ವಾಟ್ಸ್‌ಆಯಪ್ ಸಂಸ್ಥೆಯು ನವೆಂಬರ್ ತಿಂಗಳಲ್ಲಿ 17.59 ಲಕ್ಷ ಭಾರತೀಯರ ವಾಟ್ಸ್‌ಆಯಪ್ ಖಾತೆಗಳನ್ನು ನಿಷೇಧಿಸಿದೆ. ಒಂದೇ ತಿಂಗಳಲ್ಲಿ 602 ದೂರುಗಳನ್ನು ವಾಟ್ಸ್‌ಆಯಪ್ ಸಂಸ್ಥೆಯ ದೂರು ಪ್ರಕ್ರಿಯೆ ಸಮಿತಿಗೆ ಸಲ್ಲಿಸಲಾಗಿದ್ದು, ಅದರಲ್ಲಿ 36ರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಯು ಮಾಸಿಕ ವರದಿಯಲ್ಲಿ ತಿಳಿಸಿದೆ.
ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅನ್ವಯ ವಾಟ್ಸ್‌ಆಯಪ್ ಸಂಸ್ಥೆ ಕಳೆದ ಆರು ತಿಂಗಳುಗಳಿಂದ ಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ. 40 ಕೋಟಿಗೂ ಅಧಿಕ ಬಳಕೆದಾರರಿರುವ ಸಂಸ್ಥೆಯು ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ವಾಟ್ಸ್‌ಆಯಪ್ ಖಾತೆಗಳನ್ನು ನಿಷೇಧಿಸಿತ್ತು.