ಉಪೇಂದ್ರ ಜೊತೆ ಸಿನಿಮಾ ಬೆನ್ನಲ್ಲೇ ಮತ್ತೊಂದು ಸರ್​ಪ್ರೈಸ್​ ಕೊಟ್ಟ ನವನೀತ್!

Date:

ನವನೀತ್.. ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಸಖತ್ ಹೆಸ್ರು ಮಾಡಿರೋ ಯುವ ಡೈರೆಕ್ಟರ್! ಕರ್ವ ಸಿನಿಮಾ ಮೂಲಕ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟ ನವನೀತ್​ ಆ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದವರು. ಆ ಬಳಿಕ ಬಂದ ‘ಬಕಾಸುರ’ ಸಿನಿಮಾ ಕೂಡ ಒಂದು ಮಟ್ಟಿಗೆ ಸೌಂಡು ಮಾಡ್ತು. ಇದೀಗ ರಿಯಲ್ ಸ್ಟಾರ್ ಉಪೇಂದ್ರಗೆ ಆ್ಯಕ್ಷನ್ ಕಟ್ ಹೇಳೋಕೆ ಹೊರಟಿರೋದು ಗೊತ್ತೇ ಇದೆ. ಸದ್ಯದಲ್ಲೇ ಆ ಸಿನಿಮಾ ಟೈಟಲ್ ಅನೌನ್ಸ್ ಮಾಡಲಿದ್ದಾರೆ. ಈ ನಡುವೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ..! ಅದುವೇ ಸಿನಿಮಾ ನಿರ್ಮಾಣ..!
ಹೌದು ಡೈರೆಕ್ಟರ್ ನವನೀತ್ ಸಿನಿಮಾವೊಂದನ್ನು ನಿರ್ಮಿಸ ಹೊರಟಿದ್ದಾರೆ. ಕರ್ವ ಕ್ಯಾಮರಾಮನ್ ಮೋಹನ್ ನಿರ್ಮಾಣದಲ್ಲಿ ನವನೀತ್ ಅವರಿಗೆ ಸಾಥ್ ನೀಡುತ್ತಿದ್ದಾರೆ. MONA TALKIES ( ಮೋನಾ ಟಾಕೀಸ್ ( ಮೋ : ಮೋಹನ್ – ನ : ನವನೀತ್) ಬ್ಯಾನರ್​ನಲ್ಲಿ ಸೆಟ್ಟೇರುತ್ತಿರೋ ಹೊಸ ಸಿನಿಮಾದ ಹೆಸರು ‘ಟೈಪ್​ ರೈಟರ್’ ಅಂತ..!


ಟೈಪ್ ರೈಟರ್ ಮೂಲಕ ನವನೀತ್ ನಿರ್ಮಾಪಕರಾಗುತ್ತಿದ್ದು, ಹೇಮಂತ್ ಈ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಸ್ಯಾಂಡಲ್​ವುಡ್ ಪ್ರವೇಶಿಸುತ್ತಿದ್ದಾರೆ. ಆಕಾಂಕ್ಷ ಅವರ ಕಥೆಗೆ ನವನೀತ್ ಸ್ಕ್ರೀನ್​ಪ್ಲೇ ಬರೆದಿದ್ದಾರೆ. ಈ ಮಹಿಳಾ ಪ್ರಧಾನ ಚಿತ್ರಕ್ಕೆ ಆಕಾಂಕ್ಷ ನಾಯಕಿಯಾಗಿದ್ದು, ನಾಯಕನ ಹುಡುಕಾಟದಲ್ಲಿ ಚಿತ್ರತಂಡವಿದೆ. ಇನ್ನುಳಿದಂತೆ ರವಿಶಂಕರ್, ಊರ್ವಶಿ, ವಿಜಯ್ ಚಂದೂರ್, ಶಂಕರ್ ಅಶ್ವತ್ಥ್​ ಮೊದಲಾದವರು ತಾರಾಗಣದಲ್ಲಿದ್ದು. ಮಾರ್ಚ್​ 16ರಂದು ಸಿನಿಮಾ ಮುಹೂರ್ತ ನಡೆಯಲಿದೆ. ನಿರ್ಮಾಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರೋ ನವನೀತ್ ಮತ್ತು ಇಡೀ ಟೈಪರೇಟರ್ ಟೀಮ್​ ಗೆ ನಮ್ ಕಡೆಯಿಂದಲೂ ಬೆಸ್ಟ್ ವಿಶಸ್.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....