ಐಪಿಎಲ್ ಶುರುವಾದರೆ ಸಾಕು ಬೆಟ್ಟಿಂಗ್ ಬೆಟ್ಟಿಂಗ್ ಬೆಟ್ಟಿಂಗ್.. ನೀವೂ ಕೂಡ ಬೆಟ್ಟಿಂಗ್ನಲ್ಲಿ ತೊಡಗಿದ್ದೀರಾ..? ಈ ನ್ಯೂಸ್ ಮಿಸ್ ಮಾಡ್ದೇ ಓದಿ ಮತ್ತು ಈ ಕ್ಷಣವೇ ಕದ್ದು ಮುಚ್ಚಿ ಕಳ್ಳಾಟ ಆಡೋದನ್ನು ನಿಲ್ಲಿಸಿ ಬಿಡಿ.. ಇಲ್ದೇ ಇದ್ರೆ ಭಾರೀ ಕಷ್ಟ ಎದುರಾಗುವುದು ಖಚಿತ…ಅನುಮಾನವೇ ಬೇಡ..!
ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಪೊಲೀಸರು ಬೆಟ್ಟಿಂಗ್ನಲ್ಲಿ ತೊಡಗಿದ್ದ ಒಬ್ಬನನ್ನು ಬಂಧಿಸಿದ್ದಾರೆ. ಅವನಿಂದ 2.5 ಲಕ್ಷ ರೂ ನಗದು ಮತ್ತು 18 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಲೊಟ್ಟೆಗೊಲ್ಲಹಳ್ಳಿಯ ಶೇಖ್ ಶಫಿ ಎಂಬ 32 ವರ್ಷದ ವ್ಯಕ್ತಿ ಅರೆಸ್ಟ್ ಆದವ. ಮೊಬೈಲ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದ ಪ್ರಮುಖ ಆರೋಪಿ ಮುಕೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾ.28ರಂದು ನಡೆದ ರಾಯಲ್ ಚಾಲೆಂಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಟಿ-20 ಕ್ರಿಕೆಟ್ ಪಂದ್ಯವನ್ನು ಮೊಬೈಲ್ ಮೂಲಕ ಹಣ ಕಟ್ಟಿಸಿಕೊಂಡು ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಲೊಟ್ಟೆಗೊಲ್ಲಹಳ್ಳಿಯ ಜಲಗೇರಮ್ಮ ದೇವಸ್ಥಾನ ಹತ್ತಿರದ ಮನೆಯೊಂದರಲ್ಲಿ ಈ ದಂಧೆ ಮಾಡುತ್ತಿದ್ದನಂತೆ. ಅದರ ಜಾಡು ಹಿಡಿದು ಹೋದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.