ಪ್ರೀತಿಯಲ್ಲಿ ಎಲ್ಲವೂ ಸರಿ ಇರುವಾಗ ಎಲ್ಲವೂ ಚಂದ….ಅದೇ ಏನಾದರೂ ಸ್ವಲ್ಪ ಉಲ್ಟಾ ಆಯ್ತು ಅನ್ಕೊಳ್ಳಿ ನೂರೆಂಟು ಕಿರಿಕಿರಿ. ಅದಕ್ಕಿಂತ ಮಿಗಿಲಾಗಿ ಸಾವು!
ಲವ್ ಅಂತ ಬಂದಾಗ…ಅದು ಯಕ್ಕುಟ್ಟು ಹೋದಾಗ ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆಯನ್ನು ,ಪ್ರೀತಿ ವಿಚಾರದಲ್ಲಾಗುವ ಕೊಲೆಯನ್ನು ಕೇಳ್ತಾನೇ ಇರ್ತೀವಿ, ನೋಡ್ತಾನೇ ಇರ್ತೀವಿ.
ಈಗ ಇಷ್ಟೆಲ್ಲಾ ಹೇಳೋಕೆ ಕಾರಣ ನಮ್ಮ ಮಂಡ್ಯದಲ್ಲಾಗಿರುವ ಮೂರು ಸಾವು..ಒಂದೇ ಒಂದು ಲವ್ ಸ್ಟೋರಿಗೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ಹುಡುಗಿ, ಆಕೆಯ ತಾತ, ಮತ್ತು ಪ್ರಿಯಕರನ ಅಪ್ಪ ಸಾವನ್ನಪ್ಪಿದವರು!
ಹೌದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ.
ಆಕೆ ಹೆಸರು ಕಾಂಚನ ಅಂತ , ಅವಳಿನ್ನೂ ಅಪ್ರಾಪ್ತೆ…16ವರ್ಷದ ಹುಡ್ಗಿ. ಅವಳಿಗೂ ಹೊನೇಹಳ್ಳಿಯ ಮಹೇಶ್ ಎಂಬಾತನಿಗೂ ಲವ್ ಆಗಿತ್ತು. ಅದೇನಾಗಿತ್ತೋ ಗೊತ್ತಿಲ್ಲ…ಪೊಲೀಸ್ ತನಿಖೆಯಿಂದಷ್ಟೇ ಎಲ್ಲಾ ವಿಚಾರ ಬಯಲಾಗಬೇಕಿದೆ. ಈ ಕಾಂಚನ ಅಕ್ಟೋಬರ್ 5 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಭಾನುವಾರ ಸಾವನ್ನಪ್ಪಿದ್ದಾಳೆ.
ಕಾಂಚನ ಆತ್ಮಹತ್ಯೆಗೆ ಯತ್ನಿಸಿದ್ದ ಸುದ್ದಿ ಕೇಳುತ್ತಿದ್ದಂತೆ ಆಕೆಯ ಪ್ರಿಯಕರ ಮಹೇಶನ ತಂದೆ ಸೋಮಶೇಖರ್ ಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರ ಬೆನ್ನಲ್ಲೇ ಕಾಂಚನಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದ ಆಕೆಯ ತಾತ ಊಟಿ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೀಗೆ ಒಂದು ಪ್ರೇಮ ಕಹಾನಿ ಮೂರು ಜೀವಗಳನ್ನು ಬಲಿ ಪಡೆದಿದೆ.