ಈಗಿನ ಯುಗದಲ್ಲಿ ಬೆಳಗ್ಗೆ ಎದ್ದು ಕಣ್ಣು ಬಿಡುತ್ತಲೇ ಫಸ್ಟ್ ನೋಡೋದೆ ಮೊಬೈಲ್. ಒಬ್ಬೊಬ್ಬರು ಒಂದೊಂದು ಕಾರ್ಯ ಚಟುವಟಿಕೆಯಲ್ಲಿ ತಲ್ಲೀನರಾಗ್ತಾರೆ. ಕೆಲವರಿಗೆ ಎದ್ದ ಕೂಡಲೇ ಕಾಫಿ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ… ಮತ್ತೆ ಕೆಲವರು ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ರೆಡಿಯಾಗ್ತಾರೆ. ಎದ್ದಕೂಡಲೇ ನೀರು ಕುಡಿಯವವರು ತೀರಾ ಕಡಿಮೆ ಮಂದಿ. ಆದ್ರೆ ಬೆಳಗ್ಗೆಯೇ ನೀರು ಕುಡಿಯುವುದರಿಂದ ಎಷ್ಟು ಉಪಯೋಗವಾಗುತ್ತೆ ಗೊತ್ತಾ..?ಮುಂದೆ ಓದಿ..
ಎದ್ದಕೂಡಲೇ ನೀರು ಕುಡಿಯುವುದರಿಂದ ದುಗ್ಧರಸದ ವ್ಯವಸ್ಥೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ. ಸೋಂಕುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ.ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದರ ಜೊತೆಗೆ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರುವ ಕುಡಿಯುವದರಿಂದ ದೇಹ ಸಮಸ್ಥಿತಿಯಲ್ಲಿರುತ್ತದೆ. ದೇಹದಲ್ಲಿ ಹೊಸ ರಕ್ತ ಮತ್ತು ಸ್ನಾಯುಗಳ ಕೋಶಗಳು ಉತ್ಪತ್ತಿಯಾಗುತ್ತವೆ. ಇದರಿಂದ ಚರ್ಮ, ಕೂದಲು ಕಾಂತಿಯುತವಾಗುವುದಲ್ಲದೇ, ಮತ್ತಷ್ಟು ಆರೋಗ್ಯವಾಗಿರುತ್ತದೆ. ಹಾಗೂ ಹೆಚ್ಚು ಕಾಂತಿಯುತವಾಗಿರುತ್ತೀರಾ ಅಲರ್ಜಿ, ಸಾಮಾನ್ಯ ರೋಗಗಳು, ಮೂತ್ರಪಿಂಡದ ಸಮಸ್ಯೆ, ಕಿಡ್ನಿ ಕಲ್ಲಿನ ತೊಂದರೆಯಿಂದ ಪಾರಾಗಬಹುದು.
ಹೌದು.. ಬೆಳಗ್ಗೆ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ಇಷ್ಟೇಲ್ಲಾ ಅನುಕೂಲವಾಗುತ್ತದೆ.