‘ಕನಕಪುರದ ಬಂಡೆ ಛಿದ್ರವಾಗುತ್ತೆ ‘ : ಡಿಕೆಶಿಗೆ ಬಿಜೆಪಿ ಅಭ್ಯರ್ಥಿ ಟಾಂಗ್

Date:

ಕನಕಪುರದ ಬಂಡೆ ಈಗಾಗಲೇ ಛಿದ್ರ-ಛಿದ್ರವಾಗಿ ಹೊಡೆಯಲು ಪ್ರಾರಂಭವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಡಿ.ಕೆ.ಶಿವಕುಮಾರ್ ರವರಿಗೆ ಟಾಂಗ್ ನೀಡಿದರು.

ಸೂರ್ಯನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಬಿಜೆಪಿ ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಪಲಾಯನ ಮಾಡುತ್ತಿದ್ದಾರೆ ಎಂದರು.

ರಾಮಲಿಂಗಾರೆಡ್ಡಿ ರವರಿಗೆ ಮಂತ್ರಿ ಸ್ಥಾನವನ್ನು ತಪ್ಪಿಸಿದ್ದು ಇದೇ ಡಿ.ಕೆ. ಶಿವಕುಮಾರ್ ಈಗ ಮತ ಪಡೆಯುವ ಉದ್ದೇಶದಿಂದ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿರವರ ಮೂಲಕ ಪ್ರಚಾರ ಮಾಡುತ್ತಿರುವುದು ದುರಂತ ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಧಾನಿ ಮೋದಿರವರು ಸಾಕಷ್ಠು ಅನುಧಾನ ನೀಡಿದ್ದು ಸಂಸದ ಡಿ.ಕೆ. ಸುರೇಶ್ ತಮ್ಮ ಕಾಂಗ್ರೆಸ್ ಪಕ್ಷದ ಅನುಧಾನ ಎಂದು ಬಿಂಬಿಸಿಕೊಂಡಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದರು.

ಜಿಪಂ ಅಧ್ಯಕ್ಷ ಸಿ.ಮುನಿರಾಜು, ಬಮೂಲ್ ಅಧ್ಯಕ್ಷ ಬಿಜೆ ಆಂಜಿನಪ್ಪ, ಬಿಜೆಪಿಯ ಸಜರ್ ಪುರ ರಾಘವೇಂದ್ರ, ಬಂಡಾಪುರ ರಾಮಚಂದ್ರ, ಗುಡ್ಡಹಟ್ಟಿ ನಾಗೇಶ್ ರೆಡ್ಡಿ, ಪವಿತ್ರ ಜಯಪ್ರಕಾಶ್, ವಾತ್ಸಲ್ಯ ಲಷ್ಮೀನಾರಾಯಣ, ಮುನಿರತ್ನಮ್ಮ ನಾರಾಯಣಪ್ಪ, ಕೆ.ಸಿ. ರಾಮಚಂದ್ರ, ಹುಲ್ಲಳ್ಳಿ ಶ್ರೀನಿವಾಸ್, ಕೆ.ವಿ. ಕೇಶವರೆಡ್ಡಿ ಮತ್ತಿತರು ಹಾಜರಿದ್ದರು.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...