ಐಪಿಎಲ್ ನಡೆಯುತ್ತೆ; ಬಿಸಿಸಿಐ ಅಧಿಕೃತ ಘೋಷಣೆ

admin
1 Min Read

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ (ಮೇ 29) ಅಧಿಕೃತವಾಗಿ ತಿಳಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲ ಕೂಡ ಇದನ್ನು ಖಾತರಿಪಡಿಸಿದ್ದಾರೆ.

ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚೆಯ ಬಳಿಕ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ಸದಸ್ಯರು ಒಪ್ಪಿಕೊಂಡಿರುವುದಾಗಿ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಸಭೆಯಲ್ಲಿ ಪುರುಷರ ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ನಿರ್ಧರಿಸಲು ಐಸಿಸಿಯಿಂದ ಹೆಚ್ಚುವರಿ ಕಾಲಾವಕಾಶ ಕೇಳಲು ಸಮಿತಿಯ ನಿರ್ಧರಿಸಿದೆ ಎಂದೂ ತಿಳಿದು ಬಂದಿದೆ.

‘ಐಸಿಸಿ ಟಿ20 ವಿಶ್ವಕಪ್ 2021ರ ಆತಿಥ್ಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಐಸಿಸಿಯಿಂದ ಸಮಯ ವಿಸ್ತರಣೆಯನ್ನು ಕೋರಲು ಬಿಸಿಸಿಐ ಎಸ್‌ಜಿಎಂ ಅಧಿಕಾರಿಗಳು ನಿರ್ಧರಿಸಿದ್ದಾರೆ,’ ಎಂದು ಬಿಸಿಸಿಐ ಹೇಳಿದೆ. ಬೋರ್ಡ್ ಹೇಳಿಕೆಯ ಪ್ರಕಾರ ಐಪಿಎಲ್‌ನ ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ.

TAGGED:
Share This Article
Leave a Comment