ಈ ವಾರ ದೊಡ್ಮನೆಯಿಂದ ಹೊರ ಹೋದ ಸ್ಪರ್ಧಿ ಈಕೆ…
ಬಿಗ್ ಬಾಸ್ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿದೆ. ಉತ್ತಮವಾಗಿ ಆಟವಾಡುವ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರಲ್ಲಿ ಮೇಘ ಶ್ರೀ, ಜೀವಿತಾ ಹಾಗೂ ನಿವೇದಿತಾ ಗೌಡ. ಜೀವಿತಾ ಕಳೆದ ವಾರ ಕ್ಯಾಪ್ಟನ್ ಆಗಿದ್ದರು.
ಜೀವಿತಾ, ನಿವೇದಿತಾ ಗೌಡ ಹಾಗೂ ಮೇಘ ಶ್ರೀ ಅವರಲ್ಲಿ ಇಂದು ಕೊನೆಯ ದಿನವಾಗಿದ್ದು, ಮೇಘ ಶ್ರೀ ಅವರಿಗೆ. ಹೌದು, ವೈಲ್ಡ್ ಎಂಟ್ರಿ ಮೂಲಕ ಮನೆಗೆ ಬಂದ ಮೇಘ ಶ್ರೀ ಇಂದು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಜಯಶ್ರೀ ಮನೆಯಿಂದ ಹೊರ ಹೋದ ಸ್ಪರ್ಧಿಯಾದರೆ, ಈ ವಾರ ಮೇಘ ಶ್ರೀ ಹೋರ ಹೋಗಿದ್ದಾರೆ. ಈ ಮೂಲಕ ಮೇಘ ಶ್ರೀ ಅವರ ಬಿಗ್ ಬಾಸ್ ಮನೆಯ ಪಯಣ ಇಂದಿಗೆ ಕೊನೆಯಾಗಿದೆ.