14 ಮಂದಿ ಶಾಸಕರು, 7 ಮಂದಿ ವಿಧಾನಪರಿಷತ್ ಸದಸ್ಯರು ಆಸ್ತಿ ವಿವರವನ್ನು ಸಲ್ಲಿಸದ ಕಾರಣ ಲೋಕಾಯುಕ್ತರು ರಾಜ್ಯಪಾಲರಿಗೆ ವರದಿ ನೀಡಿದ್ದಾರೆ.
ಕಾರವಾರದ ಶಾಸಕಿ ರೂಪಾಲಿ ಸಂತೋಷ್ ನಾಯ್ಕ, ಅಫ್ಜಲ್‍ಪುರದ ಎಂ ವೈ ಪಾಟೀಲ್, ಸೇಡಂನ ರಾಜಕುಮಾರ್ ಪಾಟೀಲ್, ಹೊನ್ನಾಳಿಯ ಎಂ ಪಿ ರೇಣುಕಾಚಾರ್ಯ, ತುಮಕೂರು ನಗರದ ಜಿ ಬಿ ಜ್ಯೋತಿ ಗಣೇಶ್, ಕೆಜಿಎಫ್‍ನ ರೂಪಕಲಾ ಎಂ, ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಮಂಡ್ಯದ ಎಂ ಶ್ರೀನಿವಾಸ್, ಕೊಳ್ಳೇಗಾಲದ ಎನ್ ಮಹೇಶ್, ಅನರ್ಹ ಶಾಸಕ ಹುಣಸೂರಿನ ಎಚ್ ವಿಶ್ವನಾಥ್, ಸಿಂಧಗಿಯ ಎಂ ಸಿ ಮನಗೂಳಿ, ಬೀದರಿನ ರಹೀಮ್‍ಖಾನ್, ಚಾಮರಾಜಪೇಟೆಯ ಜಮೀರ್ ಅಹಮ್ಮದ್ ಖಾನ್, ಪಾವಗಡದ ವೆಂಕಟರಮಣಪ್ಪ, ರಾಣೆಬೆನ್ನೂರಿನ ಅನರ್ಹ ಶಾಸಕ ಆರ್ ಶಂಕರ್ ಅವರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವರದಿ ನೀಡಿದ್ದಾರೆ.
ವಿಧಾನ ಪರಿಷತ್ ಪೈಕಿ ಡಾ ತೇಜಸ್ವಿನಿಗೌಡ, ಕೆ ಜಿ.ಶ್ರೀಕಂಠೇಗೌಡ, ಎನ್ ಅಪ್ಪಾಜಿಗೌಡ, ಕೆ ಪಿ ನಂಜುಂಡಿ, ನಜೀರ್ ಅಹಮ್ಮದ್, ಮಲ್ಲಿಕಾರ್ಜನ, ಸಿ ಎಂ ಇಬ್ರಾಹಿಂ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಶಾಸಕರ ವಿರುದ್ಧ ರಾಜ್ಯಪಾಲರಿಗೆ `ಲೋಕಾ’ ನೋಟಿಸ್! ಕಾರಣ ಗೊತ್ತಾ?
Date: