ಬಿಗ್ ಬಾಸ್ ಕನ್ನಡದ ಸೀಸನ್ ಎಂಟು ನಿನ್ನೆ ಇಂದ ಪ್ರಾರಂಭ ಆಗಿದ್ದು ಇದರಲ್ಲಿ ಆಶ್ಚರ್ಯ ಅಂದ್ರೆ ಈ ಸೀಸನ್ ನಲ್ಲಿ ಪ್ರಶಾಂತ್ ಸಂಬರ್ಗಿ ಎಂಟ್ರಿ ಕೊಟ್ಟಿರೋದು ಎಲ್ಲೊ ಒಂದು ಕಡೆ ಅವರು ಇಷ್ಟು ದಿನ ಈ ಅವಕಾಶಕ್ಕೆ ಮಾಡಿದ್ರಾ ಎಂಬ ಮಾತು ಕೇಳಿ ಬರುತ್ತಿದೆ ಇನ್ನೊಂದು ವಿಷ್ಯ ಅಂದ್ರೆ ಪ್ರಶಾಂತ್ ಸಂಬರ್ಗಿ ಯಾರು ಅಂತ ನಿಮಗೆ ಗೊತ್ತಿರತ್ತೆ ಕೆಲವು ತಿಂಗಳ ಹಿಂದೆ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕಾರಣಕ್ಕೆ ತುಪ್ಪ ಸುರಿದಿದ್ದೆ ಈ ಸಂಬರ್ಗಿ ನನ್ನ ಬಳಿ ಎಲ್ಲಾ ಮಾಹಿತಿ ಇದೆ ಯಾರ್ ಯಾರು ಡ್ರಗ್ಸ್ ತೊಗೋತಿದ್ರು ನನಗೆ ಗೊತ್ತಿದೆ ಎಂದು ಹೇಳಿ ಕೆಲವು ದಿನ ಮಾದ್ಯಮದಲ್ಲಿ ಇವ್ರೇ ಇದ್ರು ಅಂತ ಹೇಳ್ಬೋದು ಇನ್ನು ಸಾಮಾಜಿಕ ಕಾರ್ಯಕರ್ತಅಂತ ಕರೀತಿದ್ರೆ ಇನ್ನು ಕೆಲವರು ಪ್ರಶಾಂತ್ ಸಂಬರ್ಗಿ ಅತಿ ಬುದ್ದಿವಂತ ಬಿಸಿನೆಸ್ ಮ್ಯಾನ್ ಅಂತೆಲ್ಲ ಹೇಳ್ತಾರೆ,

ಇನ್ನು ಅವರಿಗೆ ಯಾಕೆ ಬೇಕಿತ್ತು ಬಿಗ್ ಬಾಸ್ ಅಂತ ಕೇಳಿದ್ರೆ ಎಲ್ಲೊ ಒಂದು ಕಡೆ ತಾನು ಯಾವಾಗ್ಲೂ ನ್ಯೂಸ್ ಆಗ್ಬೇಕು ಅನ್ನೋ ಆಸೆ ಇತ್ತು ಸಂಬರ್ಗಿ ಅವರಿಗೆ ಅಂತ ಕೆಲವರು ಹೇಳ್ತಾರೆ, ಆದ್ರೆ ಎಲ್ಲೊ ಒಂದು ಕಡೆ ನಿಜವಾದ ಪ್ರಶಾಂತ್ ಸಂಬರ್ಗಿ ಏನು ಅಂತ ನೋಡಬೋದು ಅವರು ಜನರಿಗೆ ಮನೋರಂಜನೆ ನೀಡ್ತಾರೆ ಅಂತ ಕೆಲವರು ಹೇಳ್ತಾರೆ ಇದು ಪ್ರೀ ಪ್ಲಾನ್ ಇರಬಹುದಾ ಇದಕ್ಕೆ ಸಂಬರ್ಗಿ ಹೋರಾಟದ ಬಣ್ಣ ಬಳಿದು ಜನರನ್ನ ಆಕರ್ಷಣೆ ಮಾಡಿದ್ರಾ ಎಂಬ ಅನುಮಾನದ ಮಾತು ಬಿಗ್ ಬಾಸ್ ವೀಕ್ಷಕರ ಮಾತಾಗಿದೆ ಇನ್ನು ಒಳಗೆ ಪ್ರವೇಶ ಮಾಡಿದ ಸಂಬರ್ಗಿ ಏನೆಲ್ಲ ಗುಪ್ತ ವಿಚಾರ ಹೊರಹಾಕ್ತಾರೆ ಅಂತ ನೋಡಬೇಕಿದೆ.






