ಒಂದೇ ನಿಲುವು ತಾಳಿದ ಸುದೀಪ್ ಮತ್ತು ದರ್ಶನ್..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದೇ ನಿಲುವು ತಾಳಿದ್ದಾರೆ. ಅರೆ, ಇಬ್ಬರೂ ಒಂದಾದ್ರು ಅಂದುಕೊಂಡ್ರಾ ವಿಷಯ ಅದಲ್ಲ..!
ದರ್ಶನ್ ಮತ್ತು ಸುದೀಪ್ ಒಂದು ಟೈಮ್​ನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಕುಚಿಕು ಗೆಳೆಯರು ಸಿಸಿಎಲ್​ ಸೇರಿದಂತೆ ಅನೇಕ ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆಗಾಗ ಮೀಟ್ ಆಗ್ತಿದ್ರು.. ಒಂದೇ ವರ್ಡ್​ನಲ್ಲಿ ಹೇಳ್ಬೇಕಂದರೆ ಇಬ್ಬರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು.
ಆದರೆ, ಇಬ್ಬರ ನಡುವೆ ಮೂಡಿದ ಒಂದೇ ಒಂದು ವಿಷ ಭಿನ್ನಾಭಿಪ್ರಾಯ ಸ್ನೇಕವನ್ನೇ ಕಡಿಯಿತು. ಸುದೀಪ್​ಗೆ ಈ ಬಗ್ಗೆ ಕೇಳಿದಾಗ ಅವನು ನನ್ನ ಗೆಳೆಯನೇ ಹೃದಯದಲ್ಲೇ ಇರುತ್ತಾನೆ ಎಂದು ಹೇಳುತ್ತಾರೆ. ಆದರೆ. ಮೊನ್ನೆ ಮೊನ್ನೆ ದರ್ಶನ್​ಗೆ ಈ ಪ್ರಶ್ನೆ ಎದುರಾದಾಗ ದರ್ಶನ್ ಗರಂ ಆಗಿದ್ದರು. ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳ್ಬೇಕು, ಯಾರ ಫೋನ್ ಎತ್ ಬೇಕು, ಎತ್ ಬಾರ್ದು, ಯಾರ ಫ್ರೆಂಡ್​ ಶಿಪ್ ಮಾಡ್ಬೇಕು, ಮಾಡ್ಬಾರ್ದು, ರಾತ್ರಿ ಹೆಂಡ್ತಿಯ ಜೊತೆ ಮಲಗಬಹುದಾ, ಮಲಗಬಾರದಾ ಅಂತ ಚಾನಲ್​ ಅವರನ್ನು ಕೇಳಬೇಕಾ? ನಮ್ ವೈಯಕ್ತಿಕ ವಿಚಾರ ನಾವು ನೋಡ್ಕೋತ್ತೀವಿ ಎಂದು ಗರಂ ಆಗಿದ್ದರು..! ಕಿಚ್ಚನ ವಿರುದ್ಧ ಇನ್ನೂ ಕಿಚ್ಚು ಕಮ್ಮಿಯಾಗಿಲ್ಲ ಎನ್ನುವುದು ಅವರ ಮಾತಿನ ಹಿಂದಿನ ಕರಾಳತೆಯಾಗಿತ್ತು.
ಆದರೆ, ಇಂದು ಸುದೀಪ್ ಮತ್ತು ದರ್ಶನ್​ ಒಂದೇ ನಿಲುವು ತಾಳಿದ್ದಾರೆ. ಉತ್ತರ ಕರ್ನಾಟಕದ ವಿಷಯದಲ್ಲಿ ದರ್ಶನ್, ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.
ಸುದೀಪ್ ಸೆಲ್ಫಿ ವಿಡಿಯೋ ಮೂಲಕ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಾವು ಕೂಡ ಸಾಥ್ ನೀಡುವ ಭರವಸೆ ನೀಡಿದ್ದಾರೆ. ಅದೇರೀತಿ ದರ್ಶನ್ ಟ್ವೀಟ್ ಮೂಲಕ ಉತ್ತರ ಕರ್ನಾಟಕದ ಜನರ ನೀರಿಗೆ ಧಾವಿಸುವಂತೆ ಕರೆ ಕೊಟ್ಟಿದ್ದಾರೆ. ಹೀಗೆ ಇಬ್ಬರೂ ಒಂದೇ ನಿಲುವು ತಾಳಿದ್ದಾರೆ.

ಉತ್ತರ ಕರ್ನಾಟಕದ ವಿಚಾರದಲ್ಲಿ ಒಂದೇ ನಿಲುವು ತಳೆದಿರುವ ಇವರು ಆತ್ಮೀಯ ಸ್ನೇಹಿತರಾಗಿ ಒಟ್ಟಿಗೇ ಒಂದಾದರೂ ಸಿನಿಮಾ ಮಾಡಬೇಕು ಎನ್ನುವುದು ಅಸಂಖ್ಯ ಅಭಿಮಾನಿಗಳ ಆಶಯ.

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...