ಕನ್ನಡಿಗ ಮಯಾಂಕ್ ಅಗರ್​ ವಾಲ್​ ಡಬಲ್ ಸೆಂಚುರಿ..!

Date:

ಕನ್ನಡಿಗ ಮಯಾಂಕ್ ಅಗರ್​ವಾಲ್​ ದ್ವಿಶತಕ ಸಿಡಿಸಿದ್ದಾರೆ. ‘ವಾಲ್’ ಆಟಕ್ಕೆ ದಕ್ಷಿಣ ಆಫ್ರಿಕಾ ಆಟಗಾರರು ಬಳಲಿ ಬೆಂಡಾಗಿದ್ದಾರೆ. ವಿಶಾಕಪಟ್ಟಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಮಯಾಂಕ್ ಅಗರ್​ವಾಲ್​ ದ್ವಿಶತಕ ಸಿಡಿಸಿದ್ದಾರೆ.


ಮೊದಲ ದಿನವಾದ ನಿನ್ನೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ ವಾಲ್ ವಿಕೆಟ್ ನಷ್ಟವಿಲ್ಲದೆ 202ರನ್ ಗಳ ಜೊತೆಯಾಟ ಆಡಿದ್ದರು. ಇಡೀ ದಿನ ಒಂದೇ ಒಂದು ವಿಕೆಟ್ ತೆಗೆಯಲು ಆಗದೆ ಹರಿಣಗಳು ಪರದಾಡಿದ್ದರು. ಇಂದು ಸಹ ರೋಹಿತ್ ಶರ್ಮಾ ಮತ್ತು ಅಗರ್ ವಾಲ್ ತಮ್ಮ ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ 317ರನ್ ಜೊತೆಯಾಟವಾಡಿತು.
ರೋಹಿತ್ ಶರ್ಮಾ ಡಬಲ್ ಸೆಂಚುರಿ ಮಾಡುವ ನಿರೀಕ್ಷೆ ಇತ್ತು. ಆದರೆ ಅವರು 176ರನ್​ಗೆ ಔಟಾದರು. ಚೇತೇಶ್ವರ್ ಪೂಜಾರ (6), ಕ್ಯಾಪ್ಟನ್ ಕೊಹ್ಲಿ (20) ಬೇಗ ಪೆವಿಲಿಯನ್ ಸೇರಿದರು. ಆದರೆ, ಕನ್ನಡಿಗ ಮಯಾಂಕ್ ಅಗರ್ ವಾಲ್ ಮಾತ್ರ ತಾಳ್ಮೆಯ ಆಟವಾಡಿ ದ್ವಿಶತಕ ಸಿಡಿಸಿದ್ದಾರೆ. ಅಗರ್​ವಾಲ್ ಸಿಡಿಸಿದ ಮೊದಲ ಟೆಸ್ಟ್​ ಶತಕ ಹಾಗೂ ದ್ವಿಶತಕವೂ ಇದಾಗಿದೆ. 371 ಎಸೆತಗಳಲ್ಲಿ 215ರನ್ ಮಾಡಿ ಔಟಾದರು.. ಇವರ ಇನ್ನಿಂಗ್ಸ್​​ನಲ್ಲಿ 23 ಬೌಂಡರಿ 6 ಸಿಕ್ಸರ್​​ಗಳು ಇತ್ತು

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...