ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್
ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸಿದ್ರೆ ಕಣ್ಣಿನಲ್ಲಿ ನೀರು ಬರೋದು ಸಹಜ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಗಾಳಿಗೆ ಸೇರಿದಾಗ ಅನಿಲ ರೂಪುಗೊಂಡು ಕಣ್ಣಿಗೆ ತಾಗುತ್ತದೆ. ಇದರಿಂದ ಕಣ್ಣಿನಲ್ಲಿ ಊರಿ, ಕಣ್ಣೀರು ಬರುವ ಸಮಸ್ಯೆ ಕಾಣಿಸುತ್ತದೆ.
ಆದರೆ, ಖ್ಯಾತ ಪೌಷ್ಟಿಕ ತಜ್ಞೆ ಲಿಮಾ ಮಹಾಜನ್ ಅವರ ಸಲಹೆಯ ಪ್ರಕಾರ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ, ಈ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
ಏನು ಮಾಡಬೇಕು?
ಈರುಳ್ಳಿಯ ಸಿಪ್ಪೆ ತೆಗೆದು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಅಥವಾ, ಕತ್ತರಿಸುವ ಮೊದಲು 10 ನಿಮಿಷಗಳ ಕಾಲ ಫ್ರಿಜ್‌ನಲ್ಲಿ ತಣ್ಣಗಾಗಿಸಲು ಇಡಿ.
ಈ ವಿಧಾನಗಳನ್ನು ಅನುಸರಿಸಿದರೆ ಈರುಳ್ಳಿಯಲ್ಲಿರುವ ಊರಿಯುಕ್ತ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಕತ್ತರಿಸುವಾಗ ಕಣ್ಣಿನಲ್ಲಿ ಕಿರಿಕಿರಿ, ಕಣ್ಣೀರು ಬರುವ ಸಮಸ್ಯೆ ತಪ್ಪುತ್ತದೆ.