ಆಲ್ಕೋಹಾಲ್ ಜೀವಕ್ಕೆ ಹಾನಿಕಾರಣ…ಮದ್ಯವ್ಯಸನದಿಂದ ದೂರು ಇರಿ ಅಂತೀವಿ. ಡಾಕ್ಟರ್ ಕೂಡ ಮದ್ಯಪಾನಿಗಳಿಗೆ ಬುದ್ಧಿ ಹೇಳ್ತಾರೆ. ಆದರೆ , ಇಲ್ಲೊಂದು ಕಡೆ ಒಬ್ಬ ವ್ಯಕ್ತಿಗೆ ಡಾಕ್ಟರ್ ಬಿಯರ್ ಕುಡಿಸಿ ಜೀವ ಉಳಿಸಿದ್ದಾರೆ. ಅದೂ ಒಂದಲ್ಲ, ಎರಡಲ್ಲ, ಐದು ಲೀಟರ್ ಬಿಯರ್..!
ಹೌದು, ಇಂಥಾ ಒಂದು ವಿಚಿತ್ರ ಮತ್ತು ವೈದ್ಯಲೋಕದ ಅಚ್ಚರಿ ಘಟನೆ ನಡೆದಿರೋದು ವಿಯಾಟ್ನಂನಲ್ಲಿ. ಈ ವರದಿ ಈಗ ವೈರಲ್ ಆಗುತ್ತಿದೆ.
48 ವರ್ಷದ ನ್ಗುಯೇನ್ ವ್ಯಾನ್ ನಟ್ ಎಂಬ ವ್ಯಕ್ತಿಯ ರಕ್ತದಲ್ಲಿ ಮೆಥನಾಲ್ ಮಟ್ಟವು ಸಾಮಾನ್ಯಕ್ಕಿಂತ 1,119 ಪಟ್ಟು ಹೆಚ್ಚಿಗೆ ಇತ್ತಂತೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಆತನ ಪ್ರಾಣ ಕಾಪಾಡಲು ವೈದ್ಯರು ಸುಮಾರು 15 ಕ್ಯಾನ್ ಗಳಷ್ಟು ಬಿಯರ್ ನ್ನು ಆತನ ಹೊಟ್ಟೆಗೆ ಹಾಕಬೇಕಾಯಿತು ಎಂದು ವರದಿಯಾಗಿದೆ..!
ಆಲ್ಕೋಹಾಲ್ ನಲ್ಲಿ ಎಥನಾಲ್ ಮತ್ತು ಮೆಥನಾಲ್ ಅಂಶ ಇದೆ. ಮನುಷ್ಯರು ಆಲ್ಕೋಹಾಲ್ ಸೇವನೆ ಮಾಡಿದ ವೇಳೆ ಲಿವರ್ ಮೊದಲು ಎಥನಾಲ್ ನ್ನು ವಿಘಟಿಸುತ್ತದೆ. ರೋಗಿಯ ಮೆಥನಾಲ್ ಮಟ್ಟವು ಹೆಚ್ಚಾಗುತ್ತಲೇ ಇದ್ದ ಕಾರಣದಿಂದಾಗಿ ಲಿವರ್ ಮೆಥನಾಲ್ ವಿಘಟನೆಯನ್ನು ವಿಳಂಬ ಮಾಡುವ ಕಾರಣದಿಂದಾಗಿ ವೈದ್ಯರು ರೋಗಿಯ ಹೊಟ್ಟೆಗೆ ಮತ್ತಷ್ಟು ಬಿಯರ್ ಸುರಿದಿದ್ದಾರೆ..! ಇದರಿಂದ ಮೆಥನಾಲ್ ವಿಘಟನೆಯು ವಿಳಂಬವಾಗಿದೆ.
ದೇಹದಲ್ಲಿನ ಮೆಥನಾಲ್ ವಿಷಕಾರಿಯಾದ ಬಳಿಕ ಆ ವ್ಯಕ್ತಿಯ ಪ್ರಜ್ಞೆ ತಪ್ಪಿತ್ತು ಮತ್ತು ಫಾರ್ಮಿಕ್ ಆಮ್ಲವು ಉತ್ಪತ್ತಿಯಾಗಿತ್ತು. ಈ ವಿಚಿತ್ರ ಚಿಕಿತ್ಸೆಯಿಂದಾಗಿ ವ್ಯಕ್ತಿ ಮೂರು ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ ಎಂದು ವರದಿಯಾಗಿದೆ.
ಒಂದಲ್ಲ, ಎರಡಲ್ಲ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಜೀವ ಉಳಿಸಿದ ಡಾಕ್ಟರ್..!
Date: