ಎಳನೀರು ಕಳ್ಳನನ್ನ ಸೆರೆ ಹಿಡಿದ ಪೋಲಿಸ್ !

Date:

ಬೆಂಗಳೂರು:- ಸಾಮಾನ್ಯವಾಗಿ ಎಲ್ಲರೂ ನಗನಾಣ್ಯ ಕಳ್ಳತನ ಮಾಡಿದ್ರೆ, ಈ ಕಳ್ಳನ ಟಾರ್ಗೆಟ್ ಮಾತ್ರ ಎಳನೀರು ಮಾತ್ರ. ಹೌದು, ನಗರದಲ್ಲಿ ಎಳನೀರು ಕಳ್ಳತನ ಮಾಡುತ್ತಿದ್ದ ಅಸಾಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ಮೋಹನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ಮೂರು ತಿಂಗಳಿಂದ ಮೋಹನ್ ಎಳನೀರು ಕಳ್ಳತನ ಮಾಡುತ್ತಿದ್ದ. ಎಳನೀರು ಕದಿಯಲೆಂದೆ ಕಾರಿನಲ್ಲಿ ಅರಾಮಿನ ಬರುತ್ತಿದ್ದ.


ರಾತ್ರಿ ವೇಳೆ ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ಇತ್ತೀಚಿಗೆ ಎಳನೀರು ಕಳ್ಳತನ ಮಾಡಿದ್ದ. ರಾಜಣ್ಣ ಎಂಬುವರ 1150 ಎಳನೀರು ಆರೋಪಿ ಮೋಹನ್ ಕದ್ದಿದ್ದ. ಈ ಸಂಬಂಧ ಎಳನೀರು ವ್ಯಾಪಾರಿ ರಾಜಣ್ಣ ಗಿರಿನಗರ ಠಾಣೆಗೆ ದೂರು ನೀಡಿದ್ದ. ಸಿಸಿಟಿವಿಗಳ ಪರಿಶೀಲನೆ ನಡೆಸಿ ಪೊಲೀಸರು ಮೋಹನ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಪೊಲೀಸರ ತನಿಖೆ ವೇಳೆ ಎಳನೀರು ಕಳ್ಳನ ಜೂಜಾಟ ಬೆಳಕಿಗೆ ಬಂದಿದೆ. ಆನ್ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಆರೋಪಿಯು, ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಪ್ರತಿದಿನ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಆರೋಪಿ ಬರುತ್ತಿದ್ದ. ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ನಂತರ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ.
ನಂತರ ಟ್ಯಾಕ್ಸಿ ಬಿಟ್ಟು ರಾತ್ರಿ ವೇಳೆ ಎಳನೀರು ಕಳ್ಳತನಕ್ಕೆ ಇಳಿದಿದ್ದ. ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದ ಅಸಾಮಿ, ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ. ಡೈಲಿ 100-150 ಎಳನೀರು ಕದ್ದು ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮೂಲದ ಆರೋಪಿ ಮೋಹನ್ ಎನ್ನಲಾಗಿದೆ. ಮಡಿವಾಳದಲ್ಲಿ ವಾಸವಾಗಿದ್ದ ಮೋಹನ್ ನನ್ನು ಸಧ್ಯ ಅರೆಸ್ಟ್ ಮಾಡಿರುವ ಪೊಲೀಸ್ ತನಿಖೆ ಕೈಗೊಂಡಿದ್ದಾರೆ

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...