ಕನ್ನಡದಲ್ಲೇ ಯುಪಿಎಸ್ ಸಿ ಪರೀಕ್ಷೆ ಬರೆದು ರ್ಯಾಂಕ್ ಪಡೆದ ದರ್ಶನ್ ಹೇಳಿದ ‘ಕೃಷಿ‌’ ಪಾಠ..

Date:

ಯುಪಿಎಸ್ ಸಿ ಪರೀಕ್ಷೆ ಅಂದರೆ ಸಾಮಾನ್ಯವಲ್ಲ. ಈ ಪರೀಕ್ಷೆ ಬರೆದು ರ್ಯಾಂಕ್ ತಗುಳೋದು ಅಂದರೆ‌ ಸುಲಭದ‌‌‌ ಸಂಗತಿ ಅಲ್ಲವೇ ಅಲ್ಲ. ಯುಪಿಎಸ್​ಸಿ ಪರೀಕ್ಷೆ ಬರೆದು ರ್ಯಾಂಕ್ ಪಡೆದ ಅಭ್ಯರ್ಥಿಗಳ ‌ಕಠಿಣ‌ ಶ್ರಮ‌ ಅವರಿಗೆ ಗೊತ್ತು. ಅದರಲ್ಲೂ ‌ಕೃಷಿ‌‌‌ ಮಾಡುತ್ತಿದ್ದ ಹುಡುಗ ಇಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ ‌ಟಾಪರ್.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದ ದರ್ಶನ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 594ನೇ ರ‍್ಯಾಂಕ್ ಪಡೆದಿದ್ದಾರೆ. ಹರಳಕಟ್ಟೆಯ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿವರಗೆ ವ್ಯಾಸಂಗ ಮಾಡಿದ್ದಾರೆ. ತಂದೆ ಗಂಗಾಧರಯ್ಯ, ತಾಯಿ ಜಯಂತಿ ಇಬ್ಬರೂ ಕೃಷಿಕರು. ಹಗರಿಬೊಮ್ಮನಹಳ್ಳಿ ರಾಷ್ಟೋತ್ಥಾನ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು, ಬಳಿಕ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ.‌

ಎಂಜಿನಿಯರಿಂಗ್ ಮಾಡಿ ಇನ್ಫೋಸಿಸ್ ಅನ್ನೋ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ದರ್ಶನ್ ಅವರಿಗೆ ಕೃಷಿ ಮೇಲೆ ಹೆಚ್ಚು ವ್ಯಾಮೋಹ. ಇದೇ ವ್ಯಾಮೋಹ ಅಮೇರಿಕಾದಲ್ಲಿ ‌ಕೆಲಸ‌ ಮಾಡುತ್ತಿದ್ದ ಅವರನ್ನು ತಾಯ್ನಾಡಿಗೆ ಎಳೆದು ತಂದಿದೆ.

ದರ್ಶನ್ ಚಿಕ್ಕವಯಸ್ಸಿನಲ್ಲೇ ಅಪ್ಪನ ಬಳಿ ಕೃಷಿ ಮಾಡುತ್ತೇನೆ ಎಂದು ಕೇಳಿದಾಗ, ಅಪ್ಪ ಎಲ್ಲರಂತೆಯೇ ‘ಹೋಗು ನಾವು ಮಾಡುತ್ತಿರೋದೇ ಸಾಕು. ನೀನು ಓದಿ ಕೆಲ್ಸ ಹುಡಿಕೋ’ ಎಂದರು. ಅದರಿಂದ‌ ಬೇಸರಗೊಂಡ ದರ್ಶನ್ ಇಂಜಿನಿಯರಿಂಗ್ ಮುಗಿಸಿದ ಬಳಿಕ ನಾನು ಅಪ್ಪನ ಆಸೆಯಂತೆ ಇನ್ಪೋಸಿಸ್ ಕಂಪನಿಯಲ್ಲಿ ಕೆಲಸವನ್ನೂ ಆರಂಭಿಸಿದರು‌. ಕೆಲ ವರ್ಷ ಅಮೆರಿಕಾದಲ್ಲೂ ಕೆಲಸ ಮಾಡಿದೆ. ಇದಾದ ಮೇಲೆ ಏಕೋ..ಏನೋ ತಾಯ್ನಾಡಿಗೆ ಮರಳಬೇಕು. ಅಲ್ಲೇ ಏನಾದರೂ ಮಾಡಬೇಕು ಎಂಬ ಹಂಬಲ ಹೆಚ್ಚಾಯಿತು. ಆಗ ಸೀದಾ ಹಳ್ಳಿಗೆ ಬಂದ ಅವರು 2016ರಲ್ಲಿ ಯುಪಿಎಸ್​ಪಿ ಪರೀಕ್ಷೆ ಆರಂಭಿಸಿದರು.

ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸುತ್ತಲೇ ದನ ಕಾಯೋ ಕೆಲಸ ಆರಂಭಿಸಿದೆ. ನನ್ನದು
ದನದಿಂದ ಧನ’ ಸಂಪಾದಿಸುವ ಹಾದಿ ಕಂಡುಕೊಳ್ಳಬೇಕೆಂಬ ಪ್ರಯತ್ನದಲ್ಲಿ ನಿರತನಾದೆ
ಅಂತಾ ಹೇಳಿಕೊಳ್ಳುತ್ತಾರೆ ಕನ್ನಡದಲ್ಲಿ ಪರೀಕ್ಷೆ ಬರೆದು 594ನೇ ರ್ಯಾಂಕ್​ ಪಡೆದ ಎಚ್.ಜಿ.ದರ್ಶನ್ ಕುಮಾರ್.

ಮೊದಲ ಎರಡು ಬಾರಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದ ದರ್ಶನ್ ಫೇಲಾಗಿದ್ದರು. ಬಳಿಕ ಆಂಗ್ಲ ಭಾಷೆಯಲ್ಲಿ ಉತ್ತರಗಳನ್ನು ಬರೆಯುವ ಬದಲು ನಾನು ಓದಿ ಕಲಿತ ಕನ್ನಡ ಭಾಷೆಯಲ್ಲಿ ಏಕೇ ಪ್ರಯತ್ನ ಮಾಡಬಾರದು ಎಂಬ ಆಲೋಚನೆ ಬಂತು. ಆನಂತರ ಕನ್ನಡದಲ್ಲಿ ಪರೀಕ್ಷೆ ಬರೆದು ತಮ್ಮ‌ ನಾಲ್ಕನೇ ಪ್ರಯತ್ನದಲ್ಲಿ ಪಾಸ್ ಆಗಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಬರೆಯುತ್ತೇನೆ ಎಂಬ ಕಾರಣಕ್ಕೆ ದನ ಕಾಯೋ ಕೆಲಸ‌ ಬಿಟ್ಟಿರಲಿಲ್ಲ ದರ್ಶನ್. ಮೊದಲಿಗೆ ಒಂದೆರಡು ಹಸುಗಳಿಂದ ಕೆಲಸ ಆರಂಭಿಸಿದೆ. ಇಂದು 20 ಹಸುಗಳನ್ನು ಸಾಕುವ ಹಂತಕ್ಕೆ ಬಂದಿದ್ದಾರೆ. ಸರ್ಕಾರದಲ್ಲಿ ಕೃಷಿ ಮಾಡುವವರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ, ಇವು ರೈತರಿಗೆ ತಿಳಿದಿಲ್ಲ. ಸರ್ಕಾರದ ಯೋಜನೆಗಳು ಸಹ ಸಮರ್ಪಕವಾಗಿ ತಲುಪುತ್ತಿಲ್ಲ. ಇರುವ ಜಮೀನಿನಲ್ಲೇ ಮಾಸಿಕ 1 ಲಕ್ಷ ರೂ. ಆದಾಯ ಬರುವಂತೆ ಮಾಡಬೇಕೆಂಬುದು ನನ್ನ ಉದ್ದೇಶವಾಗಿದೆ.

ಸರ್ಕಾರಿ ಸೇವೆ ಆರಂಭಿಸಿದರೂ ಸಹ ನಾನು ನನ್ನ ಕೃಷಿ ಬಿಡುವುದಿಲ್ಲ. ಕೃಷಿ ಮಾಡುವ ಹಂಬಲವಿರುವ ಯುವ ಉತ್ಸಾಹಿಗಳನ್ನು ಒಗ್ಗೂಡಿಸಿ ಕೃಷಿಯಲ್ಲಿ ತೊಡಗಿಸುವಂತೆ ಮಾಡುತ್ತೇನೆ ಅಂತಾರೆ ದರ್ಶನ್.‌ಜೊತೆಗೆ ತಮಗೆ ಯಾವುದೇ ಭಯವಿಲ್ಲದೇ ಕನ್ಮಡದಲ್ಲೇ ಬರೆಯಿರಿ ಅಂತಾ ಸಲಹೆ‌ ಕೊಡುತ್ತಾರೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...