ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಯಮರಾಜನನ್ನು ಕರೆಸಿ ರಸ್ತೆಯಲ್ಲಿ ಸಂಚಾರಿ ಜಾಗೃತಿ ಮೂಡಿಸಲಾಯಿತು. ಹೆಲ್ಮೆಟ್ ಹಾಕದ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಯಮನ ಪ್ರಶ್ನೆಗೆ ಪುಸ್ತಕ ನೋಡಿ ಚಿತ್ರಗುಪ್ತ ಇಪ್ಪತ್ತು ಬಾರಿ ಎಂದು ಉತ್ತರಿಸಿದ್ದಾನೆ. ಈ ವೇಳೆ ಯಮ ಅಂತಹ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ನಮ್ಮ ಕುಟುಂಬ ನಿಮಗಾಗಿ ಕಾಯುತ್ತಿಲ್ಲವೇ? ಎಂದು ಎಚ್ಚರಿಸಿದ್ದಾನೆ. ಇದೇ ವೇಳೆ ಫೋನ್‍ನಲ್ಲಿ ಮಾತಾಡುತ್ತಿದ್ದ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯಮ, ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾನೆ! ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಈ ವಿನೂತನ ಪ್ರಯತ್ನ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ.