ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲನೇ ಟೆಸ್ಟ್ ನಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಇನ್ನೂ ಇದು ನಾಯಕ ಕೊಹ್ಲಿ ಅವರ ನಾಯಕತ್ವದ ಅಡಿಯಲ್ಲಿ ಸೋತಿರುವ ಸತತ ನಾಲ್ಕನೇ ಟೆಸ್ಟ್ ಪಂದ್ಯ. ಗೆಲುವಿನ ನಾಗಾಲೋಟದಲ್ಲಿ ಮುಂದುವರಿಯುತ್ತಿತ್ತು ವಿರಾಟ್ ಕೊಹ್ಲಿ ನೇತೃತ್ವದ ತಂಡ ಇದೀಗ ಸತತ 4ಸೋಲುಗಳನ್ನು ಕಂಡಿದೆ. ಆಸ್ಟ್ರೇಲಿಯಾ ಪ್ರವಾಸದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೋಲನ್ನು ಕಂಡಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧದ ಸೋಲಿನ ಕುರಿತು ಮಾಜಿ ಇಂಗ್ಲೆಂಡ್ ಆಟಗಾರ ಮಾಂಟಿ ಪನೇಸರ್ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು ವಿರಾಟ್ ಕೊಹ್ಲಿ ಅವರ ನಾಯಕತ್ವದ ಕುರಿತು ಮಾತನಾಡಿರುವ ಮಾಂಟಿ ಪನೇಸರ್ ಅವರು ಎರಡನೆ ಟೆಸ್ಟ್ ಪಂದ್ಯವನ್ನು ಸಹ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೋತರೆ ಅವರು ನೈತಿಕ ಹೊಣೆ ಹೊತ್ತು ನಾಯಕತ್ವ ತ್ಯಜಿಸಲಿದ್ದಾರೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡ ಸತತ 4ಸೋಲುಗಳನ್ನು ಕಂಡಿದೆ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಕೊಹ್ಲಿ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ತೋರಿ ಸೋತಿತ್ತು.
ತದನಂತರ ರಹಾನೆ ಅವರ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿತು , ಹೀಗಾಗಿ ರಹಾನೆ ಅವರು ಉತ್ತಮ ವಾಗಿ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ 1ವೇಳೆ ಎರಡನೇ ಟೆಸ್ಟ್ ಪಂದ್ಯ ಸೋತರೆ ಕೊಹ್ಲಿ ಅವರು ನಾಯಕತ್ವವನ್ನು ಬಿಟ್ಟುಕೊಡಲಿದ್ದಾರೆ ಎಂದು ಮಾಂಟಿ ಪನೇಸರ್ ಪ್ರತಿಕ್ರಿಯೆ ನೀಡಿದರು.