ಈ ಸಲ ಕಪ್ ನಮ್ದೇ… ಕರ್ನಾಟಕದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ.. ಅದರಲ್ಲೂ ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಜಪಿಸುವ ಜಪ ಇದು. ಆದರೆ, ಅಭಿಮಾನಿಗಳಿಗೆ ಐಪಿಎಲ್ನಲ್ಲಿ ಸಿಕ್ತಿರೋದು ಬರೀ ನಿರಾಸೆ ಮಾತ್ರ… ಆರ್‌ಸಿಬಿ ಪದೇ ಪದೇ ಸೋಲ್ತಾ ಇದ್ರು ಅಭಿಮಾನಿಗಳಲ್ಲಿ ನಂಬಿಕೆಯೊಂದು ಹಾಗೆಯೇ ಜೀವಂತವಾಗಿದೆ.. ಈ ಸಲ ಕಪ್ ನಮ್ದೇ ಅನ್ನೋದು ಅಭಿಮಾನಿಗಳ ವಿಶ್ವಾಸ.. ಈ ಬಾರಿಯಾದರೂ ನಮ್ಮ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ಆಸೆಯನ್ನಿಟ್ಟುಕೊಂಡಿರುವ ಅಭಿಮಾನಿಗಳ ಆ ಆಸೆಗೆ ಈಗ ಬಲಬಂದಿದೆ..!
ಹೌದು, ಅತ್ಯಂತ ಆಕರ್ಷಣೀಯ ಹಾಗೂ ಪ್ರಬಲ ತಂಡ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದರೆ, ಕಪ್ ಗೆದ್ದಿಲ್ಲ ಅನ್ನೋದು ತಂಡದ ಕೊರಗು, ಅಭಿಮಾನಿಗಳ ನೋವು. ಇದೀಗ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಈ ಬಾರಿಯಾದರೂ ಆರ್ ಸಿಬಿ ಕಪ್ ಗೆಲ್ಲುತ್ತಾ ಎಂಬುದು ಆಸೆ.
ಯೆಸ್,. ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಯನ್ನು ಆರ್‌ಸಿಬಿ ಮಾಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕಟಿಚ್ ಅವರು ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ತಮ್ಮ ಹೊಸ ಹೆಡ್ ಕೋಚ್ ಹೆಸರನ್ನು ಇಂದು ಪ್ರಕಟಿಸಿದ್ದು, ಟೀಮ್ ಇಂಡಿಯಾದ ಮಾಜಿ ಕೋಚ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್-ಕೋಚ್ ಗ್ಯಾರಿ ಕಸ್ಟರ್ನ್ ಅವರ ಬದಲಿಗೆ ಕಟಿಚ್ ಅವರನ್ನು ಕೋಚ್ ಆಗಿ ಆರ್ ಸಿಬಿ ಆರಿಸಿಕೊಂಡಿದೆ.
ಅಂತೆಯೇ ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸ್ಸನ್ ಅವರು ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೆಸ್ಸನ್ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಟೀಮ್ ಇಂಡಿಯಾ ಹೆಡ್‌ಕೋಚ್ ಆಗಿ ಪುನರ್ ಆಯ್ಕೆಯಾಗಿದ್ದರು.