ಕನ್ನಡತಿ ವೇದಾಕೃಷ್ಣಮೂರ್ತಿಗೆ ಭಾರಿ ನಿರಾಸೆ!

Date:

ಭಾರತೀಯ ಆಟಗಾರ್ತಿಯರ ವಾರ್ಷಿಕ ವೇತನದ ವಿವಿಧ ಗ್ರೇಡ್‌ಗಳನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪ್ರಕಟಿಸಿದೆ. ಈ ವೇತನ ಶ್ರೇಣಿ ಟೀಮ್ ಇಂಡಿಯಾದ ಹಿರಿಯ ಆಟಗಾರ್ತಿಯರ ಶ್ರೇಣಿ ಆಗಿರಲಿದೆ. ಅಕ್ಟೋಬರ್ 2020ರಿಂದ ಸೆಪ್ಟೆಂಬರ್ 2021ರವರೆಗಿನ ವೇತನ ಶ್ರೇಣಿ ಇದಾಗಿದೆ. ಬಿಸಿಸಿಐ ಒಟ್ಟು 19 ಆಟಗಾರ್ತಿಯರನ್ನು ಈ ಒಪ್ಪಂದದಲ್ಲಿ ಉಳಿಸಿಕೊಂಡಿದೆ.

ಒಟ್ಟು 3 ವೇತನ ಶ್ರೇಣಿಗಳನ್ನು ಬಿಸಿಸಿಐ ಪ್ರಕಟಿಸಿದೆ. ಈ ವೇತನ ಶ್ರೇಣಿಯ ಪ್ರಕಾರ ಗ್ರೇಡ್ A ಆಟಗಾರ್ತಿಯರಿಗೆ 50 ಲಕ್ಷ, ಗ್ರೇಡ್ B ಆಟಗಾರ್ತಿಯರಿಗೆ 30 ಲಕ್ಷ ಹಾಗೂ ಗ್ರೇಡ್ C ಆಟಗಾರ್ತಿಯರಿಗೆ 10 ಲಕ್ಷ ವೇತನವನ್ನು ಬಿಸಿಸಿಐ ನೀಡಲಿದೆ. ಕಳೆದ ಬಾರಿ ವೇತನದ ಒಪ್ಪಂದದಲ್ಲಿ 22 ಆಟಗಾರ್ತಿಯರನ್ನು ಘೋಷಿಸಲಾಗಿತ್ತು ಆದರೆ ಈ ಬಾರಿಯ ವೇತನ ಶ್ರೇಣಿಯಲ್ಲಿ 19 ಆಟಗಾರ್ತಿಯರ ಹೆಸರನ್ನು ಮಾತ್ರ ಘೋಷಣೆ ಮಾಡಲಾಗಿದೆ.

ಉತ್ತಮ ಪ್ರದರ್ಶನವನ್ನು ನೀಡಿದ ಶೆಫಾಲಿ ವರ್ಮಾ ಹಾಗೂ ಪೂನಮ್ ರಾವತ್ ‘ಗ್ರೇಡ್ ಸಿ’ನಿಂದ ‘ಗ್ರೇಡ್ ಬಿ’ಗೆ ಬಡ್ತಿಯನ್ನು ಪಡೆದಿದ್ದಾರೆ. ಹಾಗೂ ವೇದಾ ಕೃಷ್ಣಮೂರ್ತಿ ಮತ್ತು ಏಕ್ತಾ ಬಿಸ್ತ್ ಅವರನ್ನು ಈ ವೇತನ ಶ್ರೇಣಿಯಿಂದ ಕೈಬಿಡಲಾಗಿದೆ.

ಬಿಸಿಸಿಐ ಆಯ್ಕೆ ಮಾಡಿರುವ 19 ಆಟಗಾರ್ತಿಯರ ವೇತನ ಶ್ರೇಣಿಯ ವಿವರ ಈ ಕೆಳಕಂಡಂತಿದೆ :

ಗ್ರೇಡ್ ಎ ( 50 ಲಕ್ಷ ) : ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಹಾಗೂ ಪೂನಂ ಯಾದವ್

ಗ್ರೇಡ್ ಬಿ ( 30 ಲಕ್ಷ ) : ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಮ್ ರಾವತ್, ರಾಜೇಶ್ವರಿ ಗಾಯಕ್ವಾಡ್, ಶೆಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ತನಿಯಾ ಭಾಟಿಯಾ ಹಾಗೂ ಜೆಮಿಮಾ ರೊಡ್ರಿಗಸ್.

ಗ್ರೇಡ್ ಸಿ ( 10 ಲಕ್ಷ ) : ಮನ್ಸಿ ಜೋಶಿ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಹರ್ಲಿನ್ ಡಿಯೋಲ್, ಪ್ರಿಯಾ ಪೂನಿಯಾ ಮತ್ತು ರಿಚಾ ಘೋಷ್.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...