂಬುದನು ಅವರ ಆಶಯ.

ಸಿಂಹ

ಸಿಂಹ ರಾಶಿಯ ಹುಡುಗಿಯರು ಪ್ರೀತಿಯ ವಿಷಯದಲ್ಲಿ ತುಂಬಾ ಬದ್ಧತೆ ಮತ್ತು ಪ್ರಾಮಾಣಿಕತೆ ಹೊಂದಿರುತ್ತಾರೆ. ಅಂತಹ ಹುಡುಗಿಯರ ಮನಸ್ಸು ಯಾವಾಗಲೂ ತಮ್ಮ ಸಂಗಾತಿ ಮೇಲೆ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಉತ್ಸಾಹವು ಇರುತ್ತದೆ. ಸಂಗಾತಿಯನ್ನು ನೋಡಿಕೊಳ್ಳುವಲ್ಲಿ ಮತ್ತು ಆತನನ್ನು ಮುದ್ದು ಮಾಡುವಲ್ಲಿ ನಿಪುಣರಾಗಿರುತ್ತಾರೆ. ಅವರ ಪ್ರಣಯವು ಡೇಟಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ. ದಾಂಪತ್ಯದಲ್ಲಿ ತಮ್ಮದೇ ನಡೆಯಬೇಕೆಂಬ ಭಾವನೆ ಇರುತ್ತದೆ.

ತುಲಾ

 

ಶುಕ್ರನ ಒಡೆತನದ ಈ ರಾಶಿ ಚಿಹ್ನೆಯ ಹುಡುಗಿಯರು ಪ್ರೀತಿಯ ಬಗ್ಗೆ ಹುಚ್ಚರಾಗಿರುತ್ತಾರೆ. ಅವರು ಸಂಗಾತಿಯೊಂದಿಗೆ ಹೆಚ್ಚಿನ ಸಮರ್ಪಣೆ ಹೊಂದಿರುತ್ತಾರೆ. ಈ ರಾಶಿಯ ಹುಡುಗಿಯರು ಸಹ ತಮ್ಮ ಸ್ವಾಭಿಮಾನವನ್ನು ಪ್ರೀತಿಸುತ್ತಾರೆ. ಈ ರಾಶಿಯ ಹುಡುಗಿಯರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ಯಾರ ಹಸ್ತಕ್ಷೇಪವೂ ಅವರಿಗೆ ಇಷ್ಟವಿಲ್ಲ. ಒಮ್ಮೆ ಯಾರೊಂದಿಗಾದರೂ ಪ್ರೀತಿಸಲು ಶುರು ಮಾಡಿದರೆ ಆಕೆ ಆತನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಾಳೆ.

 

 

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...