ಕನ್ನಡಿಗರು ತಂದ ‘ಸೂಪರ್’ ಗೆಲುವು – ಇಂದು ಟೀಮ್ ಇಂಡಿಯಾದಲ್ಲಿ ರಾಹುಲ್, ಪಾಂಡೆಯದ್ದೇ ದರ್ಬಾರ್!

Date:

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲೂ ಭಾರತ ಗೆದ್ದು ಬೀಗಿದೆ. 3ನೇ ಮ್ಯಾಚ್​ನಂತೆ ಈ ಪಂದ್ಯ ಕೂಡ ಸೂಪರ್​ ಓವರ್​ಗೆ ಹೋಗಿದ್ದು, ಕನ್ನಡಿಗ ರಾಹುಲ್ ತಮ್ಮ ಮಿಂಚಿನ ಆಟವನ್ನು ಮುಂದುವರೆಸಿ ಭಾರತಕ್ಕೆ ರೋಚಕ ಗೆಲುವನ್ನು ತಂದುಕೊಟ್ಟರು.
ವೆಲ್ಲಿಂಗ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಬದಲು ಆಡಿದ ಯುವ ಆಟಗಾರ ಸಂಜು ಸ್ಯಾಮ್ಸನ್ ವಿಕೆಟನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊಹ್ಲಿ, ಶ್ರೇಯಸ್ ಅಯ್ಯರ್, ಶಿವಂದುಬೆ ನಿರೀಕ್ಷಿತ ಆಟವಾಡದೆ ಕೈ ಕೊಟ್ಟರು. ಉತ್ತಮ ಫಾರ್ಮ್​​ನಲ್ಲಿರೋ ರಾಹುಲ್ ಮತ್ತೊಂದು ಒಳ್ಳೆಯ ಇನ್ನಿಂಗ್ಸ್ ಕಟ್ಟಿದರು. 26 ಬಾಲ್​ಗಳಲ್ಲಿ 39ರನ್ ಬಾರಿಸಿದ್ರು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಇಳಿದ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ (50) ತಂಡಕ್ಕೆ ಆಸರೆಯಾದರು. ಹೀಗೆ ಕನ್ನಡಿಗರಾದ ರಾಹುಲ್ ಮತ್ತು ಮನೀಶ್ ಪಾಂಡೆ ಭಾರತ 165ರನ್​ಗಳ ಸವಾಲಿನ ಮೊತ್ತ ನೀಡಲು ಪ್ರಮುಖ ಕಾರಣರಾದರು.
ನ್ಯೂಜಿಲೆಂಡ್​ ಮನ್ರೋ (64) ಮತ್ತು ಟಿಮ್ ಸೀಫರ್ಟ್ (57) ಆಟದ ನೆರವಿನಿಂದ ಗೆಲುವಿನತ್ತ ದಾಪುಗಾಲು ಇಟ್ಟಿತ್ತು. ಆದರೆ, ಪಂದ್ಯ ರೋಚಕ ಟೈ ಆಯಿತು. ಬಳಿಕ ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ 13ರನ್ ಮಾಡಿತು. ಬಳಿಕ ರಾಹುಲ್ ಮತ್ತು ಕೊಹ್ಲಿ ಬ್ಯಾಟಿಂಗ್​ಗೆ ಇಳಿದ್ರು. ರಾಹುಲ್ ಮೊದಲೆರಡು ಬಾಲ್​ ಗಳಲ್ಲಿ ಕ್ರಮವಾಗಿ ಒಂದು ಸಿಕ್ಸ್, ಒಂದು ಫೋರ್ ಬಾರಿಸಿದರು. ಮೂರನೇ ಎಸೆತವನ್ನೂ ಸಿಕ್ಸರ್ ಗಟ್ಟಲು ಹೋಗಿ ಔಟಾದ್ರು. ಮೂರು ಬಾಲ್​ ಗಳಲ್ಲಿ 4ರನ್ ಬೇಕಿತ್ತು. ಕೊಹ್ಲಿ 4ನೇ ಬಾಲ್​ ನಲ್ಲಿ ಎರಡು ರನ್ ಕದ್ದರು5 5ನೇ ಬಾಲ್​ ಅನ್ನು ಬೌಂಡರಿಗಟ್ಟಿದರು. ಅಲ್ಲಿಗೆ ಭಾರತ ಎರಡನೇ ಸತತ ಸೂಪರ್ ಓವರ್ ಗೆಲುವು ಪಡೆಯಿತು. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....