ಎನ್ಡಿಎಗೆ ಮುಖಭಂಗ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇದೆ: ಆರ್ ಅಶೋಕ್
ಬೆಂಗಳೂರು: ಎನ್ಡಿಎಗೆ ಮುಖಭಂಗ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಎನ್ಡಿಎಗೆ ಮುಖಭಂಗ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇದೆ. ಜೆಡಿಎಸ್ನವರು ಯಾರಿಗೆ ಟಿಕೆಟ್ ಕೊಟ್ಟರು ನಾವು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಇನ್ನೂ ಸಿಪಿ ಯೋಗೇಶ್ವರ್ ಸೈಕಲ್ ಗುರುತು, ಬಿಎಸ್ಪಿ ಎಲ್ಲ ಮುಗಿಸಿಕೊಂಡು ನಮ್ಮ ಪಕ್ಷಕ್ಕೆ ಬಂದವರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿ ಇದ್ದವರಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ವೋಟ್ ಅಲ್ಲೇ ಇರುತ್ತೆ. ನಾನು, ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ಟಿಕೆಟ್ ಅಂತ ಸಿಪಿ ಯೋಗೇಶ್ವರ್ ಅವರಿಗೆ ಹೇಳಿದ್ವಿ. ಹೆಚ್ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೆ, ಸಿಪಿ ಯೋಗೇಶ್ವರ್ ಒಪ್ಪಲಿಲ್ಲ ಎಂದು ತಿಳಿಸಿದರು.