ಕರ್ನಾಟಕದಲ್ಲಿ ಇಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ಮೈಸೂರು, ಮಂಡ್ಯ. ಬೆಂಗಳೂರು ಮತ್ತು ಶಿವಮೊಗ್ಗದ ಹಲವೆಡೆ ದಾಳಿ ನಡೆಸಿದ್ದು, ಮಂಡ್ಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಮನೆ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಂತೆಯೇ ಹಾಸನದಲ್ಲಿ ಸಚಿವ ಎಚ್ ಡಿ ರೇವಣ್ಣ ಅವರ ಆಪ್ತರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಪಿಡಬಲ್ಯೂಡಿ ಕಚೇರಿ ಮತ್ತು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಆದಾಯ ತೆರಿಗೆ ಅಧಿಕಾರಿಗಳು ಇಂದು ಮುಂಜಾನೆ ಜೆಡಿಎಸ್ ಮುಖಂಡರು ಹಾಗೂ ಗುತ್ತಿಗೆದಾರರು, ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಆದಾಯ ತೆರಿಗೆ ದಾಳಿ ಮೂಲಕ ಪ್ರಧಾನಮಂತ್ರಿ ಅವರ ನಿಜವಾದ ಸರ್ಜಿಲಕಲ್ ಸ್ಟ್ರೈಕ್ ಏನೆಂಬುದು ಬಯಲಾಗಿದೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣ ಅವರಿಗೆ ಉನ್ನತ ಸಾಂವಿಧಾನಿಕ ಹುದ್ದೆ ಆಮಿಷ ನೀಡಲಾಗಿದ್ದು, ಅದರಂತೆ, ಮೋದಿಯವರ ಸೂಚನೆಯಂತೆ ಪ್ರತಿಕಾರದ ದಾಳಿಗಳು ನಡೆಯುತ್ತಿವೆ.