ಜಲಚರಗಳ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಚೆನ್ನೈ ಟ್ರಕ್ಕಿಂಗ್ ಕ್ಲಬ್- ಸಿಟಿಸಿ ತಂಡ. ಇಂತಹದೊಂದು ವಿಭಿನ್ನ ಆಲೋಚನೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ತಂಡಕ್ಕೆ ಬಂದಿದೆ. ಏಳು ವರ್ಷಗಳ ಹಿಂದೆ ಈ ತಂಡ ಚೆನ್ನೈ ಕೋಸ್ಟಲ್ ಕ್ಲೀನ್ಅಪ್, ಅನ್ನುವ ಅಭಿಯಾನವನ್ನ ಆರಂಭ ಮಾಡಿದೆ.
ಚೆನ್ನೈ ಕೋಸ್ಟಲ್ ಕ್ಲೀನ್ಅಪ್ ಆರಂಭದಲ್ಲಿ ಸ್ವಯಂ ಸೇವಕರಿಂದ ಈ ಅಭಿಯಾನ ಆರಂಭವಾಗಿದ್ದು, ಇಂದು ಬೃಹತ್ತಾಗಿ ಬೆಳೆದಿದೆ. ಪ್ರತಿ ಮನೆಯ ಜನ ಈ ಆಂದೋಲನಕ್ಕೆ ಕೈ ಜೋಡಿಸುತ್ತಿದ್ದಾರೆ.
2010ರಲ್ಲಿ ಆರಂಭವಾದ ಈ ತಂಡದಲ್ಲಿ ಕೇವಲ 500 ಜನ ಸ್ವಯಂ ಸೇವಕರು ಮಾತ್ರ ಭಾಗಿಯಾಗಿದ್ದರು. ಈಗ 8ನೇ ಆವೃತಿಯ ಅಭಿಯಾನ ನಡೆಯುತ್ತಿದ್ದು ಆರು ಸಾವಿರಕ್ಕೂ ಹೆಚ್ಚಿನ ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. 6ಸಾವಿರ ಜನರಲ್ಲಿ 130 ತಂಡಗಳು ಐಟಿ ಕಂಪನಿಗಳಿಂದ ಬರುತ್ತವೆ. ಅದಷ್ಟೇ ಅಲ್ಲದೆ ಸ್ಪೋರ್ಟ್ ಅಸೋಶಿಯೆಷನ್ ನಿಂದಲೂ ಸಾಕಷ್ಟು ತಂಡಗಳು ಇದರಲ್ಲಿ ಭಾಗಿಯಾಗುತ್ತವೆ. ಈ ತಂಡಗಳು ವಾರ, 15 ಅಥವಾ ತಿಂಗಳಿಗೊಮ್ಮೆ ಡಿಕ್ಸಷನ್ ಮಾಡ್ಕೊಂಡು ಸಮುದ್ರ ತೀರ ಕ್ಲೀನ್ ಮಾಡುತ್ತವೆ
ಜಲಚರಗಳ ಸಂರಕ್ಷಣೆ ಅಂದ್ರೆ ನೀರಿನಲ್ಲಿ ವಾಸಮಾಡುವ ಪ್ರಾಣಿಗಳನ್ನ ಅಥವಾ ಜಲಚರಗಳನ್ನ ರಕ್ಷಣೆ ಮಾಡುವುದಲ್ಲ. ಚೆನ್ನೈನಲ್ಲಿರುವ ಸಾಗರ ಸಮುದ್ರಗಳ ಬಳಿ ಇರುವ ಪ್ಲಾಸ್ಟಿಕ್, ಗಾಜು, ಬಟ್ಟೆಗಳು ಮತ್ತು ಪಾದರಕ್ಷೆಗಳನ್ನ ಆಯ್ದು ತರಲಾಗುತ್ತದೆ. ನೀರಿನಲ್ಲಿ ಇಂತಹ ವಸ್ತುಗಳು ಹೋಗದಂತೆ ನೋಡಿಕೊಳ್ಳಲಾಗುತ್ತದೆ.
ಚೆನ್ನೈ ಮಾತ್ರವಲ್ಲದೆ, ಪುದುಚೇರಿ, ಹೈದ್ರಾಬಾದ್, ಕೊಯಮತ್ತೂರು, ವಿಶಾಖಪಟ್ಟಣಂ, ಕನ್ಯಾಕುಮಾರಿ ಹೀಗೆ ಅಕ್ಕ ಪಕ್ಕದ ಸಿಟಿಗಳಲ್ಲೂ ಈ ತಂಡ ಸಂಚಾರ ಮಾಡಿ ಅಲ್ಲಿಯ ಸಮುದ್ರ ತೀರ ಗಳನ್ನ ಸ್ವಚ್ಚ ಮಾಡುತ್ತಿದೆ.
ಇವರುಗಳಿಗೆ ಸಮುದ್ರದ ಸುತ್ತ-ಮುತ್ತ ಇರುವ ಮೀನುಗಾರರ ಕುಟುಂಬಸ್ಥರು ಕೂಡ ಕೈ ಜೋಡಿಸುತ್ತಿದ್ದಾರೆ. ಒಮ್ಮೆಲೆ 5ಟನ್ ಅಷ್ಟು ಪ್ಲಾಸ್ಟಿಕ್ ಸಂಗ್ರಹಣೆಯನ್ನು ಈ ತಂಡ ಮಾಡಿದ್ದು ಶೇಕಡ 90ರಷ್ಟು ಪ್ಲಾಸ್ಟಿಕ್ ಗಳನ್ನ ರೀ ಯ್ಯೂಸ್ ಮಾಡಿದ್ದಾರೆ ಅನ್ನೋದು ಸಂತೋಷದ ವಿಚಾರ.
ಒಟ್ಟಿನಲ್ಲಿ ಎಲ್ಲೆಂದರಲ್ಲಿ ಕೆರೆಕಟ್ಟೆಗಳು, ಹಳ್ಳಕೊಳ್ಳಗಳಲ್ಲಿ, ಸಮುದ್ರದಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆದು ಪರಿಸರ ಹಾಳುಗೆಡುವವರಿಗೆ ಈ ಟೀಮ್ ಆದರ್ಶ ಅಲ್ಲವೇ?
ಐಟಿ – ಬಿಟಿಗಳ ಮಹತ್ವದ ಚಿಂತನೆ – ಜಲಸಂರಕ್ಷಣೆಗಾಗಿ ಟೊಂಕ ಕಟ್ಟಿದ ತಂಡ
Date: