ಎಳೆನೀರು ಕುಡಿಯೋದ್ರಿಂದ ಏನೆಲ್ಲಾ ಲಾಭವಿದೆ ಗೊತ್ತಾ.?

Date:

ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಕುಡಿದರೆ ಮತ್ತಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ.

ಅದಷ್ಟೇ ಅಲ್ಲ ಎಳೆನೀರು ದೇಹದಲ್ಲಿ ಮ್ಯೂಕಸ್ ಉತ್ಪತ್ತಿಯನ್ನು ಹೆಚ್ಚಿಸಿ ಅಸಿಡ್ ಅಂಶದಿಂದಾಗುವ ಪರಿಣಾಮವನ್ನು ತಡೆಯುತ್ತದೆ. ಜೊತೆಗೆ ಎಳೆನೀರು ಕುಡಿಯುವುದರಿಂದ ದೇಹದಲ್ಲಿ ಪಿ.ಹೆಚ್. ಮಟ್ಟ ಹೆಚ್ಚುತ್ತವೆ.

* ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಎಳೆ ನೀರು ಸೇವಿಸಿ ಒಂದು ಗಂಟೆ ಬಳಿಕ ಉಪಹಾರ ಸೇವಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗೂ ದೇಹದ ಹೆಚ್ಚುವರಿ ತೂಕವನ್ನು ಶೀಘ್ರವಾಗಿ ಕಳೆದುಕೊಳ್ಳಲು ನೆರವಾಗುತ್ತದೆ.

* ಎಳೆನೀರನ್ನು ಸತತವಾಗಿ 20 ದಿನಗಳ ಕಾಲ ಕುಡಿಯುವ ಮೂಲಕ ಮೂಳೆಗಳಲ್ಲಿ ಗಾಳಿ, ಗುಳ‍್ಳೆಗಳು, ಮೂಳೆಗಳು ಟೊಳ್ಳಾಗುವುದನ್ನು ತಪ್ಪಿಸಬಹುದು.

* ನಮ್ಮ ದೇಹದ ಎಲ್ಲಾ ಅಂಗಗಳ ಮೂಲಕ ಸಾಗಬಲ್ಲ ಕ್ಷಮತೆ ಇರುವ ಎಳೆನೀರು ದೇಹದ ಎಲ್ಲಾ ಅಂಗಗಳನ್ನು ಈ ಮೂಲಕ ಸ್ವಚ್ಛಗೊಳಿಸಿ ಹಳೆಯ ಕಲ್ಮಶಗಳನ್ನು ನಿವಾರಿಸುತ್ತದೆ.

20 ದಿನ ಸತತವಾಗಿ ಎಳೆ ನೀರು ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ರಕ್ತ ಸಂಚಾರವನ್ನು ಸುಲಲಿತಗೊಳಿಸಲು ಎಳೆ ನೀರು ನೆರವಾಗುತ್ತದೆ.

* ಸತತವಾಗಿ 20 ದಿನಗಳ ಕಾಲ ಎಳೆನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...