ಐಪಿಎಲ್ ಶುರುವಾಗುವುದಕ್ಕು ಮೊದಲೇ ರೋಹಿತ್ ಪಡೆಗೆ ಬಿಗ್ ಶಾಕ್..!!
ಈಗಾಗ್ಲೇ ತಮಗೆ ಬೇಕಾದ ಆಟಗಾರರನ್ನ ಕೊಂಡುಕೊಂಡಿರುವ ತಂಡಗಳು, ಐಪಿಎಲ್ ತಯಾರಿಯನ್ನ ಶುರು ಮಾಡಿವೆ.. ಈ ನಡುವೆ ಎಲ್ಲ ತಂಡಗಳು ತಮ್ಮ ತಮ್ಮ ಪ್ಲೇಯರ್ ಗಳ ಮೇಲೆ ಭರವಸೆಯನ್ನ ಇಟ್ಟುಕೊಂಡಿದ್ದು, ಮ್ಯಾಚ್ ಅನ್ನ ಗೆಲ್ಲಿಸುವ ಪ್ಲೇಯರ್ ಗಳನ್ನ ಹೊಂದಿವೆ.. ಅದರಲ್ಲಿ ಮುಂಬೈ ತಂಡದ ಬೌಲಿಂಗ್ ಬೆನ್ನೆಲುಬು ಜಸ್ ಪ್ರೀತ್ ಬುಮ್ರಾ ಮುಂದೆ ಶುರುವಾಗಲಿರುವ ಐಪಿಎಲ್ ನಲ್ಲಿ ಆಡೋದೆ ಡೌಟ್ ಆಗಿದೆ..
ಹೌದು ಈ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದ್ದು, ಟೀಮ್ ಇಂಡಿಯಾ ವರ್ಲ್ಡ್ ಕಪ್ ಗೆ, ಐಪಿಎಲ್ ಬಳಿಕ ಸಿದ್ದವಾಗಬೇಕಿದೆ.. ಹೀಗಾಗೆ ವರ್ಷ ಪೂರ್ತಿ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಬುಮ್ರಾಗೆ ಬ್ರೇಕ್ ನೀಡಲು ಮನಸ್ಸು ಮಾಡಿದೆ.. ಹೀಗಾಗೆ ಮುಂಬೈ ತಂಡದಲ್ಲಿ ಬುಮ್ರಾ ಕಾಣಿಸಿಕೊಳ್ಳುವುದು ಅನುಮಾನವಾಗಿದೆ..
ಅಕಸ್ಮಾತ್ ಫ್ರ್ಯಾಂಚೈಸ್ ಗಳ ಒತ್ತಯಕ್ಕೆ ಮಣಿದರು ಐಪಿಎಲ್ ನಲ್ಲಿ ಮೊದಲ ಕೆಲ ಮ್ಯಾಚ್ ಗಳಲ್ಲಿ ಮಾತ್ರ ಬುಮ್ರಾ ಪಾಲ್ಗೊಳ್ಳಲ್ಲಿದ್ದಾರೆ.. ಇದು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ..