ಗುಜರಾತ್: ಏಕತಾ ಪ್ರತಿಮೆ ಹೆಸರಲ್ಲಿ ನಿರ್ಮಾಣಗೊಂಡಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ವಿಶ್ವದ ಅದ್ಭುತಗಳಲ್ಲಿ ಒಂದು ಎಂದು ಹೇಳಿದ್ದು, ಈ ಪ್ರತಿಮೆಯನ್ನು ಶಾಂಘೈ ಕೋ ಆಪರೇಷನ್ ಸಂಸ್ಥೆಯು 8ನೇ ಅದ್ಭುತ ಎಂದು ಪರಿಗಣಿಸಿದೆ.ಶಾಂಘೈ ಕೋ-ಆಪರೇಷನ್ ಸಂಸ್ಥೆಯು ಎಂಟು ಸದಸ್ಯ ರಾಷ್ಟ್ರಗಳ ಒಕ್ಕೂಟ. ಇದರಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ ,ರಷ್ಯಾ, ಉಜ್ಬೇಕಿಸ್ತಾನ ಹಾಗೂ ತಜಕಿಸ್ತಾನ ಈ ಒಕ್ಕೂಟದಲ್ಲಿವೆ.
ಈ ಒಕ್ಕೂಟ ಏಕತಾ ಪ್ರತಿಮೆಯನ್ನು ದೇಶದ 8ನೇ ಅದ್ಭುತ ಎಂದು ಘೋಷಿಸಿದ್ದು, ಶಾಂಘೈ ಕೋ-ಆಪರೇಷನ್ ಸಂಸ್ಥೆಯು ತನ್ನ ಲಿಸ್ಟ್ನಲ್ಲಿ ಇದರ ಬಗ್ಗೆ ತಿಳಿಸಿದೆ.ಇನ್ನು ಸಚಿವ ಜೈ.ಶಂಕರ್ ಈ ಬಗ್ಗೆ ಪ್ರಸ್ತಾಪಿಸಿದ್ದು, ನಮ್ಮ ಪ್ರವಾಸಿ ತಾಣವಾದ ಏಕತಾ ಪ್ರತಿಮೆಯನ್ನು ಎಂಟನೇ ಅದ್ಭುತ ಎಂದು ಘೋಷಿಸಿದ್ದಕ್ಕೆ ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.