ಏಡ್ಸ್ ಗೆ ಎದೆಗುಂದದೆ ತನ್ನದೇ ಉದ್ಯಮ ಸಾಮ್ರಾಜ್ಯ ಕಟ್ಟಿದ ಸಾಧಕಿ..!
ಲಿಝಿ ಜೋರ್ಡನ್, ಏಡ್ಸ್ನಂತಹ ಭಯಾನಕ ರೋಗ ತಮ್ಮನ್ನು ಆವರಿಸಿಕೊಂಡ್ರೂ ಎದೆಗುಂದದೆ, ಒಬ್ಬ ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಸಾಧಕಿ. ಫ್ಯಾಷನ್ ದುನಿಯಾದಲ್ಲಿ ಕೆಲಸ ಮಾಡ್ತಾ ಇದ್ದಾರೆ.
ಲಿಝಿ ಅವರದು ಮೂಲತಃ ಲಂಡನ್. ಇವರಿಗೆ ಎಚ್ ಐವಿ ಸೋಂಕು, ಗಂಡನ ಆಕಾಲಿಕ ಮರಣ ದೊಡ್ಡ ಆಘಾತ ತಂದಿತು. ಎಚ್ಐವಿ ಸೋಕಿಂದ ಮತ್ತಷ್ಟು ಕುಬ್ಜರಾಗುತ್ತಾರೆ. ಆ ವಿಷಯವನ್ನು ಮರೆಯಲು ಅವರು, ಬಹುಕಾಲ ಯತ್ನಿಸುತ್ತಾರೆ. ಆಮೇಲೆ, ಲಂಡನ್ ನಿಂದ ಬಹುದೂರದ ಲಿಂಕನ್ಶೈರ್ ಎಂಬ ಗ್ರಾಮಕ್ಕೆ ಮರಳುತ್ತಾರೆ.
ಲಿಝಿ, ತಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲ ಧೈರ್ಯವಾಗಿ ಎದುರಿಸಲು ದೃಢ ಸಂಕಲ್ಪ ಮಾಡಿ, ಉದ್ಯಮ ಲೋಕಕ್ಕೆ ಎಂಟ್ರಿ ಕೊಟ್ರು. ಲಿಝಿ ಥಿಂಕ್2ಸ್ಪೀಕ್’ ಎಂಬ ಕಂಪನಿಯೊಂದನ್ನು ಆರಂಭಿಸಿದ್ರು. ಯುವ ಜನತೆ ಮತ್ತು ಶಾಲೆಗಳಲ್ಲಿನ ಕಠಿಣ ಸಂಭಾಷಣೆಗಳನ್ನು ನಿಭಾಯಿಸಲು ಥಿಂಕ್2ಸ್ಪೀಕ್ ನೆರವಾಗುತ್ತಿದೆ.

ಲಿಝಿ ಥಿಂಕ್2ಸ್ಪೀಕ್’ ಸಂಸ್ಥೆಯನ್ನು ಆರಂಭಿಸುವ ಮುನ್ನ ಸುಮಾರು ಒಂದು ವರ್ಷ ಯೋಜನೆ ರೂಪಿಸಿಸುತ್ತಾರೆ. ಒಂದು ಕಂಡೆ ಉದ್ಯಮವನ್ನು ಸಂಭಾಳಿಸೋದು, ಇನ್ನೊಂದ್ಕಡೆ ಏಡ್ಸ್ ವಿರುದ್ಧ ಹೋರಾಟ ಇವೆರಡೂ ಸುಲಭವೇನಲ್ಲ. ಆದ್ರೆ, ಸಿಕ್ಕ ಅವಕಾಶಗಳನ್ನೆಲ್ಲ ಉಪಯೋಗಿಸಿಕೊಂಡು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಜೀವನದ ನೈಸರ್ಗಿಕ ನೆಟ್ವರ್ಕ್ಗಳಲ್ಲಿ ತಾವು ಕೂಡ ಒಬ್ಬರು ಎನ್ನುವುದನ್ನು ತೋರಿಸುತ್ತಿದ್ದಾರೆ.
ಪ್ರತಿ ದಿನ ತಮ್ಮ ಸಂಸ್ಥೆ ಥಿಂಕ್2ಸ್ಪೀಕ್ಗೆ ಮಾರ್ಕೆಟಿಂಗ್ ಅವಕಾಶಗಳನ್ನು ಹೆಚ್ಚಿಸಲು ಶ್ರಮಪಡುತ್ತಿದ್ದಾರೆ. ಮತ್ತೆ, ಮುದ್ದಿನ ಮಗನಿಗೂ ಪೋಷಕಿ ಆಗಿದ್ದಾರೆ. ಒತ್ತಡದ ನಡುವೆಯೂ ಆ ಮಗುವಿನ ಸಂಪೂರ್ಣ ಜವಾಬ್ಧಾರಿ ಹೊತ್ತು, ಅವನೊಂದಿಗೆ ಕೂಡ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದಾರೆ.
ಥಿಂಕ್2ಸ್ಪೀಕ್ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಲಿಝಿ ಈಗ ಇಂಗ್ಲೆಂಡ್ ನಲ್ಲಿ ಫುಲ್ ಫೇಮಸ್. ಇಂಗ್ಲೆಂಡ್ ಲಾ ಬಾರ್ 2016ರಲ್ಲಿ ಪಟ್ಟಿ ಮಾಡಿದ ಮಾರ್ಕ್ ಕಿಂಗ್ ನಲ್ಲಿ 16 ಎಚ್ಐವಿ ವಕೀಲರ ಪೈಕಿ ಇವರು ಅಗ್ರಸ್ಥಾನ ಪಡೆದಿದ್ದಾರೆ. ಎಚ್ ಐವಿ ಪೀಡಿತರ ಪರ ಕೆಲಸ ಮಾಡುತ್ತಿದ್ದಾರೆ.
ಲಿಝಿ ಅವರು, ಕೇವಲ ಎಚ್ಐವಿ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಮಾತ್ರ ಜಾಗೃತಿ ಮೂಡಿಸುತ್ತಿಲ್ಲ. ನಷ್ಟ, ದೇಶೀಯ ನಿಂದನೆ, ಮತ್ತು ಮಾನಸಿಕ ಆರೋಗ್ಯ ಕೂಡ ಗಮನಹರಿಸಲೇಬೇಕಾದ ಕ್ಷೇತ್ರಗಳು” ಅನ್ನೋದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಲಿಝಿ ಅವರಿಗೆ ಈಗ ಮಾರ್ಕೆಟಿಂಗ್ ವಿಭಾಗದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ. ಆಭರಣಗಳ ಬಗ್ಗೆ ಕೂಡ ಅವರಿಗೆ ಚೆನ್ನಾಗಿ ತಿಳಿದಿದೆ. ಸದ್ಯ ಲಿಝಿ ಎರಡು ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಒಂದು ಯೆಲ್ಲೋ ಸ್ಟೋರಿ’ ಹೆಸರಿನ ಮಾರ್ಕೆಟಿಂಗ್ ಏಜೆನ್ಸಿ, ಅಲ್ಲಿ ಫ್ರೀಲಾನ್ಸರ್ಗಳ ತಂಡ ಪ್ರಾಜೆಕ್ಟ್ಗಳನ್ನು ನಿರ್ವಹಿಸುವುದು. ಇನ್ನೊಂದು ಸಂಸ್ಥೆ ಥಿಂಕ್2ಸ್ಪೀಕ್’.
ಅದೆನೇ ಆದ್ರೂ ಏಡ್ಸ್ನಂತಹ ಭಯಾನಕ ರೋಗ ತಮ್ಮನನ್ನ ಆವರಿಸಿಕೊಂಡ್ರೂ ಎದೆಗುಂದದೆ, ಒಬ್ಬ ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಲಿಝಿ ಅವರ ಸಾಹಸವನ್ನು ಮೆಚ್ಚಲೇಬೇಕು.






