ಉತ್ತರಾಖಂಡ್ ಗೆ ಟ್ರೆಕ್ಕಿಂಗ್ ಗೆ ಅಂತಾ ತೆರಳಿದ್ದ 9 ಜನ ಕನ್ನಡಿಗರು ಬಾರದಲೋಕಕ್ಕೆ ತೆರಳಿದ್ದಾರೆ. ಹೌದು ಉತ್ತರಾಖಂಡ್ ನ ಸಹಸ್ರತಾಲ್ ಗೆ ಟ್ರೆಕ್ಕಿಂಗ್ ಗೆ ತೆರಳಿದ್ದ 22 ಜನರ ಪೈಕಿ 9 ಜನರು ಬಾರದಲೋಕಕ್ಕೆ ಪಯಣಿಸಿದ್ದಾರೆ. ಹಿಮಪಾತದ ಮಧ್ಯೆ ಗೋಲ್ ತಲುಪಿ ವಾಪಸ್ ಆಗ್ತಿದ್ದವರು ಬೇಸ್ ಕ್ಯಾಂಪ್ ಸೇರೋ ಮೊದಲೇ ಮಸಣದ ಕದ ತಟ್ಟಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಡೆಹ್ರಾಡೂನ್ ನಿಂದ ತವರಿಗೆ 13 ಜನ ಕನ್ನಡಿಗರು ಬಂದಿಳಿದಿದ್ದಾರೆ.
ಉತ್ತರ ಖಾಂಡ್ ನ ಡೆಹ್ರಾಡೂನ್ ನಲ್ಲಿ ಟ್ರಕ್ಕಿಂಗ್ ವೇಳೆ ಜನತೆ ಹವಾಮಾನ ವೈಪರಿತ್ಯಕ್ಕೆ ಸಿಲುಕಿದ್ದರು. 6E6136 ಇಂಡಿಗೋ ವಿಮಾನದ ಮೂಲಕ ಕೆಐಎಎ ಗೆ ಆಗಮಿಸಿದ್ದಾರೆ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ವಿವಿದೆಡೆ ಸಿಲುಕಿದ್ದ 13ಜನ ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಇದೀಗ 13ಜನ ಕನ್ನಡಿಗರನ್ನು ಕ್ಷೇಮವಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕರೆ ತರಲಾಯ್ತು. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ.