ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್7 ಆರಂಭವಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ನಡೆಸಿಕೊಡುವ ಈ ಕಾರ್ಯಕ್ರಮ ಸತತ 6 ವರ್ಷ ಗೆದ್ದಿದೆ…ಈ ವರ್ಷದ ಕಾರ್ಯಕ್ರಮದ ಮೇಲಂತೂ ಸಾಕಷ್ಟು ನಿರೀಕ್ಷೆ ಇದೆ. ಈ ಬಾರಿ18 ಮಂದಿ ಸ್ಪರ್ಧಿಗಳಲ್ಲಿ ಎಲ್ಲರನ್ನೂ ಸೆಲೆಬ್ರಿಟಿಗಳು ಎಂದೇ ಕರೆಯಲ್ಪಟ್ಟಿದ್ದರೂ ಅನೇಕರು ಇನ್ನಷ್ಟೇ ಬಿಗ್ ಬಾಸ್ ನಿಂದಾಗಿ ಪರಿಚಿತರಾಗುತ್ತಿದ್ದಾರೆ. ಆದರೆ, ಈ ನಡುವೆ ಕೆಲವರು ನಿಜಕ್ಕೂ ಸೆಲೆಬ್ರಿಟಿಗಳೇ. ಅದರಲ್ಲೂ ಹೆಸರಾಂತ, ಜನಪ್ರಿಯ ಪತ್ರಕರ್ತ ರವಿ ಬೆಳಗೆರೆ ಕೂಡ ಒಬ್ಬರು.
ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ, ಪ್ರವೇಶಿಸಿದ್ದಾರೆ ಅನ್ನೋದೇ ಟಿಆರ್ ಪಿ .ಹೀಗುರುವಾಗ ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ಅದೆಷ್ಟು ಟಿ ಆರ್‌ಪಿ ಬರ್ಬೇಡ ಹೇಳಿ?
ಆದರೆ, ರವಿ ಬೆಳಗೆರೆಯವರಿಗೆ ಅನಾರೋಗ್ಯದ ಸಮಸ್ಯೆ ಕಾಡ್ತಿದೆ. ಡಾಕ್ಟರ್ ಬಿಗ್ ಬಾಸ್ ಗೆ ಹೋಗದಂತೆ ಸಲಹೆ ನೀಡಿದ್ದರೂ ಹಠದಿಂದ ದೊಡ್ಮನೆ ಪ್ರವೇಶಿಸಿದ ರವಿ ಬೆಳಗೆರೆ ಮೊದಲ ದಿನವೇ ಮನೆಯಿಂದ ಹೊರ ಬಂದಿದ್ದರು. ಬಳಿಕ ಚೇತರಿಸಿಕೊಂಡು ವಾಪಸ್ ಆಗಿದ್ದಾರೆ. ಆದರೆ, ಈ ವಾರವೇ ಅವರ ಬಿಗ್ ಬಾಸ್ ಜರ್ನಿ ಕೊನೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಗೆ ವಾಪಸ್ಸಾಗಿರುವ ಅವರು ನಾಮಿನೇಟ್ ಆಗಿದ್ದಾರೆ. ಅವರನ್ನು ನಾಮಿನೇಟ್ ಮಾಡಿದವರು ಕೊಟ್ಟ ಕಾರಣವೂ ಅವರ ಅನಾರೋಗ್ಯದ ಸಮಸ್ಯೆಯಾಗಿದೆ. ಅದಕ್ಕಿಂತ ಮಿಗಿಲಾಗಿ ವಾಪಸ್ಸು ಬಂದಿರುವ ಅವರು ಬಿಗ್ ಬಾಸ್ ಸ್ಪರ್ಧಿಯಲ್ಲ ಬದಲಾಗಿ ಅತಿಥಿ ಮಾತ್ರ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಶನಿವಾರವೇ ರವಿ ಬೆಳಗೆರೆ ದೊಡ್ಮನೆ ವಾಸ ಕೊನೆಯಾಗಲಿದೆಯಂತೆ. ಅವರ ಜೊತೆಗೆ ಇನ್ನೊಬ್ಬ ಸ್ಪರ್ಧಿ ಕೂಡ ಮನೆಯಿಂದ ಆಚೆ ಬರಲಿದ್ದು, ಯಾರಾಗ್ತಾರೆ ಕಾದುನೋಡ್ಬೇಕು.