ಟೀಮ್ ಇಂಡಿಯಾದ ಸ್ಟಾರ್ ಆಟಗಾರ.. ಯಾವ ಸ್ಥಾನದಲ್ಲಿ ಬೇಕಾದ್ರು ಬ್ಯಾಟ್ ಬೀಸಬಲ್ಲ ನಿಸ್ಸೀಮ.. ವಿಕೆಟ್ ಕೀಪಿಂಗ್ ಕೂಡ ಮಾಡಬಲ್ಲ ಆಪತ್ಬಾಂದವ … ಇವರೇ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್..!
ರಾಹುಲ್ ಎನ್ನುವ ಹೆಸರಿಗೂ ವಿಶ್ವ ಕ್ರಿಕೆಟ್ ಅದರಲ್ಲೂ ಟೀಮ್ ಇಂಡಿಯಾಕ್ಕೂ ಅದೆಂಥಾ ನಂಟಿದೆಯೋ.. ಎಲ್ಲಕ್ಕಿಂತ ಮುಖ್ಯವಾಗಿ ಆ ಸ್ಟಾರ್ಗಳು ಕನ್ನಡಿಗರು ಎನ್ನುವುದೇ ಹೆಮ್ಮೆ..! ಕರ್ನಾಟಕದ ರಾಹುಲ್ ದ್ರಾವಿಡ್ ಎಂಬ ಕ್ರಿಕೆಟ್ ದಿಗ್ಗಜ ಇಡೀ ವಿಶ್ವ ಕ್ರಿಕೆಟನ್ನು ಆಳಿದ್ದು, ವಿಶ್ವ ಶ್ರೇಷ್ಠ ಬೌಲರ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು, ಟೀಮ್ ಇಂಡಿಯಾಕ್ಕೆ ಬೇಕೆಂದಿದ್ದೆಲ್ಲಾ ಧಾರೆ ಎರೆದಿದ್ದು ಈಗ ಇತಿಹಾಸ.. ವಿಶೇಷ ಎಂದರೆ ರಾಹುಲ್ ದ್ರಾವಿಡ್ ನಿವೃತ್ತಿ ಬಳಿಕ ಮತ್ತೊಬ್ಬ ರಾಹುಲ್ ಟೀಮ್ ಇಂಡಿಯಾದಲ್ಲಿ ನಿಧಾನಕ್ಕೆ ನೆಲೆ ನಿಲ್ಲುತ್ತಿದ್ದಾರೆ. ಇನ್ನೊಂದಿಷ್ಟು ಪರಿಶ್ರಮ ಹಾಕಿದ್ರೆ ಯಾರೂ ಕೂಡ ತಮ್ಮನ್ನು ರೀಪ್ಲೇಸ್ ಮಾಡಲಾಗದ ಎತ್ತರಕ್ಕೆ ಅವರು ಬೆಳೆಯುತ್ತಾರೆ..! ಅವರೇ ಕೆ.ಎಲ್ ರಾಹುಲ್…
ಅದೆಲ್ಲಾ ಬದಿಗಿರಲಿ.. ಈ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ಗೆ ಈಗ ನಾಯಕನ ಪಟ್ಟ ಒಲಿದು ಬರುತ್ತಿದೆ..! ತಂಡದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಅರೆ ಏನಿದು ವಿರಾಟ್ ಕೊಹ್ಲಿ ಇರುವಾಗ ರಾಹುಲ್ ಗೆ ಪಟ್ಟ ಕಟ್ಟಿತ್ತಾರಾ? ಟೀಮ್ ಇಂಡಿಯಾದಲ್ಲಿ ಅದೆಂಥಾ ಬದಲಾವಣೆ ಆಗುತ್ತದೆ ಎಂದು ಕೇಳ್ತಿದ್ದಾರೆ..
ರಾಹುಲ್ ಮುಂದೆ ಟೀಮ್ ಇಂಡಿಯಾದ ನಾಯಕನಾಗಬಹುದು.. ಆದರೆ. ಈಗ ಐಪಿಎಲ್ನಲ್ಲಿ ಪಂಜಾಬ್ ತಂಡದ ನಾಯಕನಾಗುವ ಯೋಗ ಕೂಡಿ ಬರುತ್ತಿದೆ.
ಯೆಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಆರ್ ಅಶ್ವಿನ್ ಮುನ್ನಡೆಸುತ್ತಿದ್ದು, ಅವರ ಬದಲಿಗೆ ಕೆ.ಎಲ್ ರಾಹುಲ್ಗೆ ನಾಯಕನ ಪಟ್ಟ ನೀಡುವ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯೋಚನೆ ಮಾಡುತ್ತಿದ್ದು, ಈ ಬಾರಿಯ ಐಪಿಎಲ್ನಲ್ಲಿ ರಾಹುಲ್ ಪಂಜಾಬ್ ಅನ್ನು ಮುನ್ನಡೆಸುವ ಎಲ್ಲಾ ಸಾಧ್ಯತೆಗಳಿವೆ.. ಆ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.